ಫ್ಯಾಕ್ಟ್‌ಚೆಕ್ : ಶಾಲಾ ಮಕ್ಕಳಿಂದ ಆಜಾನ್ ಪಠಿಸಿದ ವೈರಲ್ ವಿಡಿಯೊದ ಅಸಲಿಯತ್ತೇನು ?

ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಆಜಾನ್ ಪಠಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬಾಲಕ ವೇದಿಕೆಯ ಮೇಲೆ ನಿಂತು ಆಜಾನ್‌ ಪಠಿಸುತ್ತಿದ್ದಾನೆ ಮತ್ತು ಶಾಲೆಯ ಇತರ ವಿದ್ಯಾರ್ಥಿಗಳು, ಶಿಕ್ಷಕರು ವೇದಿಕೆಯ ಕೆಳಗೆ ಸಾಲಾಗಿ ನಿಂತಿದ್ದಾರೆ. ಜಾರ್ಖಂಡ್‌ನ ಗ್ರಾಮವೊಂದರ ಶಾಲೆಯ ವಿಡಿಯೊ ಇದಾಗಿದೆ. ಗ್ರಾಮದಲ್ಲಿ ಮುಸ್ಲಿಮರ ಜನಸಂಖ್ಯೆಯೇ ಹೆಚ್ಚಿರುವುದರಿಂದ ಹೀಗೆ ಮಾಡಲಾಗಿದೆ.

https://twitter.com/OMahakaaleshwar/status/1545469774066372609?ref_src=twsrc%5Etfw%7Ctwcamp%5Etweetembed%7Ctwterm%5E1545469774066372609%7Ctwgr%5E%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fazaan-recitation-during-morning-school-assembly-36564

https://twitter.com/lady_done12/status/1546842668377944065?ref_src=twsrc%5Etfw%7Ctwcamp%5Etweetembed%7Ctwterm%5E1546842668377944065%7Ctwgr%5E%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fazaan-recitation-during-morning-school-assembly-36564

ಅದಕ್ಕಾಗಿ ಹಿಂದೂ ಮಕ್ಕಳೂ ಮುಸ್ಲಿಮರ ಪ್ರಾರ್ಥನೆ ಹೇಳುವುದನ್ನು ಕಡ್ಡಾಯಗೊಳಿಸಲಾಗಿದೆ. ಇದು ಕಾಂಗ್ರೆಸ್‌ ಸರ್ಕಾರವಿರುವ ಜಾರ್ಖಂಡ್‌ನ ಪರಿಸ್ಥಿತಿ. ಇಸ್ಲಾಮಿಕ್‌ ಸ್ಟೇಟ್‌ ಆಗುವ ದಿಸೆಯಲ್ಲಿ ಇದು ಮೊದಲ ಹೆಜ್ಜೆ ಎಂಬ ವಿವರಣೆಯನ್ನು ಈ ವಿಡಿಯೊದೊಂದಿಗೆ ಹಂಚಿಕೊಳ್ಳಲಾಗಿದೆ. ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

100 ₹200 ₹500 ₹1000 Others

ಫ್ಯಾಕ್ಟ್‌ಚೆಕ್: 

ವೀಡಿಯೊದ ಕೀಫ್ರೇಮ್‌ಗಳ ನೆರವಿನಿಂದ InVid ನ ಕೀಫ್ರೇಮ್ ವಿಶ್ಲೇಷಣಾ ಟೂಲ್ ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ದಿನಾಂಕದ 04 ಜೂನ್ 2022ರಂದು ಮಾಡಲಾಗಿರುವ  ಟ್ವೀಟ್‌ ಲಭ್ಯವಾಗಿದೆ, ಅದರಲ್ಲಿ ಅದೇ ತುಣುಕನ್ನು ನೋಡಬಹುದು. ಶೀರ್ಷಿಕೆಯ ಪ್ರಕಾರ, ವೈರಲ್ ವೀಡಿಯೊ ಅಸ್ಸಾಂನ ಜೋರ್ಹತ್‌ನಿಂದ ಬಂದಿದೆ ಮತ್ತು ಟ್ವೀಟ್‌ನಲ್ಲಿ ಶಾಲೆಯ ಹೆಸರನ್ನು ಮರಿಯಾನೊದ ಜ್ಞಾನ್ ಬಿಕಾಶ್ ಎಲ್‌ಪಿ ಸ್ಕೂಲ್ ಎಂದು ನಮೂದಿಸಲಾಗಿದೆ.

https://twitter.com/SouleFacts/status/1532793935654834176?ref_src=twsrc%5Etfw%7Ctwcamp%5Etweetembed%7Ctwterm%5E1532793935654834176%7Ctwgr%5E%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fazaan-recitation-during-morning-school-assembly-36564

ಟ್ವಿಟರ್‌ನಲ್ಲಿ ಲಭ್ಯವಾದ ಮಾಹಿತಿಯನ್ನು ಕೀವರ್ಡ್ಗಳಾಗಿ ಬಳಸಿ ಸರ್ಚ್ ಮಾಡಿದಾಗ 06 ಜೂನ್ 2022 ರ ನ್ಯೂಸ್ 18 ರ ವರದಿಯನ್ನು ಲಭ್ಯವಾಗಿದೆ. ವರದಿಯ ಪ್ರಕಾರ, ಈ ಘಟನೆಯು ಪೂರ್ವ ಅಸ್ಸಾಂನ ಜೋರ್ಹತ್‌ನ ಮರಿಯಾನಿಯಲ್ಲಿರುವ ಹೇಮಲೈ ಜ್ಞಾನ್ ಬಿಕಾಶ್ ಪ್ರಾಥಮಿಕ ಶಾಲೆಯಾಗಿದೆ. ಶಾಲೆಯಲ್ಲಿ ಅಸ್ಸಾಂ ಸರ್ಕಾರವು ಆಯೋಜಿಸಿದ್ದ ಗುಣೋತ್ಸವದ ಸಂದರ್ಭದಲ್ಲಿ, ಐದನೇ ತರಗತಿಯ ವಿದ್ಯಾರ್ಥಿಯು ಪ್ರಾರ್ಥನಾ ಸಭೆಯಲ್ಲಿ ಆಜಾನ್ ಹೇಳಲು ಪ್ರಾರಂಭಿಸಿದ್ದಾನೆ. ಗುಣೋತ್ಸವವು ಶಿಕ್ಷಣ ಕ್ಷೇತ್ರಗಳ ಸುಧಾರಣೆ ಮತ್ತು ಮೌಲ್ಯಮಾಪನಕ್ಕಾಗಿ ಅಸ್ಸಾಂ ಸರ್ಕಾರದಿಂದ ನಡೆಸಲ್ಪಡುವ ಶಿಕ್ಷಣ ಸಂಬಂಧಿತ ಅಭಿಯಾನವಾಗಿದೆ.

ವಿಡಿಯೊ ಜೊತೆ ನೀಡಲಾಗಿರುವ ಮಾಹಿತಿ ಸುಳ್ಳು ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ವೇದಿಕೆ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ಕೆಲ ಮಾಧ್ಯಮಗಳು ಈ ಘಟನೆ ಕುರಿತು ಜೂನ್‌ 6ರಂದು ವರದಿ ಪ್ರಕಟಿಸಿವೆ. ಅಸ್ಸಾಂನ ಜೊರ್ಹಾಟ್‌ನ ಹೇಮಾಲಯ್‌ ಜ್ಞಾನ್‌ ಬಿಕಾಶ್‌ ಪ್ರಾಥಮಿಕ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ವಿದ್ಯಾರ್ಥಿಯೊಬ್ಬ ವೇದಿಕೆ ಏರಿ ಆಜಾನ್‌ ಪಠಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಶಿಕ್ಷಣ ಅಧಿಕಾರಿಯು ಶಾಲೆಯ ಪ್ರಾಂಶುಪಾಲರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದರು. ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಶಾಲೆಯ ಶಿಕ್ಷಕರೊಬ್ಬರು, ‘ಬಾಲಕ ವೇದಿಕೆ ಏರಿ ಆಜಾನ್‌ ಪಠಿಸುತ್ತಾನೆ ಎಂದು ನಮಗೆ ಮೊದಲೇ ತಿಳಿದಿರಲಿಲ್ಲ’ ಎಂದಿದ್ದರು ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜಾರ್ಖಂಡ್‌ನ ಗ್ರಾಮವೊಂದರ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಆಜಾನ್ ಪಠಿಸುತ್ತಿರುವ ವಿಡಿಯೊ ಎಂದು ಹೇಳಲಾಗುತ್ತಿರುವ ದೃಶ್ಯಗಳು ವಾಸ್ತವವಾಗಿ ಅಸ್ಸಾಂನದ್ದು. ಅಸ್ಸಾಂನಲ್ಲಿ ಇರುವುದು BJP ಸರ್ಕಾರ, ಆಜಾನ್ ಪಠಣವು ಪೂರ್ವ ನಿಗದಿತ ಕಾರ್ಯಕ್ರಮವಾಗಿರಲಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ದೈತ್ಯಾಕಾರದ ಮಾನವನ ಅಸ್ಥಿಪಂಜರ ಪತ್ತೆ! ವಾಸ್ತವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights