ದೆಹಲಿ ಮಾಯಾಪುರಿ ಮಾಸ್ಕ್ ಉತ್ಪಾದನಾ ಘಟಕದಲ್ಲಿ ಬೆಂಕಿ : ಓರ್ವ ಸಾವು…!
ಇಂದು ಬೆಳಂಬೆಳಿಗ್ಗೆ ದೆಹಲಿಯ ಮಾಯಾಪುರಿ ಪ್ರದೇಶದ ಮಾಸ್ಕ್ ಉತ್ಪಾದನಾ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಮಾಯಾಪುರಿಯ ಮುಖವಾಡ ಉತ್ಪಾದನಾ ಕಾರ್ಖಾನೆಯಲ್ಲಿ ಶನಿವಾರ ಮುಂಜಾನೆ 3.50 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಆರು ಅಗ್ನಿಶಾಮಕ ಬಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿವೆ.
ಘಟನೆಯಲ್ಲಿ ಕಾರ್ಖಾನೆಯ ಗೋಡೆಗಳು ಮತ್ತು ಬಾಗಿಲುಗಳನ್ನು ಒಡೆದು ಮೂರು ಜನರನ್ನು ರಕ್ಷಿಸಲಾಗಿದೆ. ಅವರಲ್ಲಿ ಒಬ್ಬರು ಪ್ರಜ್ಞಾಹೀನರಾಗಿದ್ದು ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ ಅವರು ಅದಾಗಲೇ ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಮೃತನನ್ನು ಜುಗಲ್ ಕಿಶೋರ್ ಎಂದು ಗುರುತಿಸಲಾಗಿದೆ.
ಯಂತ್ರಗಳು ಮತ್ತು ಕಚ್ಚಾ ವಸ್ತುಗಳನ್ನು ಇಟ್ಟುಕೊಂಡಿರುವ ಮಾಸ್ಕ್ ಉತ್ಪಾದನಾ ಕಾರ್ಖಾನೆಯ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಕ್ಷಿಸಿದ ಇಬ್ಬರನ್ನು ಅಮನ್ ಅನ್ಸಾರಿ (18) ಮತ್ತು ಫಿರೋಜ್ ಅನ್ಸಾರಿ (24) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.