ದೇಶದಲ್ಲಿ ಕೊರೊನಾ ರೌದ್ರನರ್ತನ : 74,383 ಹೊಸಾ ಕೇಸ್: 918 ಜನ ಸಾವು!

ದೇಶದಲ್ಲಿ ಕೊರೊನಾ ರೌದ್ರನರ್ತನ ಮುಂದುವರೆದಿದ್ದು ಪ್ರತಿನಿತ್ಯ 70 ಸಾವಿರಕ್ಕಿಂತ ಹೆಚ್ಚು ಜನ ಸೋಂಕಿಗೆ ಒಳಗಾಗುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 74,383 ಜನರಿಗೆ ಮಹಾಮಾರಿ ಕೊರೊನಾ ಅಂಟಿಕೊಂಡಿದೆ. ಆ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70,53,807 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿಯಿಂದ ತಿಳಿದುಬಂದಿದೆ.

ಕಳೆದ ಒಂದೇ ದಿನದಲ್ಲಿ 918 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ. ಆ ಮೂಲಕ 1,08,334 ಜನ ಈ ವರೆಗೆ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ನಡುವೆ ಸಂತೋಷದ ವಿಚಾರ ಏನೆಂದರೆ ಸತತ 3ನೇ ದಿನ ಸಕ್ರಿಯ ಪ್ರಕರಣಗಳ ಸಂಖ್ಯೆ 9 ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ. ದೇಶದ 70,53,807 ಸೋಂಕಿತರ ಪೈಕಿ 60,77,977 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 8,67,496 ಜನ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಹಿತಿ ಪ್ರಕಾರ ನಿನ್ನೆ ಒಂದೇ ದಿನದಲ್ಲಿ 10,78,544 ಜನರ ಮಾದರಿಯನ್ನು ಪರೀಕ್ಷಿಸಲಾಗಿದೆ. ಆ ಮೂಲಕ ಇಲ್ಲಿಯವರೆಗೆ ಒಟ್ಟು 8,68,77,242 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights