ಫ್ಯಾಕ್ಟ್‌ಚೆಕ್ : ಭೂಕುಸಿತದ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೆ

ಕರ್ನಾಟಕ-ಗೋವಾ ಗಡಿಯಲ್ಲಿರುವ ಅನ್ಮೋದ್ ಘಾಟ್‌ನಲ್ಲಿ ಇತ್ತೀಚೆಗೆ ಭೂಕುಸಿತ ಸಂಭವಿಸಿದೆ ಎಂದು ಪ್ರತಿಪಾದಿಸಿ ಭಾರಿ ಭೂಕುಸಿತವನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ದೃಶ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

Himachal Pradesh landslide viral video from Sirmaur has Twitter shocked. (Photos: Twitter)

ಫ್ಯಾಕ್ಟ್‌ಚೆಕ್ :

ವೀಡಿಯೊದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಅದೇ ವೀಡಿಯೊವನ್ನು ಹಿಂದೂಸ್ತಾನ್ ಟೈಮ್ಸ್ ಜುಲೈ 31, 2021 ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ. “ವೀಕ್ಷಿಸಿ: ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿ  ರಸ್ತೆ ಮಾರ್ಗದ ಗುಡ್ಡ ಕುಸಿದಿದೆ ಎಂದು ವರದಿಯಾಗಿದೆ.

ವೀಡಿಯೊ ವಿವರಣೆಯು ಹೀಗಿದ್ದು  “ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿ ಶುಕ್ರವಾರ (ಜುಲೈ 30, 2021) ಭೂಕುಸಿತ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯಗಳಲ್ಲಿ, ಸಿರ್ಮೌರ್ ಪ್ರದೇಶದಲ್ಲಿ ರಸ್ತೆಯ ಒಂದು ಭಾಗ ಕುಸಿದಿದೆ. ಎಡೆಬಿಡದೆ ಸುರಿದ ಮಳೆಯಿಂದ ರಸ್ತೆ ಗುಂಡಿ ಬಿದ್ದಿದೆ ಎಂದು ವರದಿಯಾಗಿದೆ. ಭೂಕುಸಿತದ ನಂತರ ರಾಷ್ಟ್ರೀಯ ಹೆದ್ದಾರಿ 707 ಅನ್ನು ನಿರ್ಬಂಧಿಸಲಾಗಿತ್ತು. ಲಾಹೌಲ್-ಸ್ಪಿಟಿ ಪ್ರದೇಶದಲ್ಲಿ 165 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ವರದಿಗಳ ಪ್ರಕಾರ, ಮೂವರು ಚಾರಣಿಗರು ನಾಪತ್ತೆಯಾಗಿದ್ದಾರೆ. ಪ್ರದೇಶದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ”.

Himachal Pradesh landslide viral video from Sirmaur has Twitter shocked. (Photos: Twitter)

ಆದರೂ ಜುಲೈ 4 ರಂದು ಅನ್ಮೋದ್ ಘಾಟ್‌ನಲ್ಲಿ ಎರಡು ಭೂಕುಸಿತ ಘಟನೆಗಳು ಸಂಭವಿಸಿದ್ದು, ಗೋವಾ-ಕರ್ನಾಟಕ NH-4A ನಲ್ಲಿ ಸಂಚಾರ ಸ್ಥಗಿತಗೊಂಡಿತು. ದೂಧಸಾಗರ್ ದೇವರ ದೇಗುಲದ ಬಳಿ ದೊಡ್ಡ ಭೂಕುಸಿತ ಸಂಭವಿಸಿದೆ, ಒಂದು ಕಿಲೋಮೀಟರ್ ದೂರದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದೆ ಎಂಬ ವರದಿಯಾಗಿದ್ದವು.

ಅದೇ ವೀಡಿಯೊವನ್ನು ದಿ ಕ್ವಿಂಟ್ ಜುಲೈ 2021 ರಲ್ಲಿ ಪ್ರಕಟಿಸಿದೆ. ವೀಡಿಯೊ ಶೀರ್ಷಿಕೆಯು, “ಹಿಮಾಚಲದಲ್ಲಿ ರಸ್ತೆಯ ಮಾರ್ಗದ ಗುಡ್ಡ ಕುಸಿತದ ಭಯಾನಕ ದೃಶ್ಯಗಳು ಎಂದು ಹೇಳಲಾಗಿದೆ. ಈ ವೀಡಿಯೊ 2021 ರದ್ದು ಎಂದು ಮಾಹಿತಿ ಲಭ್ಯವಾಗಿದ್ದು ಮತ್ತು ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ನಹಾನ್ ಪಟ್ಟಣದ ಬಳಿ ಉಂಟಾದ ಭೂಕುಸಿತ ಸಂಭವಿಸಿದೆ, ಎಂದು ಹೇಳುತ್ತಿರುವುದು ಹಳೆಯ ವಿಡಿಯೊ ಎಂದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಭೂಕುಸಿತದ ವಿಡಿಯೊ, ಹಿಮಾಚಲ ಪ್ರದೇಶದ ಹಳೆಯ ವೀಡಿಯೊ ಆಗಿದ್ದು ಇದು ಕರ್ನಾಟಕ-ಗೋವಾ ಗಡಿಯಲ್ಲಿರುವ ಅನ್ಮೋದ್ ಘಾಟ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಹಿಮಾಚಲ ಪ್ರದೇಶದಲ್ಲಿ ಭೂಕುಸಿತದ ಹಳೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ  ಗೋವಾದ ಅನ್ಮೋದ್ ಘಾಟ್‌ನಲ್ಲಿ ನಡೆದಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸಾಯಿಬಾಬಾ ಪರ್ವತ ಇರುವುದು ನಿಜವೇ ? ಹಾಗಿದ್ದರೆ ಇದು ಎಲ್ಲಿದೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights