ಹೈದರಾಬಾದ್‌ ಚುನಾವಣೆ: ಗೆದ್ದು ಸೋತ TRS; ಸೋತು ಗೆದ್ದಿದೆ BJP

 

ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣಾ ಮತ ಎಣಿಕೆ ಮುಗಿದಿದ್ದು, ಆಡಳಿತಾರೂಢ ಟಿಆರ್‌ಎಸ್‌ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.  ಅಸಾಧಾರಣವಾದ ಹೈ-ವೋಲ್ಟೇಜ್ ಮತ್ತು ಆಕ್ರಮಣಕಾರಿ ಪ್ರಚಾರ ನಡೆಸಿದ ಬಿಜೆಪಿ ಎಡನೇ ಸ್ಥಾನ ಪಡೆದುಕೊಂಡಿದ್ದು, ಅಸದುದ್ದೀನ್ ಒವೈಸಿಯ ಎಐಎಂಐಎಂ ಪಕ್ಷವು 3ನೇ ಸ್ಥಾನಕ್ಕೆ ಕುಸಿದಿದೆ. ಆದರೆ, ಸ್ಥಾನಗಳನ್ನು ಪಡೆಯುವಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆಯಲ್ಲಿ ಟಿಆರ್‌ಎಸ್ 150 ವಾರ್ಡ್‌ಗಳಲ್ಲಿ 55 ಗೆದ್ದರೆ, ಬಿಜೆಪಿಗೆ 48 ವಾರ್ಡ್‌ಗಳು ಮತ್ತು ಅಸದುದ್ದೀನ್ ಒವೈಸಿಯ ಎಐಎಂಐಎಂ 44 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ ಕೇವಲ ಎರಡು ವಾರ್ಡ್‌ಗಳನ್ನು ಗೆಲ್ಲಲು ಸಾಧ್ಯವಾಯಿತು. ಹೈಕೋರ್ಟ್ ಆದೇಶದ ನಂತರ ಒಂದು ವಾರ್ಡ್‌ನ ಮತ ಎಣೀಕೆಯನ್ನು ನಿಲ್ಲಿಸಲಾಗಿದೆ. ಹಿಂದಿನ ಚುನಾವಣೆಯಲ್ಲಿ ಟಿಆರ್‌ಎಸ್ 99, ಎಐಐಎಂ 44 ಮತ್ತು ಬಿಜೆಪಿ 4 ಸ್ಥಾನಗಳನ್ನು ಗಳಿಸಿತ್ತು.

ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಟಿಆರ್‌ಎಸ್‌ ಪಕ್ಷವು 2016 ರ ಚುನಾವಣೆಗೆ ಹೋಲಿಸಿದರೆ 44 ಸ್ಥಾನಗಳನ್ನು ಕಳೆದುಕೊಂಡಿದೆ. ಕಳೆದುಕೊಳ್ಳಲು ಏನೂ ಇಲ್ಲದ ಬಿಜೆಪಿ, ಇದುವರೆಗೆ ಅಸ್ತಿತ್ವದಲ್ಲಿಲ್ಲದ ಪ್ರದೇಶದಲ್ಲಿ ದೊಡ್ಡ ಲಾಭವನ್ನು ಗಳಿಸಿದೆ. ಬಿಜೆಪಿಗೆ ಸಂಬಂಧಿಸಿದಂತೆ, ಈ ಫಲಿತಾಂಶಗಳು 2023 ರ ತೆಲಂಗಾಣ ಚುನಾವಣೆಗೆ ಅಡಿಗಲ್ಲಾಗಿದ್ದು, ಚುನಾವಣೆ ಗೆಲ್ಲಲು ಅಡಿಗಲ್ಲು ಹಾಕಿಕೊಟ್ಟಂತಾಗಿದೆ. ತೆಲಂಗಾಂಣದಲ್ಲಿ ಚುನಾವಣೆಯು ಟಿಆರ್‌ಎಸ್‌ ಮತ್ತು ಬಿಜೆಪಿ ನಡುವಿನ ಹೋರಾಟ ಎಂದು ಬಿಜೆಪಿಗರು ಹೇಳುತ್ತಾರೆ. ಇಲ್ಲಿ ಕಾಂಗ್ರೆಸ್‌ ಲೆಕ್ಕಕ್ಕಿಲ್ಲಂತಾಗಿದೆ. ಆದರೆ,, ಓವೈಸಿ ಅವರ ಪಕ್ಷ ಒಂದು ಹಂತಕ್ಕೆ ಪೈಟ್‌ ನೀಡಲಿದೆ.

“ಫಲಿತಾಂಶವು ನಾವು ನಿರೀಕ್ಷಿಸಿದಂತೆ ಬಂದಿಲ್ಲ. ನಮ್ಮ ನಿರೀಕ್ಷೆಗಿಂತ 20-25 ಸ್ಥಾನಗಳನ್ನು ನಾವು ಕಳೆದುಕೊಂಡಿದ್ದೇವೆ. 10-12 ಸ್ಥಾನಗಳು 200 ಕ್ಕಿಂತ ಕಡಿಮೆ ಮತಗಳ ಅಂತರವನ್ನು ಕಂಡಿವೆ. ನಿರಾಶೆಗೊಳ್ಳಲು ಏನೂ ಇಲ್ಲ, ನಾವು ಏಕೈಕ ದೊಡ್ಡ ಪಕ್ಷವಾಗಿದ್ದೇವೆ. ಅಧಿಕಾರ ಹಿಡಿಯುತ್ತೇವೆ” ಎಂದು ಮುಖ್ಯಮಂತ್ರಿ ಪುತ್ರ, ಸಚಿವ ಕೆ.ಟಿ.ರಾಮರಾವ್ ಹೇಳಿದ್ದಾರೆ.

Read Also: ಮಹಾರಾಷ್ಟ್ರ ಪರಿಷತ್ ಚುನಾವಣೆ: BJPಗೆ ಭಾರೀ ಮುಖಭಂಗ; ಗೆಲುವು ಸಾಧಿಸಿದ ಮಹಾ ವಿಕಾಸ್ ಅಘಾಡಿ!

“ತೆಲಂಗಾಣ ವಿಧಾನಸಭಾ ಚುನಾವಣೆಯ (2023) ಫಲಿತಾಂಶಗಳು ಏನೆಂದು ಹೈದರಾಬಾದ್ ಜನರು ಸ್ಪಷ್ಟಪಡಿಸಿದ್ದಾರೆ. ತೆಲಂಗಾಣದ ಜನರು ಭ್ರಷ್ಟ ಕೆಸಿಆರ್ ಸರ್ಕಾರಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ” ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು ಪಾಕಿಸ್ತಾನ, ಮೊಹಮ್ಮದ್ ಅಲಿ ಜಿನ್ನಾ ಮತ್ತು ಹೈದರಾಬಾದ್‌ ಹೆಸರು ಬದಲಿಸಿ ಭಾಗ್ಯನಗರ ಎಂದು ಮರುನಾಮಕರಣ ಮಾಡುವ ವಿಷಯಗಳ ಮೇಲೆ ಪ್ರಚಾರ ನಡೆಸಿತ್ತು. ಪ್ರಚಾರಕ್ಕೆ ಕರ್ನಾಟಕದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌,  ರಾಷ್ಟ್ರೀಯ ನಾಯಕರಾದ ಅಮಿತ್ ಶಾ, ಜೆ.ಪಿ.ನಡ್ಡಾ, ಪ್ರಕಾಶ್ ಜಾವಡೇಕರ್ ಮತ್ತು ಸ್ಮೃತಿ ಇರಾನಿ ಸೇರಿದಂತೆ ಹಲವರು ಪ್ರಚಾರಕ್ಕಿಳಿದ್ದರು. ಇದೇ ಮೊದಲ ಬಾರಿಗೆ ಪಾಲಿಕೆ ಚುನಾವಣೆಗೆ ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರು ಈ ಪ್ರಚಾರ ನಡೆಸಿದ್ದರು.

ಹೈದರಾಬಾದ್‌ನ ಪ್ರವಾಹ ಪೀಡಿತ ಭಾಗಗಳು ಬಿಜೆಪಿಗೆ ಚುನಾವಣಾ ಲಾಭವನ್ನು ತಂದುಕೊಟ್ಟಿವೆ. ಅಲ್ಲಿ, ರಾಜ್ಯ ಸರ್ಕಾರವು ಪ್ರವಾಹ ಪರಿಹಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪಸಿ ಸರ್ಕಾರದ ವಿರುದ್ಧ ಸಾರ್ವಜನಿಕರ ಕೋಪವಿತ್ತು. ಇದು ಮತಗಳನ್ನು ಬಿಜೆಪಿ ಎಡೆಗೆ ತಿರುಗಿಸಿತ್ತು.


Read Also: ಕೆನಡಾ ಪ್ರಧಾನಿಗೆ ಪ್ರತಿಕ್ರಿಯಿಸಿದಷ್ಟೇ ವೇಗವಾಗಿ ರೈತರಿಗೂ ಸ್ಪಂಧಿಸಿದ್ದರೆ ಸರ್ಕಾರದ ಮಾನ ಉಳಿಯುತ್ತಿರಲಿಲ್ಲವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights