ಯುಎಸ್ನಿಂದ ಇನ್ಫೋಸಿಸ್ನ 200ಕ್ಕೂ ಹೆಚ್ಚು ಉದ್ಯೋಗಿಗಳು ಬೆಂಗಳೂರಿಗೆ ವಾಪಸ್..
ಕೊರೊನಾವೈರಸ್ ಲಾಕ್‌ಡೌನ್ ನಿಂದಾಗಿ ಸಿಲುಕಿಕೊಂಡಿದ್ದ ಇನ್ಫೋಸಿಸ್ ನ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು, ಅವರ ಕುಟುಂಬಗಳನ್ನು ಯುಎಸ್ ನಿಂದ ಚಾರ್ಟರ್ಡ್ ಫ್ಲೈಟ್ ಮೂಲಕ ಹಿಂತಿರುಗಿಸಲಾಗಿದೆ.
ಕೊರೋನವೈರಸ್ ವೈರಸ್ ಏಕಾಏಕಿ ಹರಡಿ ಲಾಕ್ ಡೌನ್ ನಿಂದಾಗಿ ಅಂತರರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಿದ್ದರಿಂದ ಇನ್ಫೋಸಿಸ್ ಉದ್ಯೋಗಿಗಳು ಯುಎಸ್ನಲ್ಲಿ ಸಿಲುಕಿಕೊಂಡಿದ್ದರು. ಕೋವಿಡ್ -19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಮಧ್ಯೆ ಯುಎಸ್‌ನಲ್ಲಿ ಸಿಲುಕಿಕೊಂಡಿದ್ದ 200 ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಅವರ ಕುಟುಂಬಗಳನ್ನು ಐಟಿ ಸೇವೆಗಳ ಪ್ರಮುಖ ಇನ್ಫೋಸಿಸ್ ಮರಳಿ ಕರೆತಂದಿದೆ.
“ಇನ್ಫೋಸಿಸ್ ಚಾರ್ಟರ್ಡ್ ಫ್ಲೈಟ್ ಕಳೆದ ರಾತ್ರಿ ಎಸ್ಎಫ್ಒ (ಸ್ಯಾನ್ ಫ್ರಾನ್ಸಿಸ್ಕೊ) ಯಿಂದ ನೂರಾರು ಉದ್ಯೋಗಿಗಳು ಮತ್ತು ಕುಟುಂಬಗಳನ್ನು ಬೆಂಗಳೂರಿಗೆ ಕರೆತಂದಿದೆ” ಎಂದು ಇನ್ಫೋಸಿಸ್ ಅಸೋಸಿಯೇಟ್ ಉಪಾಧ್ಯಕ್ಷ ತಿಳಿಸಿದ್ದಾರೆ.
ಉದ್ಯೋಗಿಗಳು ಕ್ಲೈಂಟ್ ಸೈಟ್‌ಗಳಲ್ಲಿ ಕೆಲಸ ಮಾಡುತ್ತಿದ್ದು, ಇನ್ನೂ ಕೆಲವರು ಕೆಲವರು ಸಭೆ ಅಥವಾ ಕಾರ್ಯಕ್ರಮಕ್ಕಾಗಿ ಯುಎಸ್‌ಗೆ ಪ್ರಯಾಣ ಬೆಳೆಸಿದ್ದರು. ಭಾರತೀಯ ಐಟಿ ಸೇವಾ ಸಂಸ್ಥೆಗಳಿಗೆ ತಮ್ಮ ಆದಾಯದ ಬಹುಪಾಲು ಪಾಲನ್ನು ಹೊಂದಿರುವ ಯುಎಸ್ ದೊಡ್ಡ ಮಾರುಕಟ್ಟೆಯಾಗಿದೆ. ಇನ್ಫೋಸಿಸ್ಗೆ ಸಂಬಂಧಿಸಿದಂತೆ, ಮಾರ್ಚ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಉತ್ತರ ಅಮೆರಿಕಾ ತನ್ನ ಆದಾಯದ ಶೇಕಡಾ 60 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.

