ತಮ್ಮ ಹಕ್ಕುಗಳಿಗಾಗಿ ಕಾಬೂಲ್ ಬೀದಿಗಿಳಿದು ತಾಲಿಬಾನ್ ವಿರುದ್ಧ ಆಫ್ಘಾನ್ ಮಹಿಳೆಯರ ಪ್ರತಿಭಟನೆ!

ತಮ್ಮ ಹಕ್ಕುಗಳಿಗಾಗಿ ಕಾಬೂಲ್ ಬೀದಿಗಿಳಿದು ತಾಲಿಬಾನ್ ವಿರುದ್ಧ ಆಫ್ಘಾನ್ ಮಹಿಳೆಯರ ಪ್ರತಿಭಟನೆ ಮಾಡಿದರು.

ಪಶ್ಚಿಮ ನಗರ ಹೆರಾತ್‌ನಲ್ಲಿ ಇದೇ ರೀತಿಯ ಪ್ರತಿಭಟನೆಗಳು ನಡೆದ ನಂತರ ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದಲ್ಲಿ ತಮ್ಮ ಹಕ್ಕುಗಳನ್ನು ಎತ್ತಿಹಿಡಿಯಬೇಕೆಂದು ಅಫಘಾನ್ ಮಹಿಳೆಯರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಫಲಕಗಳನ್ನು ಹೊತ್ತುಕೊಂಡು ಘೋಷಣೆಗಳನ್ನು ಕೂಗುತ್ತಾ ಅಫಘಾನ್ ಮಹಿಳೆಯರು ತಮಗೆ ಶಿಕ್ಷಣವನ್ನು ಮುಂದುವರಿಸಲು ಮತ್ತು ಉದ್ಯೋಗಗಳನ್ನು ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ರ್ಯಾಲಿಯ ವೀಡಿಯೋದಲ್ಲಿ ಬಂದೂಕು ಹಿಡಿದ ತಾಲಿಬಾನಿಗಳು ಹೋರಾಟಗಾರ ಮಹಿಳಾ ಪ್ರತಿಭಟನಾಕಾರರ ಬಳಿ ಬಂದು ಅವರ ಘೋಷಣೆಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಕಳೆದ ತಿಂಗಳು ಆಫ್ಘಾನ್ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನ್ ಹೊಸ ಸರ್ಕಾರ ರಚನೆಯ ಬಗ್ಗೆ ಚರ್ಚಿಸುತ್ತಿದೆ. ಈ ಮಧ್ಯೆ ತಾಲಿಬಾನಿಗಳು ಮೃದುವಾದ ಆಡಳಿತದ ಭರವಸೆ ನೀಡಿದ್ದರಾದರೂ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡಲಾಗುವುದು ಆದರೆ ಶರಿಯಾ ಕಾನೂನಿನ ಮಿತಿಯಲ್ಲಿ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಹೀಗಾಗಿ ಅಫ್ಘಾನಿಸ್ತಾನದ ಹೊಸ ಆಡಳಿತದಲ್ಲಿ ತಾವು ಸ್ಥಾನ ಪಡೆಯಬಹುದೇ ಎಂದು ಅನೇಕ ಮಹಿಳೆಯರು ಸಂಶಯ ವ್ಯಕ್ತಪಡಿಸಿದ್ದಾರೆ.

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನಲ್ಲಿ ಕೆಲಸ ಮಾಡುತ್ತಿರುವ ಸಮೀರಾ ಹಮಿಡಿ, ಟ್ವಿಟರ್ ಥ್ರೆಡ್‌ನಲ್ಲಿ ತಾಲಿಬಾನ್‌ಗಳು ಬ್ಯಾಂಕ್‌ಗಳು, ಕಚೇರಿಗಳು ಮತ್ತು ಮಾಧ್ಯಮ ಸಂಸ್ಥೆಗಳಲ್ಲಿ ಮಹಿಳಾ ಕಾರ್ಮಿಕರನ್ನು ಮನೆಯಲ್ಲಿಯೇ ಇರುವಂತೆ ಹೇಳಿದ್ದಾರೆ ಎಂದು ಹೇಳಿದ್ದಾರೆ.

“ಮಹಿಳೆಯರು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ಥಳಗಳಿಂದ ಕಣ್ಮರೆಯಾಗಿದ್ದಾರೆ. ಮಹಿಳಾ ನೇತೃತ್ವದ ಸರ್ಕಾರೇತರ ಸಂಸ್ಥೆಗಳನ್ನು ತಾಲಿಬಾನಿಗಳು ಹುಡುಕುತ್ತಿದ್ದಾರೆ. ಪ್ರಶ್ನಿಸುತ್ತಿದ್ದಾರೆ ಮತ್ತು ಮುಚ್ಚುವಂತೆ ಕೇಳುತ್ತಿದ್ದಾರೆ. ಪ್ರಮುಖ ಮಹಿಳಾ ಕಾರ್ಯಕರ್ತರಿಗೆ ಕರೆಗಳು, ಸಂದೇಶಗಳು ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಭವಿಷ್ಯದ ಆಡಳಿತದ ರಚನೆಯ ಪ್ರತಿ ಚರ್ಚೆಯಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದೆ. ಹೊಸ ಸರ್ಕಾರದಲ್ಲಿ ಮಹಿಳೆಯರು ಹಿರಿಯ ಪಾತ್ರಗಳ ಭಾಗವಾಗಬೇಕು ಎಂದು ತಾಲಿಬಾನ್ ಯೋಚಿಸುವುದಿಲ್ಲ “ಎಂದು ಸಮೀರಾ ಹಮಿಡಿ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights