ಬ್ಲೂಫಿಲ್ಮ್ ಕೂಡ ಡ್ರಗ್ಸ್‌ನಂತೆಯೆ ವ್ಯಸನ; ಬ್ಯೂಫಿಲ್ಮ್ ನೋಡುವವರು ಡಿಸಿಎಂ ಆಗಿದ್ದಾರೆ: ಸಾರಾ ಮಹೇಶ್‌

ಸ್ಯಾಂಡಲ್‌ವುಡ್‌ ಅಂಗಳದಿಂದ ಶುರುವಾದ ಡ್ರಗ್ಸ್‌ ಮಾಫಿಯಾದ ಚರ್ಚೆ ಈಗ ರಾಜಕೀಯ ಪಡಸಾಲೆಗೆ ಬಂದು ನಿಂತಿದೆ. ಇದರ ಸುತ್ತ ರಾಜಕೀಯ ಕೆಸರಾಟಗಳೂ ನಡೆಯುತ್ತಿದೆ. ಈ ನಡುವೆ ಜೆಡಿಎಸ್ ಶಾಸಕ ಸಾರಾ ಮಹೇಶ್ ಅವರು, ಬ್ಲೂಫಿಲ್ಮ್ ಕೂಡ ಡ್ರಗ್ಸ್‌ನಂತೆಯೆ ವ್ಯಸನ; ಬ್ಯೂಫಿಲ್ಮ್ ನೋಡುವವರು ಡಿಸಿಎಂ ಆಗಿರುವುದು ಜನರಿಗೆ ನಗು ತರಿಸಿದೆ ಎಂದು ಉಪಮುಖ್ಯಂತ್ರಿ ಲಕ್ಷಣ ಸವದಿ ಅವರ ಕಾಲೆಳೆದಿದ್ದಾರೆ.

2012 ರಲ್ಲಿ ಲಕ್ಷ್ಮಣ ಸವದಿ, ಕೃಷ್ಣ ಜೆ ಪಾಲೇಮಾರ್ ಮತ್ತು ಸಿಸಿ ಪಾಟೀಲ್ ಮೇಲೆ ವಿಧಾನಸಭಾ ಅಧಿವೇಶನ ನಡೆಯುತ್ತಿರುವಾಗ ಬ್ಲೂ ಫಿಲ್ಮ್ ನೋಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಡ್ರಗ್ಸ್ ಜಾಲ ಕ್ರಿಯಾಶೀಲರಾಗಿರುವುದರ ಬಗ್ಗೆ ರಾಜ್ಯದಲ್ಲಿ ವರದಿಯಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ‘ಮೈತ್ರಿ ಸರ್ಕಾರವನ್ನು ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು’ ಎಂದು ಹೇಳಿದ್ದರು.

ಇದಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, “ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿದ್ದೇ ಡ್ರಗ್ಸ್‌ ದಂಧೆಕೋರರು ಎಂಬ ಕುಮಾರಸ್ವಾಮಿ ಅವರ ಹೇಳಿಕೆ ನೋಡಿ ನಗು ಬಂತು. ಅವರು ಹೇಳಿದ ಮಾತು ಕುಣಿಯಲು ಬಾರದವರು ನೆಲ ಡೊಂಕು ಎನ್ನುವಂತಿದೆ” ಎಂದು ಪ್ರತಿಕ್ರಿಯಿಸಿದ್ದರು.

ಇದಕ್ಕೆ ವ್ಯಂಗ್ಯವಾಡಿರುವ ಜೆಡಿಎಸ್‌ ಶಾಸಕ ಸಾ. ರಾ. ಮಹೇಶ್, “‌ಡ್ರಗ್ಸ್‌ ದಂದೆಕೋರರೇ ಸರ್ಕಾರ ಬೀಳಿಸಿದರು ಎಂಬ ಮಾಜಿ ಸಿಎಂ ಎಚ್‌ಡಿಕೆ ಅವರ ಆರೋಪ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ನಗು ತರಿಸಿತ್ತಂತೆ. ಬ್ಲೂ ಫಿಲ್ಮ್ ನೋಡುವ ಅಡಿಕ್ಷನ್‌ (ವ್ಯಸನ) ಇರುವವರು ಈ ರಾಜ್ಯದ ಡಿಸಿಎಂ ಆಗುತ್ತಿದ್ದಾರೆ ಎಂದಾಗ ರಾಜ್ಯದ ಜನರಿಗೇ ನಗು, ದುಃಖ ಬಂದಿತ್ತು. ಅಸಲಿಗೆ ಎಲ್ಲವೂ ವ್ಯಸನವೇ. ಡ್ರಗ್ಸ್‌ ಆದರೂ, ಬ್ಲೂ ಫಿಲ್ಮ್ ಆದರೂ…” ಎಂದು ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ ಡ್ರಗ್ಸ್ ಜಾಲದಲ್ಲಿ 13 ಕ್ವಿಂಟಾಲ್ ಗಾಂಜಾವನ್ನು ಬೆಂಗಳೂರು ಪೊಲೀಸರು ಕಲಬುರ್ಗಿಯಲ್ಲಿ ವಶಪಡಿಸಿದ್ದು, ಕಾಂಗ್ರೇಸ್ ಬಂಧಿತ ಆರೋಪಿ ಚಂದ್ರಕಾಂತ್‌ ಬಿಜೆಪಿಯ ಕಾರ್ಯಕರ್ತ. ಡ್ರಗ್ಸ್, ಗಾಂಜಾ ಮುಂತಾದ ಅಕ್ರಮ ಚಟುವಟಿಕೆಗಳಿಗೆ ಬಿಜೆಪಿ ತಾಣವಾಗಿದೆ ಎಂದು ಆರೋಪಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್, “ಕಲಬುರಗಿಯಲ್ಲಿ ಗಾಂಜಾ ವಶ ಪ್ರಕರಣದ ಆರೋಪಿ ಚಂದ್ರಕಾಂತನಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಕಳೆದ ವರ್ಷ ಆತ ಸ್ವಯಂಪ್ರೇರಿವಾಗಿ ಪಕ್ಷದ ಪರ ಪ್ರಚಾರ ಮಾಡಿದ್ದರೆ ಹೊರತು ಪಕ್ಷದ ಸದಸ್ಯತ್ವವನ್ನೇನೂ ಪಡೆದಿಲ್ಲ ಹಾಗೂ ಪದಾಧಿಕಾರಿಯಲ್ಲ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಉದ್ದವ್ ಠಾಕ್ರೆಯ ವ್ಯಂಗ್ಯ ಕಾರ್ಟೂನ್‌ ಶೇರ್‌ ಮಾಡಿದ್ದಕ್ಕಾಗಿ ನೌಕಾಪಡೆಯ ನಿವೃತ್ತ ಅಧಿಕಾರಿಯ ಮೇಲೆ ಹಲ್ಲೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights