ಹೊಸ ವರ್ಷಕ್ಕೂ ಕೊರೊನಾ ಕಾರ್ಮೋಡ : ದೇಶದಲ್ಲಿ 20,036 ಹೊಸ ಕೇಸ್ : 256 ಜನ ಸಾವು!
ಭಾರತದಲ್ಲಿ ಹೊಸದಾಗಿ 20,036 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿಯಾಗಿದ್ದು, ದೇಶದ ಒಟ್ಟು ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 1,02,86,710 ಕ್ಕೆರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಗುರುವಾರ 256ಕೊರೊನವೈರಸ್ ಸಕಾರಾತ್ಮಕ ರೋಗಿಗಳು ಸೋಂಕಿಗೆ ಬಲಿಯಾಗಿದ್ದು, ಈವರೆಗೆ 1,48,994 ಜನ ದೇಶದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಮೊದಲ ಪ್ರಕರಣ ದಾಖಲಾದಾಗಿನಿಂದ ಭಾರತದಲ್ಲಿ 1,02,86,710 ಕೊರೊನಾವೈರಸ್ ಪ್ರಕರಣಗಳಲ್ಲಿ 98,83,461 ರೋಗಗಳು ಚೇತರಿಸಿಕೊಂಡಿದ್ದಾರೆ.
ಭಾರತದ ಅತಿ ಹೆಚ್ಚು ಪೀಡಿತ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 3,509 ಹೊಸ ಕೊರೋನವೈರಸ್ ಪ್ರಕರಣಗಳು ಮತ್ತು 58 ಸಾವುಗಳು ಸಂಭವಿಸಿವೆ. ಮಹಾರಾಷ್ಟ್ರದಲ್ಲಿ 18,28,546 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಸಾವಿನ ಸಂಖ್ಯೆ 49,521 ಕ್ಕೇರಿಕೆಯಾಗಿದೆ.
ಒಂದೇ ದಿನದಲ್ಲಿ ಕೇರಳದಲ್ಲಿ 5,215 ಹೊಸ ಪ್ರಕರಣಗಳು ಮತ್ತು 30 ಸಾವು ವರದಿಯಾಗಿವೆ. 5,376 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೆಹಲಿ ಆರೋಗ್ಯ ಇಲಾಖೆಯ ಪ್ರಕಾರ ದೆಹಲಿಯಲ್ಲಿ ಗುರುವಾರ 574 ಹೊಸ ಕೊರೋನವೈರಸ್ ಪ್ರಕರಣಗಳು ದಾಖಲಾಗಿದ್ದು 888 ಜನ ಗುಣಮುಖರಾಗಿದ್ದಾರೆ.

