ಬೆಂಗಳೂರು ಸ್ವಚ್ಛತೆಗೆ ಯೋಜನೆ ರೂಪಿಸಿದ ನಟ ಅನಿರುದ್ಧ್; ಪ್ರಮುಖ ಅಂಶಗಳು!

ಕನ್ನಡ ಚಿತ್ರರಂಗದ ದಿಗ್ಗಜ ವಿಷ್ಣುವರ್ಧನ್‌ ಅವರ ಅಳಿಯ, ನಟ ಅನಿರುದ್ಧ್ ಅವರು ರಾಜಧಾನಿ ಬೆಂಗಳೂರಿನ ಸ್ವಚ್ಚತೆಗೆ ಜಾಗೃತಿ ಮೂಢಿಸುವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಸ್ವಚ್ಚತೆಗೆ ಸಂಬಂಧಿಸಿದಂತೆ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಆ ವಿಚಾರವಾಗಿ ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್‌ ಜೊತೆಗೆ ಚರ್ಚಿಸಿದ್ದಾರೆ.

ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿದ ವಿಚಾರಗಳನ್ನು ಅನಿರುದ್ಧ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಚರ್ಚಿಸಿದ ವಿಚಾರಗಳು ಇಂತಿವೆ.

1) ಸಲಹೆಗಾರರ ಮಂಡಳಿಯನ್ನು ಸ್ಥಾಪಿಸಿ ಆ ಮಂಡಳಿಯಲ್ಲಿ ಸಂಶೋಧಕರು, ಪಟ್ಟಣ ಯೋಜಕರು, ಸಮಾಜ ಸೇವಕರು, ಸಾಮಾಜಿಕ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಮಲ್ಟಿ ನ್ಯಾಷನಲ್ ಕಂಪನಿಗಳು, ಮತ್ತು ಇತರ ಗಣ್ಯರು ಇರುತ್ತಾರೆ.

2) ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್ ಮಾದರಿಯ ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಫಲಕಗಳನ್ನ ಬಳಸುವುದು ಮತ್ತು ಎರಡೂ ಬದಿಯಲ್ಲಿ ಗೋಡೆಗಳನ್ನ ಕಟ್ಟಿ ಅವುಗಳ ಮೇಲೆ ವರ್ಟಿಕಲ್ ಗಾರ್ಡನಿಂಗ್ ಮಾಡುವುದು.

3) ಮುಚ್ಚಿರೋ ಕಸ ಸಂಗ್ರಹಿಸೋ ಆಧುನಿಕ ವಾಹನ, ಅಭಿವೃದ್ಧಿಗೊಂಡಿರೋ ದೇಶಗಳಲ್ಲಿ ಇರೋಹಾಗೆ
4) ಸ್ವಚ್ಛ ಮುಚ್ಚಿರೋ (ಒಣ ಮತ್ತು ಹಸಿ) ಕಸದ ಪೆಟ್ಟಿಗೆಗಳನ್ನ ಅಲ್ಲಲ್ಲಿ ಇರಿಸುವುದು, ಇವುಗಳು ಕಸ ಸಂಗ್ರಹಿಸೋ ಆಧುನಿಕ ವಾಹನಗಳಿಂದ ಎತ್ತಲಾಗುವುದು.

5) ಸಿಸಿಟಿವಿ ಗಳನ್ನು ಕಪ್ಪುಚುಕ್ಕೆ ಇರುವಂತಹ ಸ್ಥಳಗಳಲ್ಲಿ ಹಾಕುವುದು.

6) ಪೌರಕಾರ್ಮಿಕರಿಗೆ ಸುರಕ್ಷಿತ ಕ್ರಮಗಳನ್ನ, ಕೈಗವಸುಗಳನ್ನ ಮತ್ತು ಬೂಟುಗಳನ್ನು ಒದಗಿಸುವುದು.

7) ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.

8) ‘ಆರ್ಯವರ್ಧನ್ ಯೋಜನೆ’ – ಕಸ ಕೊಳ್ಳುವುದು. ಇದು ಆದಲ್ಲಿ ಜನಗಳಿಗೆ ಕಸದಲ್ಲಿ ಕಾಸು ಕಾಣುವುದು ಮತ್ತು ಅಲ್ಲಲ್ಲಿ ಹಾಕುವುದನ್ನು ನಿಲ್ಲಿಸಬಹುದು.

9) ಒಳ್ಳೆ ರಸ್ತೆಗಳು, ವೈಜ್ಞಾನಿಕ ಹಂಪ್ ಗಳು ಮತ್ತು ಎರಡೂ ಬದಿಯಲ್ಲಿ ಫುಟ್ ಪಾಥ್ ಗಳು

10) ರೋಟರಿ, ಲಯನ್ಸ್ ತರಹದ ಸಾಮಾಜಿಕ ಸಂಸ್ಥೆಗಳಿಗೆ ಮತ್ತು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಬಿ. ಬಿ.ಎಂ.ಪಿ ಯ ಜೊತೆಗೂಡಿ ಕೆಲಸ ಮಾಡಲು ಆಹ್ವಾನಿಸುವುದು.

11) ರಸ್ತೆಯಲ್ಲಿ ಕಸ ಹಾಕಿದವರಿಗೆ ಅತಿಯಾದ ದಂಡ ಮತ್ತು ಕಠಿಣ ಶಿಕ್ಷೆ ವಿಧಿಸುವುದು.

ಅನಿರುದ್ಧ ಅವರು ಫೇಸ್‌ಬುಕ್‌ ಪೋಸ್ಟ್‌ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.


ಇದನ್ನೂ ಓದಿ: ತಮಿಳುನಾಡು: 2021ರ ಚುನಾವಣೆಗೆ BJP ಮತ್ತು AIADMK ಮೈತ್ರಿಗೆ ಅಮಿತ್‌ ಶಾ ಒಪ್ಪಿಗೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights