ಹಕ್ಕಿಗಾಗಿ ಹಾಡು ಹಾಡಿದ ಕಾಶ್ಮೀರಿ ಯುವಕ: ಹಾಡು ಕೇಳಿ ಮನಸೋತ ನೆಟ್ಟಿಗರು; ವಿಡಿಯೋ ನೋಡಿ!

ತನ್ನ ಕಾರಿನ ಮೇಲೆ ಕುಳಿತಿದ್ದ ಮೈನಾ ಹಕ್ಕಿಗಾಗಿ ಕಾಶ್ಮೀರಿ ವ್ಯಕ್ತಿಯೊಬ್ಬರು ಹಾಡು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.

ಕಾಶ್ಮೀರಿ ಭಾಷೆಯ ಹಳೆಯ ಪ್ರಖ್ಯಾತಿ ಹೊಂದಿದ ಹಾಡುಗಳಲ್ಲಿ ಒಂದಾದ “ಮಯಿ ಚಾನಿ” ಹಾಡನ್ನು ಒಬ್ಬ ವ್ಯಕ್ತಿ ಹಾಡುತ್ತಿದ್ದು, ಆತನ ಹಾಡಿಗೆ ಹಕ್ಕಿಯೂ ಜೊತೆಗೂಡುವಂತಹ ಚಲನ-ಒಲನ ತೋರಿಸಿದ್ದು ವಿಡಿಯೋದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಆತ ಹಕ್ಕಿಗಾಗಿ ಹಾಡುವ ವಿಡಿಯೋವನ್ನು ಸ್ವಸ್ತಿಕ್‌ ಮಸ್ತಾನ್ ಎಂಬ ಇಸ್ಟ್ರಾಗ್ರಾಂ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ.

ಕಾಶ್ಮೀರ ಕಣಿವೆಯ ಸುಂದರ, ನಿರ್ಜನ ಪ್ರದೇಶದಲ್ಲಿ ಆತ ಹಾಡು ಹಾಡಿದ್ದು, ನೋಡುಗರಿಗೆ ರಮಣೀಯತೆಯನ್ನು ತಂದೊಡ್ಡಿದೆ. ಆತ ಹಾಡಿರುವ ಹಾಡಿನ ಅರ್ಥ, ‘ನನ್ನ ಆತ್ಮವು ನಿನ್ನ ಪ್ರೀತಿಗಾಗಿ ಹಂಬಲಿಸುತ್ತಿದೆ. ನಾನು ನನ್ನ ಆತ್ಮವನ್ನು ನಿನಗೆ ಹೇಳುತ್ತಿದ್ದೇನೆ. ನಿನ್ನ ಪ್ರೀತಿಯ ತಾಯಿ, ನಿನ್ನ ಜೀವಾತ್ಮ ಚಂಚಲವಾಗಿ ಅಲೆದಾಡುತ್ತಿದೆ. ನಾನು ನಿನ್ನ ಕಾಲಿಗೆ ಶರಣಾಗುತ್ತೇನೆ, ಒಪ್ಪಿಕೊಳ್ಳುವುದು ಬಹಳ ಕಷ್ಟ. ಪುಟ್ಟ ಹಕ್ಕಿಯ ಪ್ರೀತಿಯೊಂದಿಗೆ ಹಾಡುತ್ತಿದೆ.’ ಎಂಬ ಭಾವಾರ್ಥವನ್ನು ಹೊಂದಿದೆ.

ನೆಟ್ಟಿಗರು ಹಾಡು ಕೇಳಿ ಫಿದಾ ಆಗಿದ್ದಾರೆ. ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ…


ಇದನ್ನೂ ಓದಿ: ಅಬ್ದುಲ್‌ ಕಲಾಂ ಪ್ರತಿಮೆಗೆ ಹೂ ಇಟ್ಟ ವೃದ್ದ ವೈರಲ್‌!: ಅಸೂಯೆಯಿಂದ ವೃದ್ಧನನ್ನೇ ಕೊಂದ ತಿಳಿಗೇಡಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights