ತಮಿಳುನಾಡಿನ ಉದ್ಯಮಿಯಿಂದ ದಿವಂಗತ ಹೆಂಡತಿಯ 6 ಅಡಿ ಪ್ರತಿಮೆ ಸ್ಥಾಪನೆ..!
ಮಧುರೈನ ಉದ್ಯಮಿ ಆಗಿರುವ ಸೇತುರಾಮನ್ ಅವರು ತಮ್ಮ ಪತ್ನಿ ಪಿಚೈಮಾನಿಯಮ್ಮಲ್ ಅವರ ಪ್ರತಿಮೆಯನ್ನು ತಮ್ಮ ನಿವಾಸದೊಳಗೆ ಅನಾವರಣಗೊಳಿಸಿದ್ದಾರೆ.
ಹೌದು… ಸೇತುರಾಮನ್ ತನ್ನ ದಿವಂಗತ ಹೆಂಡತಿ ರೂಪದ ಆರು ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಗೌರವ ಸಲ್ಲಿಸಿದರು. ಆಕೆಯ ನಿಧನದ 30 ದಿನಗಳ ನಂತರ ಅವಳಷ್ಟೇ ಗಾತ್ರದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಇದು ಅವಳ ಮೇಲಿನ ಪ್ರೀತಿಯ ಅಭಿವ್ಯಕ್ತಿಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಪ್ರತಿಮೆಯು ಪಿಟ್‌ಚೈಮಾನಿಯಮ್ಮಲ್‌ನ ಪ್ರತಿರೂಪವಾಗಿದ್ದು, ಕುರ್ಚಿಯ ಮೇಲೆ ಕುಳಿತಿದೆ ಮತ್ತು ಆಭರಣಗಳೊಂದಿಗೆ ಪ್ರಕಾಶಮಾನವಾದ ಹಸಿರು ಮತ್ತು ನೀಲಿ ಸೀರೆಯಲ್ಲಿ ಅಲಂಕರಿಸಲ್ಪಟ್ಟಿದೆ. ಎಎನ್‌ಐ ಪ್ರಕಾರ, ಹೆಂಡತಿಯ ಪ್ರತಿಮೆಯನ್ನು ಫೈಬರ್, ರಬ್ಬರ್ ಮತ್ತು ವಿಶೇಷ ಬಣ್ಣಗಳಿಂದ ತಯಾರಿಸಲಾಗಿದ್ದು, ಅದು ಹೆಚ್ಚು ಕಾಲ ಉಳಿಯುತ್ತದೆ.
ಚಿತ್ರಗಳನ್ನು ಇಲ್ಲಿ ನೋಡಿ:
Tamil Nadu: Sethuraman, a businessman from Madurai unveiled a statue of his wife,Pitchaimaniammal,at his home after 30 days of her demise.
He says,"I lost my wife recently but when I look at this statue I can connect with her.Fibre,rubber & special colours were used to make it" pic.twitter.com/l5iykI8UCw
— ANI (@ANI) September 11, 2020
ಆ ವ್ಯಕ್ತಿ ಮಾತನಾಡಿ, “ನನ್ನ ಹೆಂಡತಿ ನನಗೆ ತುಂಬಾ ಪ್ರಿಯಳಾಗಿದ್ದಳು, ಅವಳು 30 ದಿನಗಳ ಹಿಂದೆಯೇ ತೀರಿಕೊಂಡ ನಂತರ ನಾನು ಅವಳನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತಿದ್ದೆ. ನಾನು ಈ ಪ್ರತಿಮೆಯನ್ನು ನಮ್ಮ ನಿವಾಸದಲ್ಲಿ ಇರಿಸಿದೆ. ಅವಳೊಂದಿಗೆ ಯಾವಾಗಲೂ ಇರಲು. ಈ ಪ್ರತಿಮೆಯು ಫೈಬರ್‌ನಿಂದ ಮಾಡಲ್ಪಟ್ಟಿದೆ. ರಬ್ಬರ್ ಮತ್ತು ಇತರ ವಸ್ತುಗಳನ್ನು ಬೆರೆಸಲ್ಪಟ್ಟಿದೆ. ಅದು ಬಲವಾದ ಮತ್ತು ಹೆಚ್ಚು ಕಾಲ ಉಳಿಯುವಂತೆ ಮಾಡಲಾಗಿದೆ. ಈ ಪ್ರತಿಮೆಯ ಮೇಲೆ ಬಳಸುವ ಬಣ್ಣಗಳು ಕನಿಷ್ಠ 50 ವರ್ಷಗಳವರೆಗೆ ಇರುತ್ತದೆ ” ಎಂದಿದ್ದಾರೆ.
“ನಾನು ಇತ್ತೀಚೆಗೆ ನನ್ನ ಹೆಂಡತಿಯನ್ನು ಕಳೆದುಕೊಂಡಿದ್ದೇನೆ ಆದರೆ ನಾನು ಈ ಪ್ರತಿಮೆಯನ್ನು ನೋಡಿದಾಗ, ನಾನು ಅವಳೊಂದಿಗೆ ಸಂಪರ್ಕ ಸಾಧಿಸಬಹುದು” ಎಂದು ಅವರು ಹೇಳಿದರು.
ಇಂತಹ ಘಟನೆ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಒಂದು ತಿಂಗಳ ಹಿಂದೆ, ಕರ್ನಾಟಕದ ಒಬ್ಬ ಕೈಗಾರಿಕೋದ್ಯಮಿ ತನ್ನ ದಿವಂಗತ ಹೆಂಡತಿಯನ್ನು ಇದೇ ರೀತಿ ಗೌರವಿಸಿದ್ದನು.
ಚಿತ್ರಗಳನ್ನು ಇಲ್ಲಿ ನೋಡಿ:
#Karnataka: Industrialist Shrinivas Gupta, celebrated house warming function of his new house in Koppal with his wife Madhavi’s silicon wax statue, who died in a car accident in July 2017.
Statue was built inside Madhavi's dream house with the help of architect Ranghannanavar pic.twitter.com/YYjwmmDUtc
— ANI (@ANI) August 11, 2020