ಬೆಂಗಳೂರು ಪೊಲೀಸರಿಂದ ‘ಬಂಗಾರದ ಬೇಟೆ’ : 6ಕೆಜಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್!

ನಿನ್ನೆ ರಾತ್ರೋರಾತ್ರಿ ಅಧಿಕ ಪ್ರಮಾಣದ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಕೆಆರ್ ಮಾರ್ಕೇಟ್ ವ್ಯಾಪ್ತಿಯ ಪೊಲೀಸರು ಬಂಧಿಸಿದ್ದಾರೆ. ತುಂಬಾ ದೊಡ್ಡ ಪ್ರಮಾಣದ ಬಂಗಾರವನ್ನು ವ್ಯಕ್ತಿಗಳಿಬ್ಬರು ಸಾಗಿಸುತ್ತಿದ್ದ ಎನ್ನಲಾಗುತ್ತಿದೆ. ಆದರೆ ಈ ಚಿನ್ನ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ವ್ಯಕ್ತಿ ಬಾಯಿಬಿಟ್ಟಿಲ್ಲ.

ಆಕ್ಟಿವ್ ಹೋಂಡಾದಲ್ಲಿ ಇಬ್ಬರು ವ್ಯಕ್ತಿಗಳು ಒಡವೆಗಳನ್ನು ಸಾಗಿಸಲಾಗುತ್ತಿದ್ದರು. ಇವರ ಬಳಿ ಬೆಲೆಬಾಳುವ ಹಾರಗಳನ್ನು ಪೊಲೀಸರು ವಶ ಪಡೆಸಿಕೊಂಡಿದ್ದಾರೆ. ನಿನ್ನೆ ಮಧ್ಯರಾತ್ರಿ ಈ ಇಬ್ಬರು ಚಿನ್ನಾ ಸಾಗಿಸುತ್ತಿದ್ದರು. ಸದ್ಯ ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇವರ ಬಳಿ ಇದ್ದ ಆಭರಣಗಳು ಚಿನ್ನದ್ದಾ ಎನ್ನುವ ವಿಚಾರಣೆ ಕೂಡ ಪೊಲೀಸರು ಮಾಡಿದ್ದು, ಇದು 6 ಕೆಜಿ ತೂಕದ ಅಸಲಿ ಚಿನ್ನ ಎನ್ನುವುದು ದೃಢಪಟ್ಟಿದೆ. ಇದರಲ್ಲಿ 65 ನಕ್ಲೇಸ್, 7 ಜತೆ ಬಳೆಗಳು, 175 ಗ್ರಾಂ ಚಿನ್ನ ಸೇರಿವೆ. ಮುಂಬೈ ನಿಂದ ಕೊರೆಯರ್ ಮೂಲಕ ಈ ಚಿನ್ನಾ ತರಿಸಲಾಗಿದೆ.

ಒಂದು ವೇಳೆ ಇದು ಅಸಲಿ ವೈಹಿವಾಟು ಆಗಿದ್ದರೆ ರಾತ್ರೋರಾತ್ರಿ ವ್ಯಕ್ತಿಗಳು ಯಾಕೆ ಸಾಗಿಸುತ್ತಿರು ಎನ್ನುವ ಅನುಮಾನ ಪೊಲೀಸರಿಗೆ ಮೂಡಿದೆ. ಮಾತ್ರವಲ್ಲದೇ ಈ ಆಭರಣಗಳಿಗೆ ಸಂಬಂಧಿಸಿದ ಸೂಕ್ತ ದಾಖಲಾತಿಗಳು ವ್ಯಕ್ತಿಗಳಿಬ್ಬರ ಬಳಿಯೂ ಇರಲಿಲ್ಲ ಎಂದು ಪೊಲೀಸರಿಂದ ತಿಳಿದುಬಂದಿದೆ.

ಇಬ್ಬರು ಚಿನ್ನಾಭರಣ ಅಂಗಡಿಗಳಿಗೆ ಈ ಆಭರಣಗಳನ್ನು ಸಾಗಿಸುತ್ತಿದ್ದರು ಎನ್ನುವ ಮಾಹಿತಿ ಮಾತ್ರ ಹೊರಬಿದ್ದಿದೆ. ಆದರೆ ಯಾರಿಂದ? ಯಾರಿಗೆ ಸಾಗಿಸುತ್ತಿದ್ದರು ಎನ್ನುವ ಬಗ್ಗೆ ಮಾತ್ರ ವ್ಯಕ್ತಿಗಳಿಬ್ಬರಿಂದ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights