ರೈತ ಖಾತೆಗೆ 4,000 ಜಮೆ: ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌

ಮಧ್ಯ ಪ್ರದೇಶ ರೈತರ ಖಾತೆಗೆ ಎರಡು ಕಂತುಗಳಲ್ಲಿ 4,000 ರೂ ಜಮಾವಣೆ ಮಾಡುವುದಾಗಿ ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಹೆಸರು ದಾಖಲಿಸಿರುವ ರೈತರು ಫಲಾನುಭವಿಗಳಾಗಲಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಗಳ ರೈತ ಕಲ್ಯಾಣ ಯೋಜನೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗುತ್ತಿದೆ. ಯೋಜನೆಯ ಅಡಿ ರೈತರಿಗೆ ವಾರ್ಷಿಕವಾಗಿ 4 ಸಾವಿರ ರೂ. ಪಾವತಿಸಲಾಗುವುದು. ರೈತರ ಕಲ್ಯಾಣ ನನ್ನ ಜೀವನದ ಗುರಿಯಾಗಿದೆ ಎಂದು ಹೇಳಿದ್ದಾರೆ.

ರೈತರ ಒಟ್ಟಾರೆ ಅಭಿವೃದ್ಧಿಗಾಗಿ ಕಿಸಾನ್ ಸಮ್ಮನ್ ನಿಧಿ, ಶೂನ್ಯ ಬಡ್ಡಿ ದರದಲ್ಲಿ ಸಾಲ ಮತ್ತು ಪ್ರಧಾನಿ ಬೆಳೆ ವಿಮೆ ಮುಂತಾದ ಯೋಜನೆಗಳೊಂದಿಗೆ ರೈತರ ಹಿತದೃಷ್ಟಿಯಿಂದ ನಡೆಸಬೇಕೆಂದು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗುತ್ತದೆ. ಪ್ಯಾಕೇಜ್‌ ಆಧಾರದಲ್ಲಿ ಯೋಜನೆಗಳು ಅನುಷ್ಟಾನಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿಗಳ ರೈತ ಕಲ್ಯಾಣ ಯೋಜನೆಯಡಿ  77 ಲಕ್ಷ ರೈತರಿಗೆ ಸೌಲಭ್ಯ ಸಿಗಲಿದೆ. ರೈತರಿಗೆ ಶೂನ್ಯದರದಲ್ಲಿ ಸಾಲ ನೀಡುವ ಸಲುವಾಗಿ 800 ಕೋಟಿ ರೂ ಹಣವನ್ನು ಸಹಕಾರ ಸಂಘಗಳಿಗೆ ನೀಡಲಾಗಿದೆ ಎಂದು ಚೌಹಾಣ್ ತಿಳಿಸಿದ್ದಾರೆ.


ಇದನ್ನೂ ಓದಿ: ಸೆ. 25ಕ್ಕೆ ಕರ್ನಾಟಕವೂ ಬಂದ್ – ಹೋರಾಟ ನಿರತ ಸಂಘಟನೆಗಳಿಂದ ಕರೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights