ಕೇಂದ್ರದಿಂದ ಹೊಸ ಕಾರ್ಮಿಕ ಸಂಹಿತೆ ಕರಡು ಬಿಡುಗಡೆ: ಕರಡಿನ ಮುಖ್ಯಾಂಶಗಳು!

ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗೆ ಸಂಬಂಧಿಸಿದ ಹೊಸ ಕಾರ್ಮಿಕ ಸಂಹಿತೆ-2020ರ ಕರಡನ್ನು ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ್ದು, ಆಕ್ಷೇಪಣೆಗಳಿದ್ದಲ್ಲಿ 45 ದಿನಗಳ ಒಳಗಾಗಿ ಸಲ್ಲಿಸುವಂತೆ ಕೋರಿದೆ.

ಗರಿಷ್ಠ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲಾಗಿದ್ದು, ಗರಿಷ್ಠ ನಾಲ್ಕು ಗಂಟೆಗಳ ಹೆಚ್ಚುವರಿ ಕೆಲಸಕ್ಕೆ ಅವಕಾಶವಿದೆ. ಆದರೆ ಕೆಲಸದ ಒಟ್ಟು ಅವಧಿ ವಾರಕ್ಕೆ 48 ಗಂಟೆಗಳನ್ನು ಮೀರುವಂತಿಲ್ಲ. ಪ್ರತಿದಿನ ಕೆಲಸದ ಅವಧಿ ಎಂಟು ಗಂಟೆಗಿಂತ 15 ನಿಮಿಷ ಅಧಿಕವಾದರೂ ಹೆಚ್ಚುವರಿ ಕೆಲಸಕ್ಕೆ ವೇತನ ನೀಡಬೇಕಾಗುತ್ತದೆ. ಇದನ್ನು 30 ನಿಮಿಷಗಳ ಹೆಚ್ಚುವರಿ ಕೆಲಸ ಎಂದು ಪರಿಗಣಿಸಬೇಕಾಗುತ್ತದೆ. ಇದಕ್ಕೂ ಹಿಂದೆ 30 ನಿಮಿಷಕ್ಕಿಂತ ಕಡಿಮೆ ಅವಧಿಯನ್ನು ಹೆಚ್ಚುವರಿ ಕೆಲಸ ಎಂದು ಪರಿಗಣಿಸುತ್ತಿರಲಿಲ್ಲ.

ಹೊಸ ಸಂಹಿತೆಯು ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಇತರ ನಿರ್ಮಾಣ ಕಾರ್ಮಿಕರು, ಗಣಿಗಾರಿಕೆ ಕಾರ್ಮಿಕರು, ಅಂತರ ರಾಜ್ಯ ವಲಸೆ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಕಾರ್ಯನಿರತ ಪತ್ರಕರ್ತರು, ದೃಶ್ಯ-ಶ್ರವ್ಯ ಕಾರ್ಮಿಕರು ಮತ್ತು ಮಾರಾಟ ಪ್ರತಿನಿಧಿಗಳಿಗೆ ಅನ್ವಯವಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.


ಇದನ್ನೂ ಓದಿ: ಪ. ಬಂಗಾಳದಲ್ಲಿ ವೈರಿ ಯಾರು? BJPಯೋ-TMCಯೋ? ಗೊಂದಲದಲ್ಲಿ ಎಡರಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights