ಬಿಜೆಪಿಯ ತಂತ್ರಗಳು ವಿವಿಧ ರಾಜ್ಯಗಳಲ್ಲಿ ಟಿಎಂಸಿಯನ್ನು ಬಲಪಡಿಸುತ್ತವೆ: ಮದನ್‌ ಮಿತ್ರಾ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಎಣೆಯುತ್ತಿರುವ ಪ್ರತಿಯೊಂದು ತಂತ್ರವೂ ಟಿಎಂಸಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತದೆ. ಮಾತ್ರವಲ್ಲದೆ, ಅವರ ಈ ತಂತ್ರಗಳಿಂದಾಗಿ ಮುಂದಿನ ದಿನಗಳಲ್ಲಿ ತ್ರಿಪುರ, ಉತ್ತರ ಪ್ರದೇಶ ಮತ್ತು ಗುಜರಾಜ್‌ನಲ್ಲಿಯೂ ಪಕ್ಷ ಬಲಿಷ್ಠಗೊಳ್ಳಲಿದೆ ಎಂದು ಟಿಎಂಸಿ ಶಾಸಕ ಮದನ್‌ ಮಿತ್ರಾ ಹೇಳಿದ್ದಾರೆ.

ನನ್ನ ಹೆಸರು ಜಾರಿ ನಿರ್ದೇಶನಾಲಯದ (ಇ.ಡಿ.) ಆರೋಪ ಪಟ್ಟಿಯಲ್ಲಿದೆ. ಇದರಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆ. ಸುವೇಂದು ಅಧಿಕಾರಿ ಬಿಜೆಪಿಯವರು ಎಂಬ ಕಾರಣಕ್ಕೆ ಅವರ ಹೆಸರು ಆರೋಪಪಟ್ಟಿಯಲ್ಲಿಇಲ್ಲ. ಯಾರೆಲ್ಲ ಬಿಜೆಪಿಯಲ್ಲಿದ್ದಾರೋ ಅವರ ಹೆಸರುಗಳು ಆರೋಪಪಟ್ಟಿಯಲ್ಲಿ ಉಲ್ಲೇಖವಾಗುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಲ್ಲಿ ಇಲ್ಲದ ಸಾಕಷ್ಟು ಹಿರಿಯ ನಾಯಕರ ಹೆಸರುಗಳು ಇ.ಡಿ. ಆರೋಪಪಟ್ಟಿಯಲ್ಲಿವೆ. ಆದರೆ, ತನಿಖೆ ಮುಕ್ತಾಯವಾಗಿದೆ. ಇದೀಗ ಅವರು ಪ್ರತಿದಿನ ನೋಟಿಸ್‌ ನೀಡಲು ಸಾಧ್ಯವಿಲ್ಲ. ಬಿಜೆಪಿಯು ಇಂತಹ ತಂತ್ರಗಳನ್ನು ಹೆಚ್ಚೆಚ್ಚು ಮಾಡಿದಷ್ಟೂ, ಟಿಎಂಸಿ ಬಲಿಷ್ಠವಾಗುತ್ತದೆ ಎಂದು ಅವರು ಹೇಳಿದ್ದಾರೆ.

Read Also: ಮೋದಿ ಸರ್ಕಾರ ನಗದೀಕರಣ ಹೆಸರಿನಲ್ಲಿ ಸರ್ಕಾರಿ ಸ್ವತ್ತುಗಳನ್ನು ಮಾರುತ್ತಿದೆ: ಪಿ. ಚಿದಂಬರಂ

ನಾರದಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002 ಅಡಿಯಲ್ಲಿ ಟಿಎಂಸಿ ನಾಯಕರಾದ ಪಿರ್ಹಾದ್‌ ಹಕೀಂ, ಸುಬ್ರತಾ ಮುಖರ್ಜಿ, ಮದನ್‌ ಮಿತ್ರಾ ಮತ್ತು ಸೋವನ್‌ ಚಟರ್ಜಿ ವಿರುದ್ಧ ಇ.ಡಿ ದೂರು ದಾಖಲಿಸಿತ್ತು.

ಹಾಲಿ ಶಾಸಕರು, ಸಂಸದರು ಮತ್ತು ಐಪಿಎಸ್‌ ಅಧಿಕಾರಿಯೊಬ್ಬರೂ ಸೇರಿದಂತೆ ಒಟ್ಟು 12 ಜನರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ಅಡಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ್ದ ಎಫ್‌ಐಆರ್‌ ಆಧರಿಸಿ ಇ.ಡಿ ತನಿಖೆ ನಡೆಸಿತ್ತು.

ಎಫ್‌ಐಆರ್‌ ಪ್ರಕಾರ, 2014ರಲ್ಲಿ ಕುಟುಕು ಕಾರ್ಯಾಚರಣೆ ನಡೆಸಿದ್ದ‌ ಮ್ಯಾಥ್ಯೂ ಸ್ಯಾಮುಯೆಲ್ಸ್, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ವಿಡಿಯೊ ಹಾಗೂ ದಾಖಲೆಗಳನ್ನು ಸಂಗ್ರಹಿಸಿದ್ದರು.

Read Also: ಬಟ್ಟೆ ಬ್ಯಾಗ್ ಖರೀದಿಯಲ್ಲಿ ರೋಹಿಣಿ ಸಿಂಧೂರಿ 6 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ: ಸಾರಾ ಮಹೇಶ್‌ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights