ಬಿಎಸ್ವೈ ವಿರುದ್ಧ ಶ್ರೀನಿವಾಸ್ ಪ್ರಸಾದ್ ಗರಂ : ಬಿಜೆಪಿಯಲ್ಲಿ ಅಸಮಧಾನದ ಹೊಗೆ..!

ಯಡಿಯೂರಪ್ಪನವರನ್ನು ಸಿಎಂ ಮಾಡಲು ಶ್ರೀನಿವಾಸ್ ಪ್ರಸಾದ್ ಪಾತ್ರ ಬಹು ದೊಡ್ಡದು. ಆದರೆ ಸದ್ಯ ಶ್ರೀನಿವಾಸ್ ಪ್ರಸಾದ್ ಯಡಿಯೂರಪ್ಪನ ವಿರುದ್ಧ ಗರಂ ಆಗಿದ್ದಾರೆ. ಈ ಬಗ್ಗೆ ಬಹಿರಂಗವಾಗಿಯೇ ಶ್ರೀನಿವಾಸ್ ಪ್ರಸಾದ್ ಹೇಳಿಕೊಂಡಿದ್ದಾರೆ.

ಹೌದು… ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ತುಂಬಿಸುತ್ತಿದ್ದಾರೆ. ಈ ನಡುವೆ ಪಕ್ಷದಲ್ಲಿ ಅಸಮಧಾನದ ಹೊಗೆ ಆಡುತ್ತಿದೆ. ಮೈಸೂರಿನಲ್ಲಿಂದು ಸಿಎಂ ವಿರುದ್ದ ಮಾತನಾಡಿರುವ ಶ್ರೀನಿವಾಸ್ ಪ್ರಸಾದ್, ಯಡಿಯೂರಪ್ಪ ಸಿಎಂ ಆಗಿ ಆಯಿತಲ್ಲ. ಈಗ ಅವರ ಕೆಲಸ ಮುಗಿದಿದೆ, ನಮ್ಮ ಅಗತ್ಯ ಅವರಿಗಿಲ್ಲ ಎಂದು ನೇರವಾಗಿಯೇ ಚಾಟಿ ಬೀಸಿದ್ದಾರೆ.

ಯಡಿಯೂರಪ್ಪನವರು ಸಿಎಂ ಆದ ನಂತರ ಶ್ರೀನಿವಾಸ್ ಪ್ರಸಾದ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅಂತ ಅವರ ಆಪ್ತ ವಲಯದಲ್ಲಿ ಗುಸು ಗುಸು ನಡೆಯುತ್ತಿತ್ತು. ಇದ್ಯಾವುದಕ್ಕೂ ಇಷ್ಟು ದಿನ ಶ್ರೀನಿವಾಸ್ ಪ್ರಸಾದ್ ನೇರವಾಗಿ ಪ್ರತಿಕ್ರಿಯಿಸಿರಲಿಲ್ಲ.

ಆದರೆ, ಯಾವಾಗ ನಿಗಮ ಮಂಡಳಿಗಳ ನೇಮಕದ ಹೆಸರುಗಳು ಒಂದೊಂದಾಗೇ ಪ್ರಕಟವಾಗಲು ಪ್ರಾರಂಭವಾಯಿತೋ, ಅದರಲ್ಲಿ ತಾವು ಸೂಚಿಸಿದವರ ಹೆಸರುಗಳು ಇಲ್ಲ ಅಂತ ಗೊತ್ತಾಯ್ತೋ ಆಗಲೇ ಸಿಎಂ ವಿರುದ್ಧ ಕೆಂಡ ಕಾರಿದ್ದಾರೆ. ಅದರಲ್ಲೂ ಇಂದು ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಮಾಡಲು ಸುತ್ತೂರಿಗೆ ಸಿಎಂ ಭೇಟಿ ನೀಡಿದ್ದರು. ಈ ವೇಳೆ ಸುತ್ತೂರು ಶ್ರೀಗಳ ಎದುರೇ ಶ್ರೀನಿವಾಸ್ ಪ್ರಸಾದ್ ಗರಂ ಆಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights