ಲಡಾಖ್‌ ಘರ್ಷಣೆ: ಚೀನಾವನ್ನು ಎದುರಿಸಲು ಭಾರತದ ತಯಾರಿಗಳೇನು?

ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಚೀನಾದೊಂದಿಗಿನ ಸಂಘರ್ಷ ಉದ್ವಿಗ್ನತೆ  ಪಡೆದುಕೊಂಡಿದೆ. ಹಾಗಾಗಿ ಭಾರತೀಯ ವಾಯುಪಡೆಯು (ಐಎಎಫ್) ಹೆಚ್ಚಿನ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಭಾರತದ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್‌ ಭದೌರಿಯಾ ಅವರು ಎರಡು ದಿನಗಳ ಕಾಲ ಲೇಹ್ ಮತ್ತು ಶ್ರೀನಗರಕ್ಕೆ ಭೇಟಿ ನೀಡಿ ವಾಯುಪಡೆಯ ಸನ್ನದತೆಯನ್ನು ಪರಿಶೀಲನೆ ನಡೆಸಿದ್ದಾರೆ.

ವಾಯುಪಡೆಯು ಚೀನಾದೊಂದಿಗಿನ 3,5000 ಕಿ.ಮೀ ಗಡಿ ಭಾಗದಲ್ಲಿ ಹಿಚ್ಚಿನ ಎಚ್ಚರಿಕೆಯನ್ನು ವಹಿಸಿದ್ದು, ಉನ್ನತ ಮಟ್ಟದ ಸಿದ್ದತೆಗಳನ್ನು ನಡೆಸುತ್ತಿದೆ. ಹಾಗಾಗಿ ಫೈಟರ್ ಜೆಟ್‌ ಮತ್ತು ದಾಳಿ ಹೆಲಿಕಾಪ್ಟರ್‌ಗಳಂತಹ ಅಸ್ತ್ರಗಳನ್ನು ಗಡಿ ಭಾಗಕ್ಕೆ ಸಾಗಿಸಿದೆ.

ಐಎಎಫ್ ಈಗಾಗಲೇ ತನ್ನ ಮುಂಚೂಣಿಯ Sukhoi 30 MKI, Jaguar, Mirage 2000 ವಿಮಾನಗಳು ಮತ್ತು ದಾಳಿ ಹೆಲಿಕಾಪ್ಟರ್‌ಗಳನ್ನು ಕಳೆದ ಮೂರು ದಿನಗಳಲ್ಲಿ ಲೇಹ್ ಮತ್ತು ಶ್ರೀನಗರ ಸೇರಿದಂತೆ ಹಲವಾರು ಪ್ರಮುಖ ವಾಯುನೆಲೆಗಳಿಗೆ ಸ್ಥಳಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.

ಗಾಲ್ವಾನ್‌ನಲ್ಲಿ ಸೋಮವಾರ ಸಂಜೆ ನಡೆದ ಘರ್ಷಣೆಯ ನಂತರ ಚೀನಾದ ಮಿಲಿಟರಿ ಈ ಪ್ರದೇಶದಲ್ಲಿ ತನ್ನ ವೈಮಾನಿಕ ಚಟುವಟಿಕೆಗಳನ್ನು ಹೆಚ್ಚಿಸಿದ ನಂತರ ಪೂರ್ವ ಲಡಾಖ್ ಪ್ರದೇಶದಲ್ಲಿ ಐಎಎಫ್ ಜೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿದೆ ಎಂದು ತಿಳಿದುಬಂದಿದೆ.

ಚೀನಾದ ಚಟುವಟಿಕೆಗಳ ಬಗ್ಗೆ ಎನ್‌ಡಿ ಟಿವಿ ಮಾಡಿರುವ ವರದಿಯಲ್ಲಿ, ಟಿಬೆಟ್‌ನಲ್ಲಿ ಹಲವಾರು ಚೀನೀ ವಾಯುಪಡೆಯ ನೆಲೆಗಳಿವೆ, ಅದು ಭಾರತಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಉಲ್ಲೇಖಿಸಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ವಾಯುನೆಲೆಯ ಸ್ಕಾರ್ದುದಲ್ಲಿನ ಪರಿಸ್ಥಿತಿಯನ್ನು ಹಾಗೂ ಇದು ಚೀನಾಕ್ಕೆ ಹೇಗೆ ನೆರವಾಗಬಹುದು ಎಂದು ಐಎಎಫ್ ನಿಕಟವಾಗಿ ಗಮನಿಸುತ್ತಿದೆ. ಆದಾಗ್ಯೂ, ಐಎಎಫ್ ಇನ್ನೂ ಅದರ ಅಸ್ತಿತ್ವವನ್ನು ದೃಢೀಕರಿಸಿಲ್ಲ.

ಚೀನಾದ ನೌಕಾಪಡೆಯು ನಿಯಮಿತವಾಗಿ ಆಕ್ರಮಣ ಮಾಡುತ್ತಿರುವ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಎಚ್ಚರಿಕೆಯ ಮಟ್ಟವನ್ನು ಹೆಚ್ಚಿಸಲು ಭಾರತೀಯ ನೌಕಾಪಡೆಗೆ ಸೂಚಿಸಲಾಗಿದೆ.

ಅರುಣಾಚಲ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಲಡಾಖ್‌ನಲ್ಲಿನ ಎಲ್‌ಎಸಿಯ ಉದ್ದಕ್ಕೂ ಸೇನೆಯು ಈಗಾಗಲೇ ತನ್ನ ಎಲ್ಲಾ ಪ್ರಮುಖ ಮುಂಚೂಣಿ ನೆಲೆಗಳಲ್ಲಿ ಹೆಚ್ಚುವರಿ ಪಡೆ ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

ಸಿಕ್ಕಿಂ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ತನ್ನ ನೆಲೆಗಳಿಗೆ ಐಎಎಫ್ ಹೆಚ್ಚುವರಿ ವಾಯುಪಡೆಗಳನ್ನು ಕಳುಹಿಸಿದೆ.

ಹೆಚ್ಚಾಗಿ ಚೀನೀ ವಾಯುನೆಲೆಗಳನ್ನು ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾಗಿರುವುದರಿಂದ, ಹೆಚ್ಚಿನ ತೂಕ ಮತ್ತು ಗರಿಷ್ಟ ಇಂಧನವನ್ನು ಸಾಗಿಸುವಾಗ ನಿರ್ಬಂಧಗಳು ಸೇರಿದಂತೆ ಅನೇಕ ಕಾರ್ಯಾಚರಣೆಯ ತೊಂದರೆಗಳನ್ನು ಎದುರಿಸಬೇಕಾಗಿದೆ. ಆದರೆ, ಭಾರತವು ಅಂತಹ ಸಮಸ್ಯೆಗಳನ್ನು ಎದುರಿಸುವುದಿಲ್ಲ ಏಕೆಂದರೆ ಭಾರತದ ವಾಯುನೆಲೆಗಳು ಹೆಚ್ಚಾಗಿ ಬರೇಲಿ, ಅಡಾಂಪುರ್ ಹಾಗೂ ಜಮ್ಮು ಮತ್ತು ಕಾಶ್ಮೀರ ನೆಲೆಗಳಿಂದ ಕಾರ್ಯನಿರ್ವಹಿಸುತ್ತದೆ.

1967 ರಲ್ಲಿ ನಾಥುಲಾದಲ್ಲಿ ನಡೆದ ಘರ್ಷಣೆಯಲ್ಲಿ ಭಾರತವು ಸುಮಾರು 80 ಸೈನಿಕರನ್ನು ಕಳೆದುಕೊಂಡಿತು. ನಂತರ ನಡೆದ ಪ್ರತಿದಾಳಿ ನಡೆಸಿದಾಗ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ ಸಾವಿನ ಸಂಖ್ಯೆ 300 ಕ್ಕಿಂತ ಹೆಚ್ಚಾಗಿತ್ತು ಎಂದು ಹೇಳಲಾಗಿದೆ.

ಗಾಲ್ವಾನ್‌ನಲ್ಲಿರುವ ಎಲ್‌ಎಸಿಯ ಭಾರತೀಯ ಭಾಗದಲ್ಲಿ ಚೀನಾ ಕಣ್ಗಾವಲು ಕೇಂದ್ರವನ್ನು ನಿರ್ಮಿಸಲು ಮುಂದಾದಾಗ ಭಾರತೀಯ ಸೈನಿಕರು ಅದರನ್ನು ವಿರೋಧಿಸಿದ್ದರು. ಈ ಸಂದರ್ಭದಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರ ಮೇಲೆ ಕ್ರೂರ ದಾಳಿ ನಡೆಸಲು ಕಲ್ಲುಗಳು, ಉಗುರುಗಳಿಂದ ಕೂಡಿದ ಕೋಲುಗಳು, ಕಬ್ಬಿಣದ ಸರಳುಗಳು ಬಳಸಿದ್ದರು.

ಮೇ 5 ರಿಂದ ಗಾಲ್ವಾನ್ ಮತ್ತು ಪೂರ್ವ ಲಡಾಕ್‌ನ ಹಲವಾರು ಪ್ರದೇಶಗಳಲ್ಲಿ ಉಭಯ ಸೈನ್ಯಗಳು ಘರ್ಷಣೆಯಲ್ಲಿ ತೊಡಗಿವೆ. ಎರಡೂ ಕಡೆಯವರು ಪಂಗೊಂಗ್ ತ್ಸೊ ದಡದಲ್ಲಿ ಘರ್ಷಣೆ ನಡೆಸಿದ್ದಾರೆ. ಸೇನಾ ನಿಯೋಜನೆ ಪ್ರಾರಂಭವಾದ ನಂತರ, ಪಾಂಗೊಂಗ್ ತ್ಸೊ, ಗಾಲ್ವಾನ್ ವ್ಯಾಲಿ, ಡೆಮ್ಚಾಕ್ ಮತ್ತು ದೌಲತ್ ಬೇಗ್ ಓಲ್ಡಿ ಎಲ್ಲಾ ವಿವಾದಿತ ಪ್ರದೇಶಗಳಲ್ಲಿ ಚೀನಾದ ಸೈನ್ಯದ ಆಕ್ರಮಣಕಾರಿ ಭಂಗಿಗಳನ್ನು ಎದುರಿಸಲು ಭಾರತೀಯ ಪಡೆಗಳು ದೃಢವಾದ ಮಾರ್ಗವನ್ನು ಅನುಸರಿಸುತ್ತವೆ ಎಂದು ಭಾರತೀಯ ಮಿಲಿಟರಿ ನಿರ್ಧರಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ ಲಡಾಖ್‌ ಘರ್ಷಣೆ: ಚೀನಾವನ್ನು ಎದುರಿಸಲು ಭಾರತದ ತಯಾರಿಗಳೇನು?

  • August 31, 2020 at 12:27 pm
    Permalink

    Valuable information. Fortunate me I discovered your site by accident, and
    I’m shocked why this accident did not took place earlier!
    I bookmarked it.

    Reply

Leave a Reply

Your email address will not be published.

Verified by MonsterInsights