ಕೋವಿಡ್ ವಿರುದ್ಧ ರಾಜ್ಯ ಸರ್ಕಾರ ತೆಗೆದುಕೊಂಡ ಕಾಮಿಡಿ ಕರ್ಫ್ಯೂ ವಾಪಸ್..!

ರಾಜಾದ್ಯಂತ ರೂಪಾಂತರ ಕೊರೊನಾ ಭೀತಿ ಹೆಚ್ಚಾಗಿದ್ದು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿತ್ತು. ಆದರೆ ನೈಟ್ ಕರ್ಫ್ಯೂ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದಂತೆ ಕೆಲವರು ಇದಕ್ಕೆ ಕಾಮಿಡಿ ಕರ್ಫ್ಯೂ ಎನ್ನುವ ಹೆಸರನ್ನು ಕೊಟ್ಟಿದ್ದರು. ಆದರೆ ಸದ್ಯ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ವಾಪಸ್ ತೆಗೆದುಕೊಳ್ಳಲಾಗಿದೆ.

ಜನಾಕ್ರೋಶಕ್ಕೆ ಮಣಿದು ರಾಜ್ಯ ಸರ್ಕಾರ ಕರ್ಫ್ಯೂ ವಾಪಸ್ ಪಡೆದುಕೊಂಡಿದೆ. ಇಂದು ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿತ್ತು. ಇದು ಯಾವ ರೀತಿ ಜನರಿಗೆ ಒಳ್ಳೆಯದಾಗುತ್ತದೆ..? ರಾತ್ರಿ ಹೊತ್ತು ಯಾರು ಓಡಾಡುತ್ತಾರೆ? ರಾತ್ರಿ ಹೊತ್ತು ಕೊರೊನಾ ಹರಡುತ್ತಾ? ಬೆಳಿಗ್ಗೆ ಹರಡುವುದಿಲ್ಲವೇ? ಎನ್ನುವ ಭಾರಿ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಹೆಚ್ಚಾಗಿದ್ದವು. ಊರೆಲ್ಲಾ ಮಲಗುವ ಸಮಯದಲ್ಲಿ ಕರ್ಫ್ಯೂ ಮಾಡಿದ್ರೆ ಯಾವ ಕೊರೊನಾ ಹರಡುತ್ತದೆ..? ಎಂದು ಸರ್ಕಾರದ ವಿರುದ್ಧ ಸಾಕಷ್ಟು ಜನ ಟೀಕೆ ಮಾಡಿದ್ದರು.

ಅಲ್ಲದೇ ಬಿಜೆಪಿಗರೇ ಇದು ನೈಟ್ ಕರ್ಫ್ಯೂ ನಗಪಾಟಲೆಯಾಗಿದೆ ಎನ್ನುವ ಹೇಳಿಕೆಯನ್ನು ಕೊಟ್ಟಿದ್ದರು. ನಿನ್ನೆಯಿಂದ ಸಾಕಷ್ಟು ಬದಲಾವಣೆಗೊಂಡ ನೈಟ್ ಕರ್ಫ್ಯೂ ಇಂದು ವಾಪಸ್ ಪಡೆದುಕೊಳ್ಳಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights