ಕೇರಳ: ಜೆಡಿಎಸ್‌ ಘಟಕವನ್ನು ವಿಸರ್ಜಿಸಿದ ದೇವೇಗೌಡ: ನೂತನ ಅಧ್ಯಕ್ಷರ ನೇಮಕ

ಕೇರಳದಲ್ಲಿ ಜೆಡಿಎಸ್ ಪಕ್ಷವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ನ ಕೇರಳ ರಾಜ್ಯ ಘಟಕವನ್ನು ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಹೆಚ್‌ಡಿ ದೇವೇಗೌಡ ವಿಸರ್ಜಿಸಿದ್ದು, ಮಾಜಿ ಸಚಿವ ಮ್ಯಾಥ್ಯೂ ಟಿ ಥಾಮಸ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.  ಪಕ್ಷವನ್ನು ಬಲಪಡಿಸಲು ಪಕ್ಷದ ಕೇರಳ ಘಟಕದ ಅಧ್ಯಕ್ಷ ಸಿಕೆ ನಾನು ಅವರು ಯಾವುದೇ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಹೆಚ್‌ಡಿಡಿ ಹೇಳಿದ್ದಾರೆ.

ಇತ್ತೀಚೆಗೆ ಕೇರಳದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿಕೆ ನಾನು ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಿಗಿದ್ದಾರೆ. ಈ ಬಗ್ಗೆ ಕಾರಣವನ್ನು ಕೇಳಿ ಜೆಡಿಎಸ್‌ ವರಿಷ್ಟ ನೋಟೀಸ್‌ ನಿಡಿದ್ದಾರೆ. ಆದರೆ, ನೋಟಿಸ್‌ಗೆ ಸಿಕೆ ನಾನು ಅವರು ಉತ್ತರ ನೀಡಿಲ್ಲ. ಹಾಗಾಗಿ ಕೇರಳದ ಜೆಡಿಎಸ್‌ ರಾಜ್ಯ ಘಟಕವನ್ನು ವಿಸರ್ಜಿಸಿ, ಹೊಸ ಅಧ್ಯಕ್ಷರನ್ನು ನೇಮಿಸಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಜೆಡಿಎಸ್​ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿರುವ ಬಿಎಂ ಫಾರೂಖ್​​ ಸೆ.24ರಂದು ಕಾರಣ ಕೇಳಿ ಸಿಕೆ ನಾನು ಅವರಿಗೆ ನೋಟಿಸ್​ ಜಾರಿ ಮಾಡಿದ್ದರು. ಈ ನೋಟಿಸ್​ಗೆ ಉತ್ತರಿಸದ ಅವರು ಯಾವುದೇ ನಿರ್ದೇಶನಗಳನ್ನು ಅನುಸರಿಸುವಲ್ಲಿ ವಿಫಲರಾಗಿದ್ದರು.

ಸಿಕೆ ನಾನು ರಾಜ್ಯ ಘಟಕವನ್ನು ಬಲಪಡಿಸುವ ಬದಲು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದು, ಪಕ್ಷ ರಚಿಸಿದ ಪ್ರಮುಖ ಸಮಿತಿಗಳನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕೇಂದ್ರದ ಕಟ್ಟಪ್ಪಣೆಗೆ ತಲೆಬಾಗಿ ಆರೋಗ್ಯ ಖಾತೆ ಕಿತ್ತುಕೊಂಡ ಬಿಎಸ್‌ವೈ: ರಾಜೀನಾಮೆ ಕೊಡ್ತಾರಾ ಶ್ರೀರಾಮುಲು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights