ಟ್ರಂಪ್‌ಗೆ ಹೀನಾಯ ಸೋಲು ಎಂದ ಸಮೀಕ್ಷೆ: ವರದಿಗಳೇ ಸುಳ್ಳು ಗೆಲುವು ನನ್ನದೇ: ಟ್ರಂಪ್‌

ಇಂದು (ನವೆಂಬರ್ 03) ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಹೀನಾಯವಾಗಿ ಸೋಲು ಅನುಭವಿಸಲಿದ್ದಾರೆ ಎಂದು ಸಮೀಕ್ಷಾ ವರದಿಗಳು ಹೇಳಿವೆ. ಟ್ರಂಪ್‌ ಸೋಲುತ್ತಾರೆ ಎಂದು ಹೇಳಿರುವ ವರದಿಗಳನ್ನು ನಿರಾಕರಿಸಿರುವ ಡೊನಾಲ್ಡ್‌ ಟ್ರಂಪ್‌ ಈ ಬಾರಿಯೂ ತಾವೇ ಗೆಲ್ಲುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿನ್ನೆ ಚುನಾವಣಾ ಪ್ರಚಾರದ ಅಂತಿಮ ಭಾಷಣದಲ್ಲಿ ಮಾತನಾಡಿದ ಟ್ರಂಪ್‌, “ನಾನು ಸೋಲುತ್ತೇನೆ ಎಂದು ವರದಿ ಕೊಟ್ಟಿರುವ ಸಮೀಕ್ಷೆಗಳು ನಕಲಿಯಾಗಿವೆ. ಅವಾವೂ ಲೆಕ್ಕಕ್ಕಿಲ್ಲ. ಈ ಬಾರಿಯೂ ನಾನೇ ಗೆಲ್ಲುತ್ತೇನೆ” ಎಂದು ಹೇಳಿದ್ದಾರೆ.

ನಾಲ್ಕು ವರ್ಷದ ಹಿಂದೆ (ಕಳೆದ ಚುನಾವಣೆಯಲ್ಲಿ) ಎದುರಾಳಿಗೆ ಆಘಾತ ನೀಡುವಂತಹ ಗೆಲುವು ನಮ್ಮದಾಗಿತ್ತು. ಈ ಬಾರಿಯೂ ಅಂತದ್ದೇ ಗೆಲುವು ಸಾಧಿಸುತ್ತೇವೆ ಎಂದು ಹೇಳಿದ್ದಾರೆ.

ಇಂದು ಅಮೆರಿಕಾದಾದ್ಯಂತ ಚುನಾವಣೆ ನಡೆಯುತ್ತಿದ್ದು, ಗೆಲುವು ಸಾಧಿಸುವವರು ಯಾರು ನೋಡುಬೇಕಿದೆ.


ಇದನ್ನೂ ಓದಿ: 10 ಲಕ್ಷ ರೂ. ಕಾಮಗಾರಿ ಮುಂಜೂರಾತಿಗೆ 1.5 ಲಕ್ಷ ಲಂಚ: ಇಬ್ಬರು ಅಧಿಕಾರಿಗಳ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights