ಭಾರತದ ಭೂಭಾಗದಿಂದ ಚೀನಾ ಸೇನೆಯನ್ನು ಯಾವಾಗ ಕಿತ್ತೊಗೆಯುತ್ತೀರಿ? ರಾಹುಲ್‌ಗಾಂಧಿ ಪ್ರಶ್ನೆ
ಕಳೆದ ಜೂನ್ ತಿಂಗಳಿನಿಂದ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ಆದರೆ, ಪ್ರಧಾನಿ ಮೋದಿ ಯಾರೂ ದೇಶದ ಒಳಗೆ ಪ್ರವೇಶಿಸಿಲ್ಲ ಎಂದು ಹೇಳಿ ಟ್ರೋಲ್ ಆಗಿದ್ದರು. ಅಲ್ಲದೆ, ಇದೂ ವರೆಗೆ ಅವರು ಚೀನಾ ವಿರುದ್ಧ ಇದುವರೆಗೂ ಒಂದೇ ಒಂದು ಮಾತನ್ನು ಆಡಿಲ್ಲ. ಪೂರ್ವ ಲಡಾಕ್‌ನಲ್ಲಿ ನುಸುಳಿರುವ ಚೀನಾ ಸೈನಿಕರನ್ನು ಯಾವಾಗ ಕಿತ್ತೊಗೆಯುತ್ತೀರಿ. ದೇಶದ ಜನರಿಗೆ ನಿಜ ಹೇಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
“ವಿದೇಶಿ ರಾಷ್ಟ್ರವೊಂದು ನೆಲವನ್ನು ಕಬಳಿಸಿದಾಗಲೂ ಆಡಳಿತದಲ್ಲಿರುವವರಿಂದ ಅದನ್ನು ಖಂಡಿಸಿ ಒಂದೇ ಒಂದು ಮಾತು ಬರದಿರುವ ಏಕೈಕ ದೇಶವೆಂದರೆ ಭಾರತ ಎಂದೆನಿಸುತ್ತಿದೆ. ಇದು ನಿಜವಾಗಲು ನನಗೆ ಅಚ್ಚರಿ ಮತ್ತು ಆಘಾತ ಮೂಡಿಸಿದೆ” ಎಂದು ಟೀಕಿಸಿದ್ದಾರೆ.
ಕಳೆದ ಐದು ತಿಂಗಳಿಂದಲೂ ಪೂರ್ವ ಲಡಾಕ್‌ನ ಎಲ್‌ಎಸಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸೈನಿಕರು ನಮ್ಮ ನೆಲವನ್ನು ಕಬಳಿಸಿ ಕ್ಯಾತೆ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ತಿರುಗೇಟು ನೀಡಲಾಗದೆ ಕೇಂದ್ರ ಸರಕಾರ ಚಡಪಡಿಸುತ್ತಿದೆ. ಯಾವ ದಿನದಂದು ಚೀನಾ ಸೈನಿಕರನ್ನು ನಮ್ಮ ನೆಲದಿಂದ ಹೊರಗೆ ಅಟ್ಟುತ್ತೀರಿ ಎನ್ನುವ ನನ್ನ ಪ್ರಶ್ನೆಗೆ ನಿಖರ ಉತ್ತರ ನೀಡುವ ತಾಕತ್ತು ಪ್ರಧಾನಿ ಮೋದಿ ಅವರಿಗಿಲ್ಲ ಎಂದು ರಾಹುಲ್ ಹೇಳಿದ್ದಾರೆ..
ಇದನ್ನೂ ಓದಿ: ಗಡಿ ಉದ್ವಿಗ್ನತೆಯ ನಡುವೆಯೂ ಭಾರತೀಯ ವೈದ್ಯನನ್ನು ಸ್ಮರಿಸಿದ ಚೀನಾ!

