ಮಧ್ಯ ಕ್ರೊಯೇಷಿಯಾದಲ್ಲಿ ಭೂ ಕಂಪನ : 20 ಜನರಿಗೆ ಗಾಯ- ಏಳು ಜನ ಸಾವು!
ಮಧ್ಯ ಕ್ರೊಯೇಷಿಯಾದಲ್ಲಿ ನಡೆದ ಭೂಕಂಪದಿಂದ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಕನಿಷ್ಠ ಏಳು ಜನ ಸಾವನ್ನಪ್ಪಿರುವುದು ವರದಿಯಾಗಿದೆ. ರಾಜಧಾನಿ ಅಗ್ರೆಬ್ನ ಆಗ್ನೇಯ ಪಟ್ಟಣವಾದ ಪೆಟ್ರಿಂಜಾದಲ್ಲಿ ಭೂಕಂಪ ಸಂಭವಿಸಿದ್ದು ಅಪಾರ ಆಸ್ತಿ ಹಾನಿಗೊಳಗಾಗಿದೆ.
ಮಂಗಳವಾರ ಸಂಭವಿಸಿದ ಭೂಕಂಪನದಿಂದ ಫೋನ್ ಸಂಪರ್ಕ ಕಡಿತಗೊಂಡಿದ್ದು ಕ್ರೊಯೇಷಿಯನ್ನರನ್ನು ಆಘಾತಕ್ಕೆ ಒಳಗಾಗಿಸಿದೆ. ನೆರೆಯ ಸೆರ್ಬಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ ಮತ್ತು ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದವರೆಗೂ ಇದರ ಅನುಭವ ಉಂಟಾಗಿದೆ. ಈ ದಿನಗಳಲ್ಲಿ ಸಂಭವಿಸಿದ ಎರಡನೇ ಭೂಕಂಪನ ಇದಾಗಿದ್ದು ಜನ ಭಯಭೀತಿಗೊಂಡಿದ್ದಾರೆ.
ಕ್ರೊಯೇಷಿಯಾದ ರಕ್ಷಣಾ ಸಚಿವ ಟೊಮೊ ಮೆಡ್ವೆಡ್ ಆರು ಸಾವುಗಳನ್ನು ವರದಿ ಮಾಡಿದ್ದಾರೆ.
Our colleagues from Croatian Red Cross are on the ground assisting at the epicentre of the #earthquake at #Petrinja #croatia @crvenikriz_hr pic.twitter.com/tEJ58O8eab
— IFRC Europe (@IFRC_Europe) December 29, 2020
6.4 ತೀವ್ರತೆಯ ಭೂಕಂಪನ ಅಗ್ರೆಬ್ನ ಆಗ್ನೇಯದಲ್ಲಿ 46 ಕಿ.ಮೀ (17 ಮೈಲಿ)ವರೆಗೆ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಪೆಟ್ರಿಂಜಾದಿಂದ ಸುಮಾರು 14 ಕಿ.ಮೀ (8.5 ಮೈಲಿ) ದೂರದಲ್ಲಿರುವ ಸಿಸಾಕ್ ನಗರದ ನಿವಾಸಿಗಳಿಗೂ ಇದರ ಅನುಭವವಾಗಿದೆ.
ಘಟನೆಯಲ್ಲಿ ಸಾಕಷ್ಟು ಮನೆಗಳು ಧರೆಗುರುಳಿವೆ. ಜನ ಫೋನ್ ಸಂಪರ್ಕವಿಲ್ಲದೆ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಸೈನ್ಯ, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ವರ್ಗಾಯಿಸಿಸಲಾಗುತ್ತಿದೆ.


