ಅತ್ಯಾಚಾರ ಎಂದರೇನು? ವೀರ್ಯಾಣು ಜೊತೆಗೆ ಅಪರಾಧವೂ ನಾಪತ್ತೆಯೇ? ಸುಪ್ರೀಂಕೋರ್ಟ್‌ ಹೇಳಿದ್ದೇನು?

ಹತ್ರಾಸ್‌ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂಬ ವಾದ ಎದ್ದಿದೆ. ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ವೀರ್ಯಾಣು ಪತ್ತೆಯಾಗಿಲ್ಲವಾದ್ದರಿಂದ ಅತ್ಯಾಚಾರ ನಡೆದಿಲ್ಲ ಎಂದು ಪೊಲೀಸರು ಮತ್ತು ಉತ್ತರ ಪ್ರದೇಶ ಸರ್ಕಾರ ಹೇಳಿಕೊಳ್ಳುತ್ತಿದೆ.

” ಹಾಧರಸ್ ಅತ್ಯಾಚಾರ ಆರೋಪ ಪ್ರಕರಣದಲ್ಲಿ ವಿಧಿ ವಿಜ್ಞಾನ (ಫೋರೆನ್ಸಿಕ್ ) ವಿಭಾಗದ ವರದಿಯು ಬಂದಿದೆ. ಪರೀಕ್ಷೆಗೆ ಕಳಿಸಲಾದ ವಸ್ತುಗಳಲ್ಲಿ ವೀರ್ಯದ ಪತ್ತೆಯಾಗಿಲ್ಲವೆಂದು ವರದಿ ಸ್ಪಷ್ಟಪಡಿಸಿದೆ. ಆದ್ದರಿಂದ ಯುವತಿಯ ಮೇಲೆ ಯಾವ ಅತ್ಯಾಚಾರವು ನಡೆದಿಲ್ಲವೆಂಬುದು ಸಾಬೀತಾಗಿದೆ” – ಪ್ರಶಾಂತ್ ಕುಮಾರ್, ADG, Law & Order, ಉತ್ತರಪ್ರದೇಶ.

ಆದರೆ, ಇದೆ ಉತ್ತರಪ್ರದೇಶದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ರೇಪ್ ಎಂದರೇನು ಎಂದು ಉ.ಪ್ರ ಸರ್ಕಾರಕ್ಕೆ ಹೀಗೆ ಪಾಠ ಮಾಡಿತ್ತು:

“…. to constitute the offence of rape it is not at all necessary that there should be complete penetration of the male organ with emission of semen and rupture of hymen. Even partial or slightest penetration of the male organ within the labia majora or the vulva or pudenda with or without any emission of semen or even an attempt at penetration into the private part of the victim would be quite enough for the purpose of Sections 375 and 376 of IPC. That being so it is quite possible to commit legally the offence of rape even without causing any injury to the genitals or leaving any seminal stains”
– State of UP vs Babulnath (1994) 6 SCC 29

(….ಅತ್ಯಾಚಾರವು ಸಾಬೀತಾಗಬೇಕೆಂದರೆ ಪುರುಷನ ಶಿಶ್ನವು ಮಹಿಳೆಯ ಗುಪ್ತಾಂಗದೊಳಗೆ ಸಂಪೂರ್ಣವಾಗಿ ಒಳಹೋಗಿರಬೇಕೆನ್ನುವುದಾಗಲೀ, ವೀರ್ಯ ಸ್ಖಲನವಾಗಿರಬೇಕೆಂಬುದಾಗಲೀ, ಮಹಿಳೆಯ ಯೋನಿಪೊರೆ ಹರಿದಿರಬೇಕೆನ್ನುವುದಾಗಲೀ ಕಡ್ಡಾಯವಲ್ಲ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ಮತ್ತು 376 ರ ದೃಷ್ಟಿಯಿಂದ ವೀರ್ಯಸ್ಖಲನವಾಗದಿದ್ದರೂ ಪುರುಶಾಂಗವು ಮಹಿಳೆಯ ಗುಪ್ತಾಂಗದೊಳಗೆ ಪ್ರವೇಶಿಸಲು ನಡೆಸುವ ಪ್ರಯತ್ನವು ಸಹ ರೇಪ್ ಎಂದೇ ಕರೆಸಿಕೊಳ್ಳಲ್ಪಡುತ್ತದೆ. ಆದ್ದರಿಂದ ಕಾನೂನು ದೃಷ್ಟಿಯಲ್ಲಿ ಗುಪ್ತಾಂಗಕ್ಕೆ ಯಾವುದೇ ಹಾನಿಯನ್ನು ಮಾಡದೆಯೂ ಹಾಗು ವೀರ್ಯದ ಕುರುಹುಗಳನ್ನು ಉಳಿಸದೆಯೂ ರೇಪ್ ಎಂಬ ಅಪರಾಧವನ್ನು ಎಸಗಬಹುದು”)

2017ರಷ್ಟು ಇತ್ತೀಚಿಗೆ State v Arumugam Govindaswamy and others ಪ್ರಕರಣದಲ್ಲಿ ಕರ್ನಾಟಕದ ಹೈಕೋರ್ಟು ಸಹ ವೀರ್ಯದ ಕುರುಹುಗಳು ಇಲ್ಲದಂತೆ ರೇಪ್ ಅಪರಾಧವನ್ನು ಎಸಗಲು ಸಾಧ್ಯ ಎಂದು ಆದೇಶವಿತ್ತಿತ್ತು.

ಅಷ್ಟು ಮಾತ್ರವಲ್ಲದೆ ಇಂಥ ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಬಲಿಯಾದ ಮಹಿಳೆ ನೀಡುವ ಹೇಳಿಕೆಗೆ ಪೂರಕ ಪುರಾವೆಯ ಅಗತ್ಯವಿಲ್ಲ.

ಕೇವಲ ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿಯೇ ಶಿಕ್ಷೆಯನ್ನು ನೀಡಬಹುದೆಂದು ಹಲವಾರು ಕೋರ್ಟು ಆದೇಶಗಳು ಸ್ಪಷ್ಟಪಡಿಸಿವೆ.

ಅದರಲ್ಲೂ ಸಂತ್ರಸ್ಥಳು ಸಾವಿಗೆ ಮುಂಚೆ ಕೊಡುವ ಹೇಳಿಕೆಯೊಂದನ್ನೇ ಆಧರಿಸಿ ದೇಶದ ಹಲವಾರು ಕೋರ್ಟುಗಳು ಅಪರಾಧಿಗಳಿಗೆ ಶಿಕ್ಷೆಯನ್ನು ನೀಡಿವೆ.

ಇನ್ನು ಈ ಪ್ರಕರಣದಲ್ಲಿ ಆ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆದ ಏಳು ದಿನಗಳನಂತರ ವೀರ್ಯಪತ್ತೆ ಪರೀಕ್ಷೆ ನಡೆಸಲಾಗಿದೆ. ಹಾಗು ಆಕೆ ಸಾಯುವ ಮುನ್ನ ಸ್ಪಷ್ಟವಾಗಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆಎಂದು ಸ್ಪಷ್ಟವಾಗಿ ಹೇಳಿಕೆ ಇತ್ತು ಕೊನೆಯುಸಿರೆಳೆದಿದ್ದಾಳೆ.

ಇಷ್ಟಾಗಿಯೂ ಆಕೆಯ ಮೇಲೆ ರೇಪ್ ನಡೆದಿಲ್ಲವೆಂದು ಸಾಬೀತಾದರೆ…. ನ್ಯಾಯಾಲಯದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವ ನ್ಯಾಯದೇವತೆಯ ಮಾನ ಹಾಗು ಪ್ರಾಣಗಳೂ ಅಪಾಯದಲ್ಲಿವೆ ಎಂದೇ ಆರ್ಥ..

– ಶಿವಸುಂದರ್


ಇದನ್ನೂ ಓದಿ: ಮರ್ಯಾದಾ ಹತ್ಯೆ: ಗರ್ಭಿಣಿಯಾಗಿದ್ದ 14 ವರ್ಷದ ಬಾಲಕಿಯನ್ನು ಹತ್ಯೆಗೈದ ತಂದೆ ಮತ್ತು ಮಗ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights