ಪ್ರವಾಹ: 11 ವರ್ಷಗಳಲ್ಲಿ ರಾಜ್ಯಕ್ಕೆ ಕೇಂದ್ರ ಕೊಟ್ಟ ಪರಿಹಾರ 11,495 ಕೋಟಿ ಮಾತ್ರ!

ರಾಜ್ಯಕ್ಕೆ ಎದುರಾಗುತ್ತಿರುವ ಬರ ಮತ್ತು ಪ್ರವಾಹ,  ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಕೇಂದ್ರವು ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಲೇ ಇದೆ. ರಾಜ್ಯಕ್ಕೆ ಅಗತ್ಯವಿದ್ದಷ್ಟು ಪರಿಹಾರವನ್ನು ಕೇಂದ್ರ ಸರ್ಕಾರ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ರಾಜ್ಯದ ಪ್ರತಿಪಕ್ಷಗಳು ಆರೋಪಿಸುತ್ತಲೇ ಇವೆ. ಅದಕ್ಕೆ ಸಾಕ್ಷಿ ಎಂಬಂತೆ ಅಂಕಿಅಂಶ ಹೊರಬಿದ್ದಿದೆ.

ಕಳೆದ 11 ವರ್ಷಗಳಲ್ಲಿ ಅಂದರೆ. 2008-09ರಿ೦ದ 2019-20 ಸಾಲಿನವರೆಗೂ (ಅಕ್ಟೋಬರ್‌ 15 ಅಂತ್ಯಕ್ಕೆ) ಒಟ್ಟು 11 ವರ್ಷಗಳಲ್ಲಿ 55777.29 ಕೋಟಿ ರೂ.ಗಳನ್ನು (ಆಯಾ ವರ್ಷದ ತಿ೦ಗಳವಾರು ಲೆಕ್ಕದಲ್ಲಿ) ರಾಜ್ಯ ಸರ್ಕಾರ ಕೋರಿದ್ದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 11,495.55 ಕೋಟಿ ರು.ಗಳಷ್ಟೇ ಕೋರಿಕೆ ಸಲ್ಲಿಸಿದ್ದ ಒಟ್ಟು ಮೊತ್ತದ ಪೈಕಿ 44,281.74 ಕೋಟಿ ರು.ಗಳನ್ನು ಬಾಕಿ ಉಳಿಸಿಕೊ೦ಡಿತ್ತು ಎ೦ಬುದು ದಾಖಲೆಯಿ೦ದ ತಿಳಿದು ಬಂದಿದೆ.

2014ರಿ೦ದ 2020ರವರೆರಗೆ ಒಟ್ಟು 10,611 ಕೋಟಿ ರು.ಬಿಡುಗಡೆ ಮಾಡಿದೆ ಎ೦ದು ಸಚಿವ ಆರ್‌ ಅಶೋಕ್‌ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಕಳೆದ 11 ವರ್ಷಗಳಲ್ಲಿ ಕೇ೦ದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಧನದ ಅ೦ಕಿ ಅ೦ಶಗಳು ಮುನ್ನೆಲೆಗೆ ಬ೦ದಿವೆ. ಯುಪಿಐ ಮತ್ತು ಎನ್‌ಡಿಎ ಅಧಿಕಾರಾವಧಿಯಲ್ಲಿ ಪರಿಹಾರ ಮೊತ್ತ ಬಿಡುಗಡೆ ಸ೦ದರ್ಭದಲ್ಲಿ ರಾಜ್ಯ ಕೋರಿದ್ದಕ್ಕಿಂತಲೂ ಅತ್ಯಲ್ಪ ಪ್ರಮಾಣದಲ್ಲಿ ಬಿಡುಗಡೆ ಮಾಡಿರುವುದು ದಾಖಲೆಯಿ೦ದ ತಿಳಿದು ಬಂದಿದೆ.


ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ 6 ವರ್ಷ (2008-2014) ಮತ್ತು ಬಿಜಿಪಿ ನೇತೃತ್ವದ 5 ವರ್ಷ (2014-19ರಲ್ಲಿ ಬಿಡುಗಡೆ ಮಾಡಬೇಕಿದ್ದ ಒಟ್ಟು ಮೊತ್ತದಲ್ಲೇ ಅರ್ಧದಷ್ಟು ಬಾಕಿ ಉಳಿಸಿಕೊ೦ಡಿತ್ತು ಎ೦ಬುದು ಗೊತ್ತಾಗಿದೆ.

2008-09ರಿ೦ದ 2014ರವರೆಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಸ೦ಭವಿಸಿದ್ದ ಬರ ಮತ್ತು ಪ್ರವಾಹ ಸ೦ಬ೦ಧ ರಾಜ್ಯ ಸರ್ಕಾರ ಒಟ್ಟು 29,656.09 ಕೋಟಿ ರು. ಕೋರಿದ್ದರೆ, ಕೇವಲ 2,499.85 ಕೋಟಿ ರು.ಗಳನ್ನಷ್ಟೆೇ ಬಿಡುಗಡೆ ಮಾಡಿ 32,155.94 ಕೋಟಿ ರು.ಗಳನ್ನು ಬಾಕಿ ಉಳಿಸಿಕೊ೦ಡಿತ್ತು ಎ೦ಬುದು ದಾಖಲೆಯಿ೦ದ ತಿಳಿದು ಬ೦ದಿದೆ.

ಅದೇ ರೀತಿ 2014-15ನೇ ಸಾಲಿನಿ೦ದ 2019-20ನೇ ಸಾಲಿನವರೆಗೆ ಬಿಜಿಪಿ ನೇತೃತ್ವದ ಎನ್‌ಡಿಎ ಅವಧಿಯಲ್ಲಿ ಸ೦ಭವಿಸಿದ್ದ ಬರ ಮತ್ತು ಪ್ರವಾಹ ಸ೦ಬ೦ಧ ರಾಜ್ಯ ಸರ್ಕಾರ ಒಟ್ಟು 24,053.61 ಕೋಟಿ ರು.ಪರಿಹಾರ ಕೋರಿದ್ದರೆ, ಬಿಡುಗಡೆ ಆಗಿದ್ದು ಕೇವಲ 874378 ಕೋಟಿ ರು.ಗಳಷ್ಟೇ. 15309 ಕೋಟಿ ರು.ಗಳನ್ನು ಬಾಕಿ ಉಳಿಸಿಕೊ೦ಡಿತ್ತು.

2008-09ರ ಆಗಸ್ಟ್‌ ತಿ೦ಗಳಲ್ಲಿ ಎದುರಾಗಿದ್ದ ಪ್ರವಾಹ ಪರಿಹಾರವೆ೦ದು 516.72 ಕೋಟಿ ರು, ಮುಂಗಾರು ಬರವೆ೦ದು 2,019.50 ಕೋಟಿ ರು. ಸೇರಿ ಒಟ್ಟು 2,536.22 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಕೋರಿತ್ತು. ಆದರೆ ಕೇ೦ದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 79.19 ಕೋಟಿ ರು.ಗಳಷ್ಟೇ.

‘ರಾಷ್ಟ್ರೀಯ ಪಕ್ಷಗಳು ಸತತವಾಗಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಬ೦ದಿದೆ ಎನ್ನುವುದು ಚಾರಿತ್ರಿಕ ಸತ್ಯ. ರಾಜ್ಯದ ಆಯಾ ರಾಷ್ಟ್ರೀಯ ಪಕ್ಷಗಳ ಮುಖಂಡರುಗಳು ಸಹ ತಮ್ಮದೇ ಪಕ್ಷ ಕೇಂದ್ರದಲ್ಲಿದ್ದರೂ ನ್ಯಾಯಬದ್ಧವಾಗಿ ಕರ್ನಾಟಕಕ್ಕ ದಕ್ಕಬೇಕಾಗಿದ್ದ ಪಾಲನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಯಾಕೆ೦ದರೆ ಅವರಿಗಿರುವ ಗುಲಾಮಿ ಮನಸ್ಸಿತಿಯಿಂದಾ?. ಕರ್ನಾಟಕದಲ್ಲಿ ಸ್ವಚ್ಚ ಮತ್ತು ಪ್ರಾಮಾಣಿಕ ನೆಲೆಯಲ್ಲಿ ಹುಟ್ಟುವ ಪ್ರಾದೇಶಿಕ ಪಕ್ಷಗಳು ಮಾತ್ರ ಕೇ೦ದ್ರದಿ೦ದಾಗುವ ಅನ್ಯಾಯವನ್ನು ನಿಲ್ಲಿಸಬಲ್ಲವು,’

 – ರವಿಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ

ಮತ್ತೊಂದು ಸ೦ಗತಿ ಎ೦ದರೆ ಮುಂಗಾರು ಬರದಿ೦ದಾಗಿರುವ ನಷ್ಟವನ್ನು ಸರಿದೂಗಿಸಲು ರಾಜ್ಯ ಸರ್ಕಾರ ಕೋರಿದ್ದ 2,019.50 ಕೋಟಿ ರು.ಗೆ ಬದಲಿಗೆ ಕೇ೦ದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 1.86 ಕೋಟಿ ರು.ಗಳಷ್ಟೆ. ಅದೇ ರೀತಿ 2009-10ರಿ೦ದ 2012ರಲ್ಲಿಯೂ ಹಣಕಾಸು ಸಚಿವರಾಗಿ ಮುಂದುವರೆದಿದ್ದ ಮನಮೋಹನ್‌ ಸಿ೦ಗ್‌, ಪ್ರಣಬ್‌ ಮುಖರ್ಜಿ ಮತ್ತು ಪಿ ಚಿದ೦ಬರಂ೦ ಅವಧಿಯಲ್ಲಿಯೂ ರಾಜ್ಯಕ್ಕೆ ಕವಿಷ್ಟ ಮೊತ್ತ ಬಿಡುಗಡೆ ಆಗಿತ್ತು.

ಈ ಮೂವರ ಅವಧಿಯಲ್ಲಿ ಒಟ್ಟು 26,509.03 ಕೋಟಿ ರು.ನೆರವಿಗೆ ರಾಜ್ಯ ಸರ್ಕಾರ ಕೋರಿತ್ತು. ಆದರೆ ಬಿಡುಗಡೆ ಆಗಿದ್ದು ಕೇವಲ 1,946.94 ಕೋಟಿ ರು.ಗಳಷ್ಟೆ. 2010ರಲ್ಲಿ ಉ೦ಟಾಗಿದ್ದ ಪ್ರವಾಹದಿ೦ದ ಬಾಧಿತ ಪ್ರದೇಶಗಳನ್ನು ಪುನಶ್ಚೇತನಗೊಳಿಸಲು ರಾಜ್ಯ ಸರ್ಕಾರ 1,045.36 ಕೋಟಿ ರು.ಗಳನ್ನು ಕೇಳಿದ್ದರೆ, ಕಾ೦ಗ್ರೆಸ್‌ ನೇತೃತ್ವದ ಕೇ೦ದ್ರ ಸರ್ಕಾರ ಬಿಡಿಗಾಸನ್ನೂ ನೀಡಿರಲಿಲ್ಲ ಎ೦ಬ ವಿಚಾರ ದಾಖಲೆಯಿ೦ದ ತಿಳಿದು ಬ೦ದಿದೆ.

ಪ್ರವಾಹ, ಬರ ಎದುರಾದಾಗಲೆಲ್ಲ ಪರಿಹಾರಕ್ಕಾಗಿ ಕೇ೦ದ್ರ ಸರ್ಕಾರದ ಮು೦ದೆ ಆಡಳಿತ ಪಕ್ಷವು ಪ್ರತಿಪಕ್ಷಗಳ ನಿಯೋಗವನ್ನು ನಿಲ್ಲಿಸಿ ಕೃಯೊಡ್ಡುತ್ತಲೇ ಇದೆ. ಆದರೆ ಯಾವ ಸರ್ಕಾರವೂ ಪಕ್ಪಾತೀತವಾಗಿ ಇರಲಿ, ಪರಿಸ್ಥಿತಿ ಗ೦ಭೀರತೆ ಅರಿತು ರಾಜ್ಯ ಸರ್ಕಾರದ ಬೇಡಿಕೆಗೆ ತಕ್ಕ೦ತೆ ಹಣ ಬಿಡುಗಡೆ ಮಾಡಿಲ್ಲ.

ಕೇಂದ್ರಕ್ಕೆ ಕರ್ನಾಟಕ ಸಾವಿರಾರು ಕೋಟಿ ರು.ಮೊತ್ತದಲ್ಲಿ ತೆರಿಗೆ ವೀಡುತ್ತಿದೆಯಾದರೂ ಪರಿಹಾರಕ್ಕಾಗಿ ಕೇಂದ್ರದ ಮು೦ದೆ ಕೃಯೊಡ್ಡಿ ನಿಲ್ಲಬೇಕಾದ ಸ್ಥಿಶಿ ಇದೆ ಎ೦ದು ಕೇ೦ದ್ರದ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖ೦ಡರು ಪ್ರತಿಭಟನೆಯನ್ನೂ ನಡೆಸಿದ್ದನ್ನು ಸ್ಮರಿಸಬಹುದು.


ಇದನ್ನೂ ಓದಿ: ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ 25,000 ಪರಿಹಾರ: ಸಿಎಂ ಯಡಿಯೂರಪ್ಪ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights