ವರ್ತೂರ್ ಪ್ರಕಾಶ್ ಹಿಂದೆ ಮಹಿಳೆಯ ನೆರಳು? : ವೈಯಕ್ತಿಕ ಕಾರಣಕ್ಕೆ ಕಿಡ್ನ್ಯಾಪರ್ಸ್ ಹಲ್ಲೆ ಮಾಡಿದ್ರಾ?

ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಹಿಂದೆ ವೈಯಕ್ತಿ ಕಾರಣ ಇದಿಯಾ ಅನ್ನೋ ಅನುಮಾನ ಶುರುವಾಗಿದೆ. ಅಸಲಿ ವಿಚಾರ ಮುಚ್ಚಿಡಲಾಗಿದಿಯಾ? ನಿಜಕ್ಕೂ ಇದು ಸತ್ಯಾನಾ? ಕಿಡ್ನ್ಯಾಪ್ ಹಾದಿಯನ್ನು ತಪ್ಪಿಸಿದ್ರಾ ಪ್ರಕಾಶ್? ಮಾಜಿ ಸಚಿವ ಹೇಳಿದಂತೆ ಬೆಳ್ಳಂದೂರಿನಲ್ಲಿ ಪತ್ತೆಯಾದ ಕಾರಿನ ಗಾಜು ಒಡೆದಿದಿಯಾ? 80 ಕೋಟಿ ಕಿಡ್ನ್ಯಾಪರ್ಸ್ ಕೇಳಿದ್ರಾ? ಕೇಸ್ ತಡ ಮಾಡಿದ್ಯಾಕೆ? ಇಂತೆಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತವೇ ಸಿಕ್ಕಿಲ್ಲ.

ಹೌದು… ಕಾರ್ ಕಿಟಕಿ ಗಾಜುಗಳು ಒಡೆದಿಲ್ಲ. ಮಾತ್ರವಲ್ಲ ಪ್ರಕಾಶ್ ಇದ್ದ ಕಾರಿಗೆ ನಂಬರ್ ಪ್ಲೇಟ್ ಇಲ್ಲ. ಹೀಗಾಗಿ ವರ್ತೂರ್ ಪ್ರಕಾಶ್ ಹೇಳಿಗೆಗೂ ಕಾರಿನ ಸ್ಥಿತಿಗತಿಗೂ ಯಾವುದೂ ತಾಳೆಯಾಗುತ್ತಿಲ್ಲ. ಹೀಗಾಗಿ ಪ್ರಕಾಶ್ ಸುಳ್ಳು ಹೇಳುತ್ತಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ.

ವೈಯಕ್ತಿಕ ವಿಚಾರಕ್ಕೆ ಮಾತಿಗಾಗಿ ಕರೆದು ನಂತರ ಹಲ್ಲೆ ಮಾಡಲಾಯಿತಾ? ಇದು ಹಣಕಾಸಿನಾ ಅಥವಾ ವ್ಯವಹಾರಕ್ಕೆ ನಡೆದ ಗಲಾಟೆನಾ? ಅನ್ನೋ ಸಾಕಷ್ಟು ಪ್ರಶ್ನೆಗಳು ಏಳುತ್ತಿವೆ. ಬಳಿಕ ಮಾಜಿ ಸಚಿವರು ತಮಗೆ ಪ್ರಾಣ ಭಯ ಇದೆ ಎಂದು ಗೃಹ ಸಚಿವರನ್ನು ಮಾಜಿ ಸಚಿವರನ್ನು ಭೇಟಿ ನೀಡಿ ಭದ್ರತೆ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕಳೆದ ಬುಧುವಾರ(25) 10.30 ರಾತ್ರಿ ಕೋರಲಾರದ ಪ್ರಕಾಶ್ ಫಾರ್ಮ್ ಹೌಸ್ ನಿಂದ ಹೊರಟ ವೇಳೆ 8 ಜನ ಕಿಡ್ನಾಪ್ ಮಾಡುತ್ತಾರೆ. ಪ್ರಕಾಶ್ ಡ್ರೈವರ್ ಮೇಲೆ ಹಲ್ಲೆ ಮಾಡಿ, ಖಾರದ ಪುಡಿ ಹಾಕಲಾಗಿದೆ. ನಂತರ ಅವರನ್ನು 28ರಂದು ಬಿಡುಗಡೆ ಮಾಡಲಾಗುತ್ತದೆ. ನಂತರ ಎರಡು ದಿನದ ಬಳಿಕ ಅವರು ಕೇಸ್ ದಾಖಲಿಸುತ್ತಾರೆ. ಹೀಗಾಗಿ ಇದರ ಹಿಂದಿರುವ ವ್ಯಕ್ತಿಗಳ ಬಗ್ಗೆ ವರ್ತೂರ್ ಪ್ರಕಾಶ್ ಗೆ ತಿಳಿದಿದೆ ಎನ್ನಲಾಗುತ್ತಿದೆ.

ನಿರ್ಜನ ಪ್ರದೇಶದಲ್ಲಿ ಕಾರ್ ಪತ್ತೆಯಾದ ಕಾರಣ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಈ ವೇಳೆ ವರ್ತೂರ್ ಪ್ರಕಾಶ್ ಕೋಲಾರದಲ್ಲಿ ನಡೆದ ಕಿಡ್ನಾಪ್ ಗೆ ಬೆಂಗಳೂರಿನಲ್ಲಿ ಕೇಸ್ ದಾಖಲಿಸುವ ಮೂಲಕ ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದಾರೆ. ಮಾತ್ರವಲ್ಲದೇ ಪರಿಚಯ ಇದ್ದವರಿಂದಲೇ ದುಡ್ಡಿಗೆ ಡಿಮ್ಯಾಂಡ್ ಮಾಡಲಾಗಿದಿಯೇ ಎನ್ನುವ ಅನುಮಾನ ಶುರುವಾಗಿದೆ.

ಮಾತ್ರವಲ್ಲ ಕೋಲಾರದಲ್ಲಿ ಮಾಜಿ ಸಚಿವರ ಕಿಡ್ನಾಪ್ ಮಾಡಿದ್ರೆ ಮೊಬೈಲ್ ಈವರೆಗೆ ಸ್ವಿಚ್ ಆಫ್ ಮಾಡಿಲ್ಲ. ಚಿಂತಾಮಣಿ ಫಾರ್ಮ್ ಹೌಸ್ ನಲ್ಲಿ ಅವರನ್ನು ಇಟ್ಟಿದ್ರು ಎನ್ನಲಾಗುತ್ತಿದೆ. ಕಿಡ್ನಾಪ್ ಆಗಿ ಬಿಡುಗಡೆ ಆದ ಒಂದು ವಾರದ ಬಳಿಕ ಕೇಸ್ ದಾಖಲಿಸಲಾಗಿದೆ. ಸಂಬಂಧಿಕರಲಾಗಲಿ, ಕಾರ್ ಡ್ರೈವರ್ ಆಗಲಿ ಕೇಸ್ ದಾಖಲಿಸಿರಲಿಲ್ಲ. ಕಾರು ಪೊಲೀಸರಿಗೆ ಸಿಕ್ಕ ಬಳಿಕ ಕೇಸ್ ದಾಖಲಿಸಲಾಗಿದೆ.

ಬಹಳ ಸುಲಭವಾಗಿ ಇದನ್ನ ಪತ್ತೆ ಹಚ್ಚಬಹುದು. ಯಾಕೆಂದ್ರೆ ವರ್ತೂರ್ ಪ್ರಕಾಶ್ ಅವರನ್ನು ಎಲ್ಲಿ ಕಿಡ್ನಾಪ್ ಮಾಡಿ ಇಟ್ಟಿದ್ದರು ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಈ ಫಾರ್ಮ್ ಹೌಸ್ ಯಾರದು ಅನ್ನೋದನ್ನ ಪತ್ತೆ ಹಚ್ಚಬಹುದು. ಆದರೆ ಕಂಪ್ಲೇಂಟ್ ಸರಿಯಾಗಿ ಕೊಟ್ಟಿಲ್ಲ ಅಂದರೆ ಅದೆಷ್ಟು ತನಿಖೆ ಚುರುಕಾಗಿ ನಡೆಯುತ್ತದೆ ಅನ್ನೋದು ಮಾತ್ರ ನಿಗೂಢವಾಗಿ ಉಳಿಯಲಿದೆ ಎನ್ನಲಾಗುತ್ತಿದೆ. ಯಾಕೆಂದ್ರೆ ಡ್ರೈವರ್ ಮೇಲೆ ಹಲ್ಲೆ ಮಾಡಲಾಗಿದೆ, ಅವರೂ ಕೇಸ್ ದಾಖಲಿಸಿಲ್ಲ. ಮಾತ್ರವಲ್ಲ ಮಾಜಿ ಸಚಿವರ ಸ್ವಂತ: ಕಾರ್ ಬಿಟ್ಟು ಬೇರೆ ಕಾರಿನಲ್ಲಿ ಅವರು ಯಾಕೆ? ಎಲ್ಲಿಗೆ? ಹೋಗಿದ್ದರು? ಒಂದು ವೇಳೆ ಕಿಡ್ನ್ಯಾಪ್ ಮಾಡಿದ್ದು ನಿಜವೇ ಆಗಿದ್ದರೆ ಸಚಿವರ ಫೋನ್ ಸ್ವಿಚ್ ಆಫ್ ಮಾಡಬೇಕಿತ್ತು ಅದೂ ಕೂಡ ಆಗಿಲ್ಲ. ಸರಿಯಾಗಿ ಕಂಪ್ಲೇಂಟ್ ಕೂಡ ಕೊಡಲಾಗಿಲ್ಲ. ಹೀಗಾಗಿ ಇದು ಯಾರೋ ಗೊತ್ತಿರೋರೇ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಮಾಜಿ ಸಚಿವರಿಗೂ ಸ್ಪಷ್ಟವಾಘಿ ತಿಳಿದಿತ್ತು. ಅವರು ಕಂಪ್ಲೇಂಟ್ ಕೊಡಲು ಬಹುಸಿರಲಿಲ್ಲ. ಯಾವಾಗ ಪೊಲೀಸರ ಕೈಗೆ ವಾಹನ ಸಿಕ್ಕಿಬಿತ್ತೋ ಆಗಲೇ ಇದೆಲ್ಲಾ ವಿಚಾರಗಳು ಹೊರಬಿದ್ದಿವೆ. ಹೀಗಾಗಿ ಕಿಡ್ನಾಪ್ ಬಗ್ಗೆ ಮಾಜಿ ಸಚಿವ ತಿಳಿದಿದ್ದು ಕಿಡ್ನಾಪರ್ ಬಗ್ಗೆ ಮಾಹಿತಿ ನೀಡಲು ಹಿಂಜರಿಯಲಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಜೊತೆಗೆ ಇದರ ಹಿಂದೆ ಹೆಣ್ಣಿನ ನೆರಳು ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯಲಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights