ಹಣ ಸಿಗದೆ ಗ್ರಾಹಕರ ಪರದಾಟ : “ನೋ ಎಸ್ ಬ್ಯಾಂಕ್ ” ಎಂದು ಮೋದಿ ವಿರುದ್ಧ ರಾಹುಲ್ ಟ್ವೀಟ್

‘ಸಾಲ’ ಕೊಟ್ಟು ಕೈ ಸುಟ್ಟುಕೊಂಡ ಎಸ್ ಬ್ಯಾಂಕ್ ನಲ್ಲಿ ಸದ್ಯ ಗ್ರಾಹಕರು ಹಣ ಪಡೆದುಕೊಳ್ಳಲು ಸಾಧ್ಯವಾಗದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಹೌದು… ನೆನ್ನೆಯಿಂದ ಎಸ್ ಬ್ಯಾಂಕ್ ನ ಎಟಿಎಂ ನಲ್ಲಿ ಹಣ ಲಭ್ಯವಾಗುತ್ತಿಲ್ಲ. ಜೊತೆಗೆ ಆನ್ ಲೈನ್ ವರ್ಗಾವಣೆ ಇಲ್ಲ, ಗೂಗಲ್ ಪೇ ನೂ ವರ್ಕ್ ಆಗ್ತಾಯಿಲ್ಲ. ಹೀಗಾಗಿ ಜನ ತಮ್ಮ ಹಣದ ಬಗ್ಗೆ ಆತಂಕ ವ್ಯಕ್ತವಾಗಿ ಬ್ಯಾಂಕ್ ಗಳತ್ತ ಮುಖ ಮಾಡಿದ್ದಾರೆ.

ಇಂದು ಬೆಳಿಗ್ಗೆಯಿಂದ ಎಸ್ ಬ್ಯಾಂಕ್ ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಣದ ಬಗ್ಗೆ ವಿಚಾರಿಸುತ್ತಿದ್ದಾರೆ. ಬ್ಯಾಂಕ್ ಗೆ ಹೋಗಿ ಚೆಕ್ ಕೊಟ್ರೆ ಮಾತ್ರ ಹಣ ಸಿಗುತ್ತದೆ. ಅದು 50,000 ರೂಪಾಯಿ ಮಾತ್ರ ಸಿಗುತ್ತದೆ. ಏಪ್ರಿಲ್ 3 ರವೆರೆಗೆ ಹಣ ದೊರೆಯುವ ಸಾಧ್ಯತೆ ಇಲ್ಲ ಎಂದೇಳಲಾಗುತ್ತಿದೆ. ಹೀಗೆ ಗ್ರಾಹಕರ ಆತಂಕ ಸೃಷ್ಟಿಸಿದ ಎಸ್ ಬ್ಯಾಂಕ್ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

‘ನೋ ಎಸ್ ಬ್ಯಾಂಕ್ ‘ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮೋದಿ ಅವರ ಯೋಜನೆಗಳು ದೇಶದ ಅರ್ಥ ವ್ಯವಸ್ಥೆಯನ್ನೇ ಹಾಳು ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.

ಯೆಸ್ ಬ್ಯಾಂಕ್ ಹಣಕಾಸು ದುಸ್ಥಿತಿಗೆ ಬಹಿರಂಗವಾಗುತ್ತಿದ್ದಂತೆಯೇ ಭಾರತದ ಷೇರುಪೇಟೆ ಜರ್ಝರಿತಗೊಂಡಿದೆ. ಮೊದಲೇ ಹಿನ್ನಡೆಯಲ್ಲಿರುವ ಭಾರತದ ಆರ್ಥಿಕತೆಯ ಮೇಲೆ ಇದು ಇನ್ನೊಂದು ಪೆಟ್ಟು ಕೊಟ್ಟಿದೆ. ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿ ಎರಡೂ ಕೂಡ ಭಾರೀ ನಷ್ಟ ಮಾಡಿಕೊಂಡಿವೆ. ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 1,400 ಪಾಯಿಂಟ್ ಕಳೆದುಕೊಂಡಿದೆ. ನಿಫ್ಟಿ ಕೂಡ 11 ಸಾವಿರ ಅಂಕಗಳ ಗಡಿಯೊಳಗೆ ಇಳಿದಿದೆ. ಯೆಸ್ ಬ್ಯಾಂಕ್ ಷೇರುಗಳು ಅಕ್ಷರಶಃ ಪ್ರಪಾತಕ್ಕೆ ಜಿಗಿದಿವೆ. ಶೇ. 25ರಷ್ಟು ಮೌಲ್ಯ ಕುಸಿತ ಕಂಡಿವೆ. ಇದರ ಜೊತೆಗೆ ಡಾಲರ್ ಎದುರು ರೂಪಾಯಿ ದರ 53 ಪೈಸೆ ಹೆಚ್ಚಾಗಿದೆ. ಪ್ರತೀ ಡಾಲರ್​ಗೆ ಈಗ 73.86 ರೂಪಾಯಿ ದರ ಇದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್​ ಬ್ಯಾಂಕ್​ ಆಡಳಿತ ಮಂಡಳಿಯನ್ನು ಆರ್​ಬಿಐ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಮತ್ತು ಬ್ಯಾಂಕ್ ಗ್ರಾಹಕರು ಪ್ರತಿ ಖಾತೆಯಿಂದ 50 ಸಾವಿರದವರೆಗೆ ಮಾತ್ರ ಹಣ ಹಿಂಪಡೆಯಲು ಗರಿಷ್ಠ ಮಿತಿ ವಿಧಿಸಿದೆ. ಮುಂದಿನ ಆದೇಶ ನೀಡುವವರೆಗೆ ಇದು ಜಾರಿಯಲ್ಲಿ ಇರಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights