ರೈತರ ಅನುಮಾನಗಳನ್ನು ಪರಿಹರಿಸಲು ಸರ್ಕಾರ 24 ಗಂಟೆಗಳೂ ಸಿದ್ದವಿದೆ: ನರೇಂದ್ರ ಮೋದಿ

ಹೊಸ ಕೃಷಿ ನೀತಿಗಳು ರೈತರ ಭೂಮಿಯನ್ನು ಕಸಿದುಕೊಳ್ಳುತ್ತವೆ ಎಂಬ ಆತಂಕವನ್ನು ಪ್ರತಿಪಕ್ಷಗಳು ರೈತರಲ್ಲಿ ಹುಟ್ಟು ಹಾಕಿವೆ. ಕೃಷಿ ಕಾನೂನುಗಳ ವಿಚಾರದಲ್ಲಿ ರೈತರನ್ನು ಗೊಂದಲಕ್ಕೀಡು ಮಾಡುವ ಪಿತೂರಿ ನಡೆಯುತ್ತಿದೆ. ನಮ್ಮ ಸರ್ಕಾರ ರೈತರ ಗೊಂದಲವನ್ನು ಬಗೆಹರಿಸಲು 24 ಗಂಟೆಯೂ ಸಿದ್ದವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಗುಜರಾತ್‌ನ ಕಚ್‌ನಲ್ಲಿ ಮೂರು ಯೋಜನೆಗಳಿಗೆ ವರ್ಚುವಲ್ ಸಮಾರಂಭದ ಮೂಲಕ ಉದ್ಘಾಟಿಸಿ ಮಾತನಾಡಿದ ಮೋದಿ, ಹೊಸ ಕೃಷಿ ನೀತಿಗಳಲ್ಲಿ ರೈತರು ಮತ್ತು ಪ್ರತಿಪಕ್ಷಗಳು ಮುಂದಿಟ್ಟಿದ್ದ ಎಲ್ಲಾ ಬೇಡಿಕೆಗಳನ್ನು ಒಳಗೊಂಡಿದೆ. ಕೃಷಿಕರ ಆದಯವನ್ನು ಸುಧಾರಿಸುವ ಉದ್ದೇಶವನ್ನು ಕೃಷಿ ನೀತಿಗಳು ಒಳಗೊಂಡಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯೇ ನಿಜವಾದ ತುಕ್ಡೇ ತುಕ್ಡೇ ಗ್ಯಾಂಗ್‌: ಪಂಜಾಬ್ ಮಾಜಿ ಸಿಎಂ ಸುಖಬೀರ್​​ ಸಿಂಗ್​ ಬಾದಲ್

ವಿನಾಕಾರಣ ರೈತರಲ್ಲಿ ಕೃಷಿ ಕಾನೂನುಗಳ ಬಗ್ಗೆ ಭಯ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ. ರೈತರು ತಮ್ಮ ಜಮೀನುಗಳನ್ನು ಇತರರು ಆಕ್ರಮಿಸಿಕೊಳ್ಳಬಹುದು ಎಂದು ಭಾವಿಸಿದ್ದಾರೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ರೈತರು ಒತ್ತಾಯಿಸುತ್ತಿದ್ದಾರೆ. ಅವರೊಂದಿಗೆ ಚರ್ಚಿಸಲು ಸರ್ಕಾರ ಸಿದ್ದವಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಜಾರಿಗೆ ತಂದಿರುವ ಕಾನೂನುಗಳಿಗಾಗಿ ರೈತರು ಬಹಳ ಹಿಂದಿನಿಂದಲೂ ಬೇಡಿಕೆ ಇಟ್ಟಿದ್ದರು. ಇಂದು ಪ್ರತಿಪಕ್ಷದಲ್ಲಿರುವವರು ಅಧಿಕಾರದಲ್ಲಿದ್ದಾಗ ಈ ಮಸೂದೆಗಳನ್ನು ಜಾರಿಗೆ ತರಲು ಮುಂದಾಗಿದ್ದರು. ಅದರೆ, ಅವರು ಎಂದಿಗೂ ನಿರ್ಧಾರ ತೆಗೆದುಕೊಳ್ಳಲಿಲ್ಲ. ಕೇವಲ ರೈತರಿಗೆ ಸುಳ್ಳು ಆಶ್ವಾಸನೆ ನೀಡಿ ಸಮಾಧಾನ ಮಾಡುತ್ತಿದ್ದರು. ರೈತರ ಎಲ್ಲಾ ಅನುಮಾನಗಳನ್ನು ಬಗೆಹರಿಸಲು ನಮ್ಮ ಸರ್ಕಾರ 24 ಗಂಟೆಗಳೂ ಸಿದ್ದವಾಗಿದೆ ಎಂದು ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ಕೊರೊನಾದಿಂದ ದೇಶದ ಆರ್ಥಿಕತೆಯೇ ಹಳ್ಳ ಹಿಡಿದರೂ ಅದಾನಿ ಆಸ್ತಿ ಹೆಚ್ಚಾಗಿದ್ದು ಹೇಗೆ ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.