FACT CHECK | ಬ್ರಾಹ್ಮಣರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ತಮಿಳುನಾಡಿನಲ್ಲಿ ಬೃಹತ್ ರ್ಯಾಲಿ ಎಂದು 2012ರ ದೇವಸ್ಥಾನದ ಬ್ರಹ್ಮೋತ್ಸವದ ಫೋಟೊ ಹಂಚಿಕೆ
ನವೆಂಬರ್ 3 ರಂದು, ಇಂದು ಮಕ್ಕಳ್ ಕಚ್ಚಿ ನಾಯಕ ಅರ್ಜುನ್ ಸಂಪತ್ ನೇತೃತ್ವದ ರ್ಯಾಲಿಯಲ್ಲಿ ಭಾಗವಹಿಸಲು ತಮಿಳುನಾಡಿನಾದ್ಯಂತದ ಬ್ರಾಹ್ಮಣರು ಚೆನ್ನೈನ ರಾಜರತ್ನಂ ತಿತಾಲ್ನಲ್ಲಿ ಜಮಾಯಿಸಿದರು. ರ್ಯಾಲಿಯ ಮುಖ್ಯ ಉದ್ದೇಶವೆಂದರೆ ಕೆಲವು ರಾಜಕೀಯ ಮತ್ತು ಸಾಮಾಜಿಕ ಗುಂಪುಗಳು ಬ್ರಾಹ್ಮಣ ಸಮುದಾಯದ ಬಗ್ಗೆ ನಕಾರಾತ್ಮಕ ವಿಚಾರಗಳನ್ನು ಹರಡಲು ಯೋಜಿಸುತ್ತಿವೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣ ಸಮುದಾಯದ ವಿರುದ್ಧ ದ್ವೇಷದ ಮಾತುಗಳು ಹೆಚ್ಚಾಗುತ್ತಿರುವುದನ್ನು ವಿರೋದಿಸಿ, ತಮ್ಮ ಧಾರ್ಮಿಕ ಸಮುದಾಯವನ್ನು ತಾರತಮ್ಯ ಮತ್ತು ಅಪಮಾನದಿಂದ ರಕ್ಷಿಸಲು 1955 ರ ಪ್ರೊಟೆಕ್ಷನ್ ಸಿವಿಲ್ ರೈಟ್ಸ್ ಆಕ್ಟ್ (ಪಿಸಿಆರ್) ಮೂಲಕ ರಕ್ಷಣೆ ಮಾಡುವಂತೆ, (ಇದು ‘ಅಸ್ಪೃಶ್ಯತೆಯ ಪ್ರಚಾರ ಮತ್ತು ಆಚರಣೆಯನ್ನು ಶಿಕ್ಷಾರ್ಹ ಅಪರಾಧ’ ಎಂದು ತಿಳಿಸುತ್ತದೆ) ತಮಿಳುನಾಡು ಸರ್ಕಾರದ ವಿರುದ್ದ ನಡೆದ ಬ್ರಾಹ್ಮಣರ ಬೃಹತ್ ಪ್ರತಿಭಟನೆ ಎಂದು ಹೇಳಲಾಗುತ್ತಿದೆ.
IMK’s powerful protest and meeting, standing up against the relentless verbal abuse directed at Brahmins for decades, has been entirely blacked out by TN Dravidian media.
This silence speaks volumes—the fear of a Brahmin resurgence is very real for the D.Model. pic.twitter.com/dAM03afnoD
— Indu Makkal Katchi (off) (@Indumakalktchi) November 4, 2024
ತಮಿಳುನಾಡಿನಲ್ಲಿ ಪ್ರಥಮ ಬಾರಿಗೆ ಬ್ರಾಹ್ಮಣ ದಂಗೆ ನಡೆಯುತ್ತಿದೆ ಎಂದು ಬಲಪಂಥೀಯರು ಪ್ರಚಾರ ಮಾಡುತ್ತಿದ್ದಾರೆ. ಇಂದು ಮಕ್ಕಳ್ ಕಚ್ಚಿ ತನ್ನ ಅಧಿಕೃತ ‘X’ ಪುಟದಲ್ಲಿ, ‘ಬ್ರಾಹ್ಮಣ ಸಮುದಾಯವು ದಶಕಗಳಿಂದ ಬ್ರಾಹ್ಮಣರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ನಿಂದನೆ, ಅಪಮಾನಗಳ ವಿರುದ್ಧ ನಡೆಯುತ್ತಿರುವ ಬ್ರಾಹ್ಮಣರ ಪ್ರತಿಭಟನೆ’ ಎಂಬ ಬರಹದೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ತಮಿಳುನಾಡಿನಲ್ಲಿ ಬ್ರಾಹ್ಮಣರು ತಮ್ಮ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ದೌರ್ಜನ್ಯ ಮತ್ತು ಅಪಮಾಗಳ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಪ್ರಸಾರವಾಗುತ್ತಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ಫೋಟೋವೊಂದು ಫೋಟೊ ಸೈಟ್ Flickr.com ನಲ್ಲಿ ಕಂಡುಬಂದಿದೆ. ಈ ಫೋಟೋವನ್ನು ಮೇ 10, 2012 ರಂದು ತೆಗೆಯಲಾಗಿದೆ ಮತ್ತು ಫೆಬ್ರವರಿ 14, 2013 ರಂದು ಅಪ್ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಅಲ್ಲದೆ, ಈ ಫೋಟೋ ಚೆನ್ನೈನ ತಿರುವಲ್ಲಿಕೇಣಿಯಲ್ಲಿರುವ ಪಾರ್ಥಸಾರಥಿ ದೇವಸ್ಥಾನದ ಬ್ರಹ್ಮೋತ್ಸವ ತೀರ್ಥೋತ್ಸವದ ಸಂದರ್ಭದಲ್ಲಿ ತೆಗೆದದ್ದು ಎನ್ನಲಾಗಿದೆ. ಈ ಫೋಟೋ ಮತ್ತು ಹರಿದಾಡುತ್ತಿರುವ ಫೋಟೋವನ್ನು ಪಕ್ಕಕ್ಕಿಟ್ಟು ನೋಡಿದಾಗ ಮುಂಭಾಗದಲ್ಲಿರುವವರು ಎರಡರಲ್ಲೂ ಒಂದೇ ವ್ಯಕ್ತಿಗಳಾಗಿರುವುದು ಕಂಡುಬರುತ್ತದೆ. ಮೇಲಿನ ಎರಡು ಛಾಯಾಚಿತ್ರಗಳು ಒಂದೇ ಘಟನೆಯನ್ನು ವಿವಿಧ ಕೋನಗಳಿಂದ ಸೆರೆಹಿಡಿಯುತ್ತವೆ ಎಂದು ಇದರಿಂದ ತಿಳಿಯಬಹುದು.

ಇದು 2012ರ ಪಾರ್ಥಸಾರಥಿ ದೇವಸ್ಥಾನದ ಬ್ರಹ್ಮೋತ್ಸವದ ವೇಳೆ ಬ್ರಾಹ್ಮಣರ ಮೆರವಣಿಗೆಯ ಫೋಟೋ ತೆಗೆದಿರುವುದು ಸ್ಪಷ್ಟವಾಗಿದೆ. ಈ ಫೋಟೋದೊಂದಿಗೆ ಬ್ರಾಹ್ಮಣರ ಮೇಲೆ ಎದ್ದಿರುವ ಮಾಹಿತಿ ತಪ್ಪು. ನವೆಂಬರ್ 3 ರಂದು ಇಂದು ಮಕ್ಕಳ್ ಪಾರ್ಟಿ ಆಯೋಜಿಸಿದ್ದ ರ್ಯಾಲಿಗೂ ಈ ಛಾಯಾಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡಿನಲ್ಲಿ ಇಂದು ಮಕ್ಕಳ್ ಕಚ್ಚಿ ಮತ್ತು ಇತರ ಬ್ರಾಹ್ಮಣರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸುಳ್ಳು ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಈ ಫೋಟೋ 2012 ರಲ್ಲಿ ಪಾರ್ಥಸಾರಥಿ ದೇವಸ್ಥಾನದಲ್ಲಿ ಬ್ರಹ್ಮೋತ್ಸವದ ಸಮಯದಲ್ಲಿ ತೆಗೆದದ್ದು. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತದ ವಿರುದ್ದ ಮುಸ್ಲಿಂ ಮಕ್ಕಳು ಮಾತನಾಡುತ್ತಿರುವ ವಿಡಿಯೋ ಭಾರತದ್ದಲ್ಲ

