ಕಾಶ್ಮೀರ: ಕಾರ್ಯಕ್ರಮದ ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ಸೇನಾ ಸಿಬ್ಬಂದಿ ಹಲ್ಲೆ! ಆರೋಪ

ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮೂವರು ಪತ್ರಕರ್ತರ ಮೇಲೆ ಭಾರತೀಯ ಸೇನಾ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ ಎಂದು ಪತ್ರಕರ್ತ ಸಂಘಗಳು ಆರೋಪಿಸಿವೆ.

ಜಶ್ನ್-ಎ-ಬಾರಾಮುಲ್ಲಾ ಕಾರ್ಯಕ್ರಮದಲ್ಲಿ ನಟಿ ಅಮೀಷಾ ಪಟೇಲ್‌ ಭಾಗವಹಿಸಿದ್ದರು. ಅವರ ಬೈಟ್‌ (ಹೇಳಿಕೆ) ತೆಗೆದುಕೊಳ್ಳಲು ಪತ್ರಕರ್ತರು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ಸೈನಿಕರು ಹಲ್ಲೆ ನಡೆಸಿದ್ದು, ಥಳಿಸಿದ್ದಾರೆ ಎಂದು ಕಾಶ್ಮೀರ ಪ್ರೆಸ್‌ ಕ್ಲಬ್‌ ತಿಳಿಸಿದೆ.

“ಪ್ರಸ್‌ಕ್ಲಬ್‌ಗೆ ಹಲ್ಲೆಗೊಳಗಾರ ಪತ್ರಕರ್ತರು ಹಲವು ಬಾರಿ ಕರೆ ಮಾಡಿದ್ದು, ಜಶ್ನ್-ಎ-ಬಾರಾಮುಲ್ಲಾ ಕಾರ್ಯದಲ್ಲಿ ಬಾಲಿವುಡ್ ನಟಿ ಅಮಿಶಾ ಪಟೇಲ್ ಭಾಗವಹಿಸಿದ್ದರು. ಕಾರ್ಯಕ್ರಮ ವರದಿ ಮಾಡಿ, ಸಮಾರಂಭದ ಪಕ್ಕದಲ್ಲಿ ನಟಿಯ ಬೈಟ್‌ ತೆಗೆದುಕೊಳ್ಳಲು ಹೋದಾಗ ಸೈನಿಕರು ಹಲ್ಲೆ ಮಾಡಿ ಥಳಿಸಿದ್ದಾರೆ” ಪ್ರಸ್‌ಕ್ಲಬ್‌ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ

ಘಟನೆ ಬಗ್ಗೆ ತನಿಖೆ ನಡೆಸಬೇಕೆಂದು ಪ್ರೆಸ್ ಕ್ಲಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಪತ್ರಕರ್ತರ ಒಕ್ಕೂಟ ಒತ್ತಾಯಿಸಿವೆ.

ಈ ಘಟನೆಯನ್ನು ಬಾರಾಮುಲ್ಲಾ ವರ್ಕಿಂಗ್ ಜರ್ನಲಿಸ್ಟ್ ಅಸೋಸಿಯೇಷನ್, ಉತ್ತರ ಕಾಶ್ಮೀರ ಪತ್ರಕರ್ತರ ಸಂಘ ಮತ್ತು ಟ್ಯಾಂಗ್‌ಮಾರ್ಗ್ ವರ್ಕಿಂಗ್ ಜರ್ನಲಿಸ್ಟ್ಸ್ ಅಸೋಸಿಯೇಷನ್ ​​ಸಹ ಖಂಡಿಸಿವೆ ಎಂದು ರೈಸಿಂಗ್ ಕಾಶ್ಮೀರ ವರದಿ ಮಾಡಿದೆ.


ಇದನ್ನೂ ಓದಿ: BJP ಆಡಳಿತದಲ್ಲಿ ಹೆಚ್ಚುತ್ತಿದೆ ಪತ್ರಕರ್ತರ ಮೇಲೆ ದಾಳಿ: ಇದೂವರೆಗೂ 154 ಪತ್ರಕರ್ತರ ಬಂಧನ; 3ಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights