ಉತ್ತರ ಪ್ರದೇಶ: PTI ಛಾಯಾಗ್ರಹಕನ ಮೇಲೆ ಹಲ್ಲೆ; FIR ದಾಖಲಿಸಲು ನಿರಾಕರಿಸಿದ ಪೊಲೀಸರು!
PTIಛಾಯಾಗ್ರಾಹಕ ಮತ್ತು ಅವರ ಫಿಯಾನ್ಸಿಯ ಮೇಲೆ 5-6 ಜನರು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಮುರಾದ್ನಗರದಲ್ಲಿ ನಡೆದಿದೆ.
ಘಟನೆಯ ಕುರಿತು ಪೊಲೀಸರಿಗೆ ದೂರ ನೀಡಿಲು ಹೋದಾಗ, ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಪಿಟಿಐ ಛಾಯಾಗ್ರಾಹಕ ರವಿ ಚೌಧರಿ ಆರೋಪಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಚೌಧರಿ ದೆಹಲಿಯಿಂದ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ, ಬೊಲೆರೊ ಕಾರ್ನಲ್ಲಿ ಬಂದು ಹಲ್ಲೆಕೋರರು, ರವಿ ಮತ್ತು ಅವರ ಫಿಯಾನ್ಸಿಗೂ ಅವ್ಯಾಚ್ಯವಾಗಿ ನಿಂದಿಸಿದ್ದಾರೆ. ಅವರ ಮಾತುಗಳನ್ನು ವಿರೋಧಿಸಿದಾಗ ಚೌದರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಜಂತ ಕಾ ರಿಪೋರ್ಟರ್ ವರದಿ ಮಾಡಿದೆ.
ಚೌದರಿ ಅವರಿಂದ ತಪ್ಪಿಸಿಕೊಂಡು ಓಡಿದಾಗ ಕಾರಿನಲ್ಲಿದ್ದ ಮೂರು-ನಾಲ್ಕು ಜನ ಅವರನ್ನು ಸ್ವಲ್ಪ ದೂರ ಬೆನ್ನಟ್ಟಿದರು ಎಂದು ಚೌಧರಿ ಹೇಳಿದ್ದಾರೆ.
On a bike, I was attacked by 5-6 men on Ganga canal road. BOLERO car no: UP 14 DN 9545, had written 'bharat sarkar' on it.Muradnagar police refused to lodge FIR. What to do?@myogiadityanath @Uppolice @Ashokkumarips @yadavakhilesh @BJP4UP pic.twitter.com/oCKxWwVGZe
— Ravi Choudhary (@choudharyview) December 7, 2020
ಈ ಪ್ರಕರಣದ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ತಿಳಿದು ಬಂದಿದೆ.
ಇತ್ತೀಚೆಗೆ, ರೈತರೊಬ್ಬರಿಗೆ ಪೊಲೀಸ್ ಅಧಿಕಾರಿ ಥಳಿಸುತ್ತಿರುವ ಫೋಟೋ ತೆಗೆದಿದ್ದ ರವಿ ಚೌಧರಿ ಸಾಮಾಜಿಕ ಜಾಲತಾಣದಲ್ಲಿ ಪ್ರಾಮುಖ್ಯತೆ ಪಡೆದಿದ್ದರು.
ಇದನ್ನೂ ಓದಿ: ಭಾರತ್ ಬಂದ್ಗೆ ಸೈನಿಕ ಬೆಂಬಲ; ಹುಬ್ಬಳ್ಳಿಯಲ್ಲಿ ಸೈನಿಕನನ್ನು ಬಂಧಿಸಿದ ಪೊಲೀಸರು!

