ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: ವಿಜೇತರ ಪಟ್ಟಿ ಹೀಗಿದೆ!

65ನೇ ಕನ್ನಡ ರಾಜ್ಯೋತ್ಸವದಂದು ರಾಜ್ಯೋತ್ಸವ ಪ್ರಶಸ್ತಿ ರದ್ದಾಗಬಹುದು ಎಂಬ ಗುಮಾನಿಗಳು ಹರಿದಾಡಿದ್ದವು, ಅಂತೂ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿರುವ ಕರ್ನಾಟಕ ಸರ್ಕಾರ, ಈ ಬಾರಿಯ  ರಾಜ್ಯೋತ್ಸವದಂದು 65 ಸಾಧಕರು ಮತ್ತು ಸಂಘ-ಸಂಸ್ಥೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಿದೆ.

ಬುಧವಾರ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ. ರವಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟು 26 ಕ್ಷೇತ್ರಗಳ 60 ಸಾಧಕರು ಹಾಗೂ 5 ಸಂಘ -ಸಂಸ್ಥೆಗಳಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ನವೆಂಬರ್‌ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪ್ರಶಸ್ತಿ ವಿಜೇತರ ವಿವರಗಳು ಹೀಗಿವೆ,

ಕ್ರಮ ಸಂಖ್ಯೆ ಹೆಸರು ಕ್ಷೇತ್ರ
1 ಪ್ರೊ. ಸಿ.ಪಿ. ಸಿದ್ಧಾಶ್ರಮ, ಧಾರವಾಡ ಸಾಹಿತ್ಯ
2 ವಿ. ಮುನಿ ವೆಂಕಟ್ಟಪ್ಪ, ಕೋಲಾರ ಸಾಹಿತ್ಯ
3 ರಾಮಣ್ಣ ಬ್ಯಾಟಿ, ಗದಗ ಸಾಹಿತ್ಯ
4 ವಲೇರಿಯನ್‌ ಡಿಸೋಜ (ವಲ್ಲಿವಗ್ಗ), ದಕ್ಷಿಣ ಕನ್ನಡ ಸಾಹಿತ್ಯ
5 ಡಿ.ಎನ್‌. ಅಕ್ಕಿ, ಯಾದಗಿರಿ ಸಾಹಿತ್ಯ
6 ಹಂಬಯ್ಯ ನೂಲಿ, ರಾಯಚೂರು ಸಂಗೀತ
7 ಅನಂತ ತೇರದಾಳ, ಬೆಳಗಾವಿ ಸಂಗೀತ
8 ಬಿ.ವಿ. ಶ್ರೀನಿವಾಸ್‌, ಬೆಂಗಳೂರು ನಗರ ಸಂಗೀತ
9 ಗಿರಿಯಾ ನಾರಾಯಣ, ಬೆಂಗಳೂರು ನಗರ ಸಂಗೀತ
10 ಕೆ. ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ ಸಂಗೀತ
11 ಕೆ.ಎನ್‌. ಭಟ್‌, ಬೆಂಗಳೂರು ನ್ಯಾಯಾಂಗ
12 ಎಂ.ಕೆ. ವಿಜಯಕುಮಾರ್‌, ಉಡುಪಿ ನ್ಯಾಯಾಂಗ
13 ಸಿ. ಮಹೇಶ್ವರನ್‌, ಮೈಸೂರು ಮಾಧ್ಯಮ
14 ಟಿ. ವೆಂಕಟೇಷ್‌ (ಈ ಸಂಜೆ), ಬೆಂಗಳೂರು ಮಾಧ್ಯಮ
15 ಡಾ|| ಎ.ಎಸ್‌.ಚಂದ್ರಶೇಖರ, ಮೈಸೂರು ಯೋಗ
16 ಎಂ.ಎನ್‌.ಷಡಕ್ಷರಿ, ಚಿಕ್ಕಮಗಳೂರು ಶಿಕ್ಷಣ
17 ಡಾ|| ಆರ್‌. ರಾಮಕೃಷ್ಣ, ಚಾಮರಾಜನಗರ ಶಿಕ್ಷಣ
18 ಡಾ|| ಎಂ.ಜಿ. ಈಶ್ವರಪ್ಪ, ದಾವಣಗೆರೆ ಶಿಕ್ಷಣ
19 ಡಾ|| ಪುಟ್ಟಸಿದ್ದಯ್ಯ, ಮೈಸೂರು ಶಿಕ್ಷಣ
20 ಅಶೋಕ್‌ ಶೆಟ್ಟರ್‌, ಬೆಳಗಾವಿ ಶಿಕ್ಷಣ
21 ಡಿ.ಎಸ್‌. ದಂಡಿನ್‌, ಗದಗ ಶಿಕ್ಷಣ
22 ಕುಸುಮೋದರ ದೇರಣ್ಣ ಶೆಟ್ಟಿ ಕಲ್ತಡ್ಕ, ದಕ್ಷಿಣ ಕನ್ನಡ ಹೊರನಾಡು ಕನ್ನಡಿಗ
23 ವಿದ್ಯಾ ಸಿಂಹಾಚಾರ್ಯ ಮಾಹುಲಿ, ಮುಂಬಯಿ ಹೊರನಾಡು ಕನ್ನಡಿಗ
24 ಎಚ್‌.ಬಿ. ನಂಜೇಗೌಡ, ತುಮಕೂರು ಕ್ರೀಡೆ
25 ಉಷಾರಾಣಿ, ಬೆಂಗಳೂರು ನಗರ ಕ್ರೀಡೆ
26 ಡಾ|| ಕೆ.ವಿ. ರಾಜು, ಕೋಲಾರ ಸಂಕೀರ್ಣ
27 ನಂ. ವೆಂಕೋಬರಾವ್‌, ಹಾಸನ ಸಂಕೀರ್ಣ
28 ಡಾ|| ಕೆ.ಎಸ್‌. ರಾಜಣ್ಣ, ಮಂಡ್ಯ ಸಂಕೀರ್ಣ
29 ವಿ. ಲಕ್ಷ್ಮೀ ನಾರಾಯಣ (ನಿರ್ಮಾಣ್‌), ಮಂಡ್ಯ ಸಂಕೀರ್ಣ
30 ಯುತ್‌ ಫಾರ್‌ ಸೇವಾ, ಬೆಂಗಳೂರು ನಗರ ಸಂಘ-ಸಂಸ್ಥೆ
31 ದೇವದಾಸಿ ಸ್ವಾವಲಂಬನ ಕೇಂದ್ರ, ಬಳ್ಳಾರಿ ಸಂಘ-ಸಂಸ್ಥೆ
32 ಬೆಟರ್‌ ಇಂಡಿಯಾ, ಬೆಂಗಳೂರು ಸಂಘ-ಸಂಸ್ಥೆ
33 ಯುವ ಬ್ರಿಗೇಡ್‌, ಬೆಂಗಳೂರು ಗ್ರಾಮಾಂತರ ಸಂಘ-ಸಂಸ್ಥೆ
34 ಧರ್ಮೋತ್ಥಾನ ಟ್ರಸ್ಟ್‌ ಧರ್ಮಸ್ಥಳ, ದಕ್ಷಿಣ ಕನ್ನಡ ಸಂಘ-ಸಂಸ್ಥೆ
35 ಎನ್‌.ಎಸ್‌. (ಕುಂದರಗಿ) ಹೆಗಡೆ, ಉತ್ತರ ಕನ್ನಡ ಸಮಾಜಸೇವೆ
35 ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಚಿಕ್ಕಮಗಳೂರು ಸಮಾಜಸೇವೆ
37 ಮಣೆಗಾರ್‌ ಮೀರಾನ್‌ ಸಾಹೇಬ್, ಉಡುಪಿ‌ ಸಮಾಜಸೇವೆ
38 ಮೋಹಿನಿ ಸಿದ್ದೇಗೌಡ, ಚಿಕ್ಕಮಗಳೂರು ಸಮಾಜಸೇವೆ
39 ಡಾ|| ಅಶೋಕ್‌ ಸೊನ್ನದ್‌, ಬಾಗಲಕೋಟೆ ವೈದ್ಯಕೀಯ
40 ಡಾ|| ಬಿ.ಎಸ್‌. ಶ್ರೀನಾಥ, ಶಿವಮೊಗ್ಗ ವೈದ್ಯಕೀಯ
41 ಡಾ|| ಎ. ನಾಗರತ್ನ, ಬಳ್ಳಾರಿ ವೈದ್ಯಕೀಯ
42 ಡಾ|| ವೆಂಕಟಪ್ಪ, ರಾಮನಗರ ವೈದ್ಯಕೀಯ
43 ಸುರತ್‌ ಸಿಂಗ್‌ ಕನೂರ್‌ ಸಿಂಗ್‌ ರಜಪೂತ್‌, ಬೀದರ್‌ ಕೃಷಿ
44 ಎಸ್‌ವಿ ಸುಮಂಗಲಮ್ಮ ವೀರಭದ್ರಪ್ಪ, ಚಿತ್ರದುರ್ಗ ಕೃಷಿ
45 ಡಾ|| ಸಿದ್ರಾಮಪ್ಪ ಬಸವಂತರಾವ್‌ ಪಾಟೀಲ್‌ಮ ಕಲಬುರಗಿ ಕೃಷಿ
46 ಅಮರ ನಾರಾಯಣ, ಚಿಕ್ಕಬಳ್ಳಾಪುರ ಪರಿಸರ
47 ಎನ್‌.ಡಿ. ಪಾಟೀಲ್‌, ವಿಜಯಪುರ ಪರಿಸರ
48 ಪ್ರೊ. ಉಡುಪಿ ಶ್ರೀನಿವಾಸ, ಉಡುಪಿ ವಿಜ್ಞಾನ/ತಂತ್ರಜ್ಞಾನ
49 ಡಾ|| ಚಿಂದಿ ವಾಸುದೇವಪ್ಪ, ಶಿವಮೊಗ್ಗ ವಿಜ್ಞಾನ/ತಂತ್ರಜ್ಞಾನ
50 ಡಾ|| ಸಿ.ಎನ್‌. ಮಂಚೇಗೌಡ, ಬೆಂಗಳೂರು ನಗರ ಸಹಕಾರ
51 ಕೆಂಪವ್ವ ಹರಿಜನ, ಬೆಳಗಾವಿ ಬಯಲಾಟ
52 ಚೆನ್ನಬಸಪ್ಪ ಬೆಂಡಿಗೇರಿ, ಹಾವೇರಿ ಬಯಲಾಟ
53 ಬಂಗಾರ್‌ ಆಚಾರಿ, ಚಾಮರಾಜನಗರ ಯಕ್ಷಗಾನ
54 ಎಂ.ಕೆ. ರಮೇಶ್‌ ಆಚಾರ್ಯ, ಶಿವಮೊಗ್ಗ ಯಕ್ಷಗಾನ
55 ಅನಸೂಯಪ್ಪ, ಹಾಸನ ರಂಗಭೂಮಿ
56 ಎಚ್‌. ಷಡಾಕ್ಷರಪ್ಪ, ದಾವಣಗೆರೆ ರಂಗಭೂಮಿ
57 ತಿಪ್ಪೇಸ್ವಾಮಿ, ಚಿತ್ರದುರ್ಗ ರಂಗಭೂಮಿ
58 ಬಿ.ಎಸ್‌. ಬಸವರಾಜ್‌, ತುಮಕೂರು ಚಲನಚಿತ್ರ
59 ಆಪಾಢಂಡ ತಿಮ್ಮಯ್ಯ ರಘು (ಎ.ಟಿ. ರಘು), ಕೊಡಗು ಚಲನಚಿತ್ರ
60 ಎಂ.ಜೆ. ವಾಚೇದ್‌ ಮಠ, ಧಾರವಾಡ ಚಿತ್ರಕಲೆ
61 ಗುರುರಾಜ ಹೊಸಕೋಟೆ, ಬಾಗಲಕೋಟೆ ಜಾನಪದ
62 ಡಾ||ಹಂಪನಹಳ್ಳಿ ತಿಮ್ಮೇಗೌಡ, ಹಾಸನ ಜಾನಪದ
63 ಎನ್‌.ಎಸ್‌. ಜನಾರ್ಧನ ಮೂರ್ತಿ, ಮೈಸೂರು ಶಿಲ್ಪಕಲೆ
64 ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್‌ ನೃತ್ಯ
65 ಕೇಶಪ್ಪ ಶಿಳ್ಳೆಕ್ಯಾತರಮ, ಕೊಪ್ಪಳ ಜಾನಪದ/ತೊಗಲು ಗೊಂಬೆಯಾಟ

ಇದನ್ನೂ ಓದಿ: ಎರಡು ದಿನಗಳಲ್ಲಿ ನಿವೃತ್ತಿ ಹೊಂದಲಿರುವ ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights