ಅಪ್ಪರ್ ಕೃಷ್ಣ ಯೋಜನೆಗೆ 2500 ಕೋಟಿ ರೂ ಹೆಚ್ಚುವರಿ ಅನುದಾನ ನೀಡಲು ರಾಜ್ಯ ಸರ್ಕಾರ ನಿರ್ಧಾರ!

ಕೃಷ್ಣಾ ನದಿಯ ಅಪ್ಪರ್ ಕೃಷ್ಣ ಯೋಜನೆ (ಯುಕೆಪಿ)ಯ ಭೂಸ್ವಾಧೀನ ಪ್ರಕ್ರಿಯೆಗಾಗಿ 2500 ಕೋಟಿ ರೂ ಹೆಚ್ಚುವರಿ ಅನುದಾನ ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ.

ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದ್ದು, ಗ್ರಾಮಸ್ಥರ ಪುನರ್ವಸತಿಗಾಗಿ ಈ ವರ್ಷ 2,500 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ತಿಳಿಸಿದ್ದಾರೆ.

ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್ (ಕೆಬಿಜೆಎನ್ಎಲ್)ನ ಎಲ್ಲಾ ಕಚೇರಿಗಳನ್ನು ಬೆಂಗಳೂರಿನಿಂದ ಆಲಮಟ್ಟಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆಬಿಜೆಎನ್ಎಕ್‌ಗೆ ಸಂಬಂಧಿಸಿದ ಎಕ್ಕಾ ಕಚೇರಿಗಳನ್ನು ಆಲಮಟ್ಟಿಗೆ ಸ್ಥಳಾಂತರಿಸುವುದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸುವುದು, ಕಾನೂನು ತಜ್ಞರನ್ನು ಬೆಂಗಳೂರಿನ ಪ್ರಧಾನ ಕಚೇರಿಯಿಂದ ಬಾಗಲಕೋಟೆಯ ಯುಕೆಪಿ ಕಚೇರಿಗೆ ವರ್ಗಾಯಿಸುವುದು ಮತ್ತು ಭೂಸ್ವಾಧೀನ ಪ್ರಕರಣಗಳನ್ನು ನಿರ್ವಹಿಸಲು ವಿಶೇಷ ಸರ್ಕಾರಿ ವಕೀಲರನ್ನು ನೇಮಿಸುವುದು, ಯುಕೆಪಿ I ಮತ್ತು II ಹಂತಗಳಲ್ಲಿ ನೀರು ಪಡೆಯದ ರೈತರಿಗೆ ನೀರನ್ನು ತಲುಪಿಸಲು ಸರ್ಕಾರವು ಕಾಲುವೆಗಳನ್ನು ಮರುರೂಪಿಸುತ್ತದೆ ಮತ್ತು ಆಧುನೀಕರಿಸುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಎರಡು ಹಂತಗಳ ನಿರಾವರಿ ಯೋಜನೆಯು 6.22 ಲಕ್ಷ ಹೆಕ್ಟೇರ್‌ಗಳಿಗೆ ನೀರುಣಿಸುವ ಗುರಿಯನ್ನು ಹೊಂದಿದ್ದವು. ಆದರೆ ಗಡಿ ಭಾಗದ ರೈತರಿಗೆ ಇನ್ನೂ ನೀರು ಸಿಕ್ಕಿಲ್ಲ. ಮೂರನೇ ಹಂತವನ್ನು ಪೂರ್ಣಗೊಳಿಸಿದ ನಂತರ, ಇನ್ನೂ 5.94 ಲಕ್ಷ ಹೆಕ್ಟೇರ್‌ಗಳಿಗೆ ನೀರುಣಿಸಲಾಗುತ್ತದೆ. ಈ ಯೋಜನೆಗೆ ಬಜೆಟ್ ನಲ್ಲಿ, 1,200 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ಅದರಲ್ಲಿ 900 ಕೋಟಿ ರೂ. ನಿರ್ದಿಷ್ಟ ಕೆಲಸಕ್ಕಾಗಿ ಖರ್ಚಾಗಿದೆ. ಈಗ 2,500 ಕೋಟಿ ರೂ.ಗಳನ್ನು ನೀಡುವುದರಿಂದ ಯೋಜನೆಗೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಹಾನಗಲ್ ಬೈ ಎಲೆಕ್ಷನ್: ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ರಾಜಶೇಖರ ಕಟ್ಟೇಗೌಡ ಹೆಸರು ಮುನ್ನೆಲೆಗೆ!

ಯೋಜನೆಗಾಗಿ 20 ಹಳ್ಳಿಗಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಯೋಜನೆಯಿಂದ ಈ ಇಡೀ ಭೂಮಿ ಸಂಪೂರ್ಣವಾಗಿ ಮುಳುಗುತ್ತದೆ. ಇನ್ನೂ 188 ಹಳ್ಳಿಗಳಲ್ಲಿ ಕೆಲವು ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಇಡೀ ಪ್ರಕ್ರಿಯೆಗೆ ರೂ 2,900 ಕೋಟಿ ಅಗತ್ಯವಿದೆ.

ಈಗ ಉಳಿದಿರುವ 500 ಕೋಟಿ ರೂ. ಮತ್ತು ಭೂಸ್ವಾಧೀನ ಪುನರ್‌ವಸತಿಗಾಗಿ ನೀಡುವ ಹೆಚ್ಚುವರಿ 2,500 ಕೋಟಿ ರೂ.ಗಳಿಂದ ಯೋಜನೆಗೆ ವೇಗ ಸಿಗಲಿದೆ. ಯುಕೆಪಿ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ ಮತ್ತು ಈ ಸರ್ಕಾರದ ಅವಧಿಯಲ್ಲಿ ಯೋಜನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗುವುದು ಎಂದು ಸಚಿವ ಕಾರಜೋಳ ವಿಧಾನಸಭಾ ಅಧಿವೇಶನದಲ್ಲಿ ಹೇಳಿದ್ದರು.

ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಪ್ರಯತ್ನಗಳನ್ನು ಮಾಡುತ್ತಿರುವಾಗ, ಭೂಸ್ವಾಧೀನವು ಒಂದು ಸವಾಲಾಗಿದೆ. ಏಕೆಂದರೆ ಯೋಜನೆಗೆ 1,33,867 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ವೆಚ್ಚವು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಾನ್ಸಟೇಬಲ್ ಉದ್ಯೋಗದಲ್ಲಿದ್ದಾರೆ ಉನ್ನತ ಶೈಕ್ಷಣಿಕ ಅರ್ಹತೆಯುಳ್ಳ ಮಹಿಳೆಯರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights