ಕೃಷಿ ಮಸೂದೆ ಅಂಗೀಕಾರದಲ್ಲಿ ಸರ್ಕಾರದಿಂದ ನಿಯಮ ಉಲ್ಲಂಘನೆ! ವಿಡಿಯೋ ಬಹಿರಂಗ

ಕೇಂದ್ರ ಸರ್ಕಾರ ಅಂಗೀಕರಿಸಿರುವ ಕೃಷಿ ಮಸೂದೆ ಅಂಗೀಕಾರದ ವೇಳೆ ಸರ್ಕಾರ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ರಾಜ್ಯಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಅಂಗೀಕಾರಗೊಂಡಿರುವ ಕೃಷಿ ಮಸೂದೆಯ ಅಂಗೀಕಾರದ ಸಂದರ್ಭದಲ್ಲಿ ಉಪ ಸಭಾಧ್ಯಕ್ಷರು ಪಕ್ಷಪಾತ ಮಾಡಿದ್ದಾರೆ ಎಂದೂ ಪ್ರತಿಪಕ್ಷಗಳು ಆರೋಪಿಸಿವೆ.

ಈ ಬಗ್ಗೆ ಎನ್‌ಡಿ ಟಿವಿ ವರದಿ ಮಾಡಿದ್ದು, ವರದಿಯಲ್ಲಿ ಕೃಷಿ ಮಸೂದೆ ಅಂಗೀಕಾರ ಸಂದರ್ಭದಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವಿಡಿಯೋ ಸಹಿತ ಪ್ರಕಟಿಸಿದೆ.

ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವುದಕ್ಕೂ ಮುನ್ನವೇ ವಿಪಕ್ಷಗಳ ಸದಸ್ಯರ ಬೇಡಿಕೆಗೆ ಸಭಾಕ್ಷರು ಸ್ಪಂಧಿಸದೇ ಅಂಗೀಕಾರಕ್ಕೆ ಮುಂದಾದರು. ಹಾಗಾಗಿ ವಿರೋಧ ಪಕ್ಷಗಳ ಸದಸ್ಯರು ತಮ್ಮ ಸೀಟುಗಳಿಂದ ಇಳುದು ಬಂದು ಪ್ರತಿಭಟನೆ ನಡೆಸಬೇಕಾಯಿತು ಎಂದು ವಿಪಕ್ಷಗಳು ಹೇಳಿವೆ.

ಅಲ್ಲದೆ, ಧ್ವನಿ ಮತದ ಮೂಲಕ ಕೃಷಿ ಮಸೂದೆಯನ್ನು ಅಂಗೀಕರಿಸಿ, ಅದನ್ನು ಸಭಾಪತಿಗಳು ಸಮರ್ಥಿಸಿಕೊಂಡಿದ್ದಾರೆ. ಅದರೆ, ಮತಕ್ಕೆ ಹಾಕುವ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರು ತಮ್ಮ ಆಸನಗಳಲ್ಲಿ ಕುಳಿತೇ ಇರಲಿಲ್ಲ. ಹೀಗಿರುವಾಗ ಮತದ ಅಂಗೀಕಾರವಾಗಲು ಹೇಗೆ ಸಾಧ್ಯ ಎಂದು ಹೇಳಲಾಗಿದೆ.

ಸೆ.20 ರಂದು ಮಧ್ಯಾಹದ ವೇಳೆಯಲ್ಲಿ ಸದನವನ್ನು ಮುಂದೂಡಿ ಎಂದು ವಿಪಕ್ಷಗಳು ಆಗ್ರಹಿಸಿವು. ಆದರೆ, ವಿಪಕ್ಷಗಳ ಮಾತಿಗೆ ಕಿಮ್ಮತ್ತು ಕೊಡದ ಉಪಸಭಾಪತಿಗಳು ಸದನವನ್ನು ವಿಸ್ತರಿಸಿದ್ದರು. ಸದನ ವಿಸ್ತರಣೆಗೆ ಸದನದ ಸಂಪೂರ್ಣ ಒಪ್ಪಿಗೆ ಇರಬೇಕು. ವಿಪಕ್ಷಗಳು ಒಪ್ಪದಿದ್ದರೂ ಮುಂದೂಡಲಾಗಿದೆ. ಉಪಸಭಾಧ್ಯಕ್ಷರು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರ ಮನವಿಯನ್ನಷ್ಟೇ ಪರಿಗಣಿಸಿ ಕಲಾಪವನ್ನು ವಿಸ್ತರಿಸಿದ್ದರು. ಇದನ್ನು ವಿಪಕ್ಷಗಳು ಪತ್ರಿಭಟಿಸಿದ್ದಕ್ಕಾಗಿ ವಿರೋಧ ಪಕ್ಷಗಳ 08 ಸದಸ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಸದನದ ಸಂಪೂರ್ಣ ಒಪ್ಪಿಗೆ ಪಡೆಯದೇ ಕಲಾಪ ವಿಸ್ತರಿಸಿರುವುದು ರಾಜ್ಯಸಭೆಯ ನಿಯಮ 37ರ ಉಲ್ಲಂಘನೆಯಾಗಿದೆ ಎಂದು ವರದಿಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಎನ್‌ಡಿ ಟಿವಿ ಬಿಡುಗಡೆಗೊಳಿಸಿರುವ ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ.


ಇದನ್ನೂ ಓದಿ: ರೈತ ವಿರೋಧಿ ಮಸೂದೆಗಳಿಗೆ ವಿಧಾನ ಪರಿಷತ್‌ನಲ್ಲಿ ವಿರೋಧ: ತಿಸ್ಕಾರಗೊಳ್ಳುತ್ತವಾ ಮಸೂದೆಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights