ಶಿರಾ-ಆರ್ ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಕೊಡುತ್ತಾ ಬಿಗ್ ಶಾಕ್…?

‘ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಗೆಲುವು ನಿಶ್ಚಿತ. ಮಾಜಿ ಸಿಎಂ ಸಿದ್ದರಾಮಯ್ಯ ಎಷ್ಟೇ ಪ್ರಯತ್ನಿಸಿದರೂ ಅದನ್ನ ತಪ್ಪಿಸಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ. ಶಿವಕುಮಾರ್ ಬಂದ ಬಳಿಕ ಪಕ್ಷದಲ್ಲಿ ಬದಲಾವಣೆ ವೇಗ ಕಾಣಿಸುತ್ತಿದೆ. ಉಪಚುನಾವಣೆಯಲ್ಲಿ ಗೆಲುವು ಸಿಗುವವರೆಗೆ ಡಿಕೆ ಸಹೋದರರು ನಿದ್ದೆ ಮಾಡೋದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ರೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ. ಯಾವ ಭಯವೂ ನಮಗಿಲ್ಲ. ಗೆಲವು ನಮ್ಮದೇ ಅಂತ ಬಂಡೆ ಬೆನ್ನಿಗೆ ಜನಾರ್ದನ ಪೂಜಾರಿ ನಿಂತಿದ್ದಾರೆ.

ಕಾಂಗ್ರೆಸ್ ನ ಐವರು ಶಾಸಕರು ನಿಮ್ಮ ಪಕ್ಷಕ್ಕೆ ನಾವು ಬರುತ್ತೇವೆ. ನಮ್ಮನ್ನು ಕರೆದುಕೊಳ್ಳಿ ಎನ್ನುತ್ತಿದ್ದಾರೆ. ಇವರ ಜೊತೆಯಲ್ಲಿ ಶಿರಾ ಹಾಗೂ ಆರ್ ಆರ್ ನಗರ ದಿಂದ ಇಬ್ಬರು ಬಿಜೆಪಿಗೆ ಆಯ್ಕೆಯಾಗಿ ಬರುತ್ತಾರೆಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ರು. ಇದಕ್ಕೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. ಅವರಿಗೆ ಹೇಳಿ ತಡ ಮಾಡಲು ಹೋಗಬೇಡಿ ಅಂತ. ಯಾರು ಬರುತ್ತಾರೋ ಅವರನ್ನು ಬೇಗ ಕರೆದುಕೊಂಡಿ ಹೋಗಿ. ಐದು ಜನ ಮಾತ್ರವಲ್ಲ ಕಾಂಗ್ರೆಸ್ ನಲ್ಲಿ ಒಬ್ಬರನ್ನೂ ಬಿಡುವುದು ಬೇಡ. ಎಲ್ಲರನ್ನೂ ಕರೆದುಕೊಳ್ಳಲು ಹೇಳಿ ಅಂತ ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.

ಇಷ್ಟು ದಿನ ಸಿಎಂ ಕನಸು ಕಾಣುತ್ತಿದ್ದ ಕಾಂಗ್ರೆಸ್ ನಾಯಕರು. ಈಗ ಬಹಿರಂಗವಾಗಿಯೇ ಸಂಘರ್ಷಕ್ಕೆ ಇಳಿದಿದ್ದಾರೆ. ಎಲ್ಲಾ ಚುನಾವಣೆಗಳಲ್ಲಿ ಸೋತರು ಇವರಿಗೆ ಬುದ್ಧಿ ಬಂದಿಲ್ಲ. ಅಧಿಕಾರ ನಡೆಸಲು ಅಯೋಗ್ಯರು ಎಂದು ಜನ ಹೇಳಿದ ಮೇಲೂ ಸಿಎಂ ಖುರ್ಚಿಯ ಕನಸು ಕಾಣುತ್ತಿದ್ದಾರೆಂದು ಸಚಿವ ಕೆಎಸ್ ಈಶ್ವರಪ್ಪ ಲೇವಾಡಿ ಮಾಡಿದ್ದಾರೆ.ಉಪಚುನಾವಣೆಯ ಫಲಿತಾಂಶ ಮುಮದಿನ ಚುನಾವಣೆಗೆ ದಿಕ್ಸೂಚಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಈ ಸವಾಲು ಸ್ವೀಕರಿಸಲು ನಾನು ಸಿದ್ಧ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಮುನಿರತ್ನನ ನೋಟು ಕುಸುಮಾಗೆ ಓಟು. ರಾಜರಾಜೇಶ್ವರಿ ಉಪಚುನಾವಣಾ ಪ್ರಚಾರದಲ್ಲಿ ಡಿಕೆಶಿ ಈ ಸ್ಲೋಗನ್ ಕೂಗಿದ್ದಾರೆ. ಮತಯಾಚನೆ ವೇಳೆ ಡಿಕೆ ಶಿವಕುಮಾರ್ ಬಿಜೆಪಿ ನೋಟು, ಕಾಂಗ್ರೆಸ್ ಗೆ ಓಟು ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದರು. ಇದನ್ನ ಖಂಡಿಸಲು ಬಿಜೆಪಿ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದೆ. ಮತದಾರರಿಗೆ ಬಿಜೆಪಿಯಿಂದ ಹಣ ಪಡೆದುಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕರೆ ಕೊಟ್ಟಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ಮನವಿ ಮಾಡಿಕೊಂಡಿದೆ.

ಶಿರಾ ಉಪಚುನಾವಣೆಯಲ್ಲಿ ಗೆಲವು ಶತಸಿದ್ಧ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿರಾ ಚುನಾವಣೆ ನಮಗೆ ದೊಡ್ಡ ಸವಾಲು. ನಮ್ಮ ಪಕ್ಷದವರೇ ನಿರೇಕ್ಷ ಮಾಡದಷ್ಟೇ ನಾವು ಮುಂದಿದ್ದೇವೆ. ಕೆ ಆರ್ ಪೇಟೆ ಮಾದರಿಯಲ್ಲೇ ಐತಿಹಾಸಿಕ ಗೆಲುವು ನಮ್ಮದಾಗಲಿದೆ ಎಂದು ವಿಜೇಂದ್ರ ಹೇಳಿದ್ದಾರೆ.

ಇದೆಲ್ಲದರ ಮಧ್ಯೆ ಶಿರಾ-ಆರ್ ಆರ್ ನಗರದಲ್ಲಿ ಬಿಜೆಪಿ ಬಿಗ್ ಶಾಕ್ ಕೊಡ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಇನ್ನೂ ಸಿದ್ದು ಬಲವಿಲ್ಲದೇ ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights