ಟ್ರಂಪ್ ಟ್ರೋಲ್ : ‘ಡೊನಾಲ್ಡ್ ಶ್ವೇತಭವನ ತೊರೆಯದಿದ್ದರೆ ಮುಂಬೈ ಪೊಲೀಸರನ್ನು ಕಳುಹಿಸಿ’

ಭಾರೀ ನೀರಿಕ್ಷಿತ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡನ್ ಜಯಗಳಿಸಿದ್ದಾರೆ. 77 ವರ್ಷದ ಮಾಜಿ ಉಪಾಧ್ಯಕ್ಷ ಬಿಡೆನ್ ಪೆನ್ಸಿಲ್ವೇನಿಯಾ ಚುನಾವಣೆಯಲ್ಲಿ ಗೆದ್ದು ಅಮೆರಿಕದ 46 ನೇ ಅಧ್ಯಕ್ಷರಾಗಲಿದ್ದಾರೆ. ಆದರೆ ಅವರ ಎದುರಾಳಿ ಡೊನಾಲ್ಡ್ ಟ್ರಂಪ್ ಇದನ್ನು ನಂಬಲು ನಿರಾಕರಿಸುತ್ತಿದ್ದಾರೆ. ತಾವೇ ಗೆದ್ದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಈ ಅಮೇರಿಕದಲ್ಲಿ ಜಯಗಳಿಸಿದ ಬಿಡೆನ್ 270 ಕ್ಕೂ ಹೆಚ್ಚು ಚುನಾವಣಾ ಮತಗಳನ್ನು ಪಡೆದಿದ್ದಾರೆ. ಅದು ಅವರ ಗೆಲುವಿಗೆ ಬಹಳ ಅಗತ್ಯವಾಗಿತ್ತು. ಅವರಲ್ಲದೆ, ಭಾರತೀಯ ಸೆನೆಟರ್ ಕಮಲಾ ಹ್ಯಾರಿಸ್ ಯುಎಸ್ನಲ್ಲಿ ಮೊದಲ ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. 56 ವರ್ಷದ ಕಮಲಾ ಹ್ಯಾರಿಸ್ ದೇಶದ ಮೊದಲ ಭಾರತೀಯ, ಕಪ್ಪು ಮತ್ತು ಆಫ್ರಿಕನ್ ಅಮೆರಿಕನ್ ಉಪಾಧ್ಯಕ್ಷರಾಗಲಿದ್ದಾರೆ. ಮುಂದಿನ ವರ್ಷ ಜನವರಿ 20 ರಂದು ಬಿಡೆನ್ ಮತ್ತು ಹ್ಯಾರಿಸ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ, ‘ಡೊನಾಲ್ಡ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಹೌದು, ಡೊನಾಲ್ಡ್ ಸೋಲಿನ ನಂತರ ಅವರ ಬಗ್ಗೆ ಅನೇಕ ಜನರು ಮಾತನಾಡುತ್ತಿದ್ದಾರೆ.

ಟ್ರಂಪ್ಸ್ ಶ್ವೇತಭವನವನ್ನು ಬಿಡಲು ನಿರಾಕರಿಸಿದರೆ, ಮುಂಬೈ ಪೊಲೀಸರನ್ನು ಅಲ್ಲಿಗೆ ಕಳುಹಿಸಬೇಕು ಎಂದು ನೆಟ್ಟಿಗರು ಟ್ವೀಟ್ ಮಾಡ್ತಾಯಿದ್ದರೆ, ಇತ್ತ ಬಿಡೆನ್ ವಿಜಯದ ನಂತರ, “ನಾನು ಸೋಮವಾರದಿಂದ ಕಾನೂನು ಹೋರಾಟವನ್ನು ತೀವ್ರಗೊಳಿಸುತ್ತೇನೆ. ಮತಗಳ ಎಣಿಕೆ ಪ್ರಾಮಾಣಿಕವಾಗಿ ಪೂರ್ಣಗೊಳ್ಳುವವರೆಗೆ ಮೌನವಾಗಿರುವುದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights