Fact Check: ಪಾಕಿಸ್ತಾನದಲ್ಲಿ ‘ಮಂದಿರ ಬನಾವೊ’ ಅಭಿಯಾನದ ಹಿಂದಿನ ಸತ್ಯ..

ಡಿಸೆಂಬರ್ 30, 2020 ರಂದು ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದಲ್ಲಿ ಜನಸಮೂಹವೊಂದು ಹಿಂದೂ ದೇವಾಲಯವನ್ನು ಧ್ವಂಸಮಾಡಿ ಸಾಕಷ್ಟು ಗೊಂದಲವೇ  ಸೃಷ್ಟಿಯಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನಾಕಾರರು “ಮಂದಿರ್ ಬನಾವೊ” ಎಂಬ ಬರಹದ ಬ್ಯಾನರ್ ತೋರಿಸಿರುವ ಚಿತ್ರಗಳು ವೈರಲ್ ಆಗಿವೆ.

ಖೈಬರ್ ಪಖ್ತುನ್ಖ್ವಾದಲ್ಲಿ ಹಿಂದೂ ದೇವಾಲಯ ನಾಶವಾದ ನಂತರ ಪಾಕಿಸ್ತಾನದ ಮುಸ್ಲಿಮರು “ಮಂದಿರ ಬನಾವೊ” ಅಭಿಯಾನವನ್ನು ಪ್ರಾರಂಭಿಸಿದರು ಎಂದು ಕೆಲವು ನೆಟಿಜನ್‌ಗಳು ಹೇಳಿಕೊಂಡಿದ್ದಾರೆ.

ಆದರೆ ಈ ವೈರಲ್ ಹೇಳಿಕೆ ನಿಜವಲ್ಲ. ಯಾಕೆಂದರೆ ಕಳೆದ ವರ್ಷ ಜುಲೈನಲ್ಲಿ ಕೆಲವರು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಅನುಮತಿ ನೀಡುವಂತೆ ರ್ಯಾಲಿ ನಡೆಸಿದಾಗ ಈ ಫೋಟೋಗಳನ್ನು ತೆಗೆಯಲಾಗಿದೆ. ಇತ್ತೀಚೆಗೆ ಖೈಬರ್ ಪಖ್ತುನ್ಖ್ವಾದಲ್ಲಿ ದೇವಾಲಯ ನೆಲಸಮಗೊಳಿಸುವ ಘಟನೆಯು ಪಾಕಿಸ್ತಾನದಲ್ಲಿ ಆಕರ್ಷಿತವಾಗಿರುವುದು ನಿಜ. ಆದರೆ “ಮಂದಿರ್ ಬನಾವೊ” ಎಂಬ ಬರಹದ ಬ್ಯಾನರ್ ಈ ವೇಳೆ ತೆಗೆದಿರುವುದಲ್ಲ.

ಪಾಕಿಸ್ತಾನದ ರಾಜಧಾನಿಯಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಮುಸ್ಲಿಂ ಗುಂಪುಗಳ ವಿರೋಧವಿತ್ತು. ಹೀಗಾಗಿ ದೇವಾಲಯ ಕಟ್ಟಲು ಅನುಮತಿ ನೀಡುವಂತೆ ಸರ್ಕಾರವನ್ನು ಕೋರಿ ಇಸ್ಲಾಮಾಬಾದ್‌ನಲ್ಲಿ ಕೆಲವರು ಜುಲೈ 8, 2020 ರಂದು ರ್ಯಾಲಿ ನಡೆಸಿದರು. ನಂತರ “ಪಾಕಿಸ್ತಾನ ಉಲೆಮಾ ಕೌನ್ಸಿಲ್” ಇಸ್ಲಾಮಾಬಾದ್ನಲ್ಲಿ ದೇವಾಲಯ ನಿರ್ಮಾಣಕ್ಕೆ ಬೆಂಬಲವನ್ನು ನೀಡಿ, ದೇವಾಲಯದ ನಿರ್ಮಾಣವನ್ನು ನಿಲ್ಲಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಪಾಕಿಸ್ತಾನದ ನ್ಯಾಯಾಲಯ ವಜಾಗೊಳಿಸಿತ್ತು.

2020 ರ ಡಿಸೆಂಬರ್ 30 ರಂದು ಖೈಬರ್ ಪಖ್ತುನ್ಖ್ವಾ ಎಂಬ ತೇರಿ ಗ್ರಾಮದಲ್ಲಿರುವ ಶ್ರೀ ಪರಮಹನ್ಸ್ ಜಿ ಮಹಾರಾಜ್ ಸಮಾಧಿ ದೇವಾಲಯವನ್ನು ಆಮೂಲಾಗ್ರ ಇಸ್ಲಾಮಿಸ್ಟ್ ಪಕ್ಷದ ನೇತೃತ್ವದ ಜನಸಮೂಹ ಧ್ವಂಸಗೊಳಿಸಿ ಬೆಂಕಿ ಹಚ್ಚಿತು. ಇಸ್ಲಾಮಿಸ್ಟ್ ಪಕ್ಷ ಈ ದೇವಾಲಯ ಭೂಮಿಯನ್ನು ಅತಿಕ್ರಮಿಸಿದೆ ಎಂದು ಹೇಳಿಕೊಂಡು ದೇವಾಲಯದ ಉರುಳಿಸುವಿಕೆಯಲ್ಲಿ ಸುಮಾರು 1,500 ಜನರು ಭಾಗವಹಿಸಿದ್ದರು.

ನಂತರ ಪಾಕಿಸ್ತಾನ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಸುಮಾರು 45 ಜನರನ್ನು ಬಂಧಿಸಿದ್ದಾರೆ. ಖೈಬರ್ ಪಖ್ತುನ್ಖ್ವಾ ಸರ್ಕಾರ ಈ ಘಟನೆಗೆ ವಿಷಾದ ವ್ಯಕ್ತಪಡಿಸಿ ದೇವಾಲಯದ ಪುನರ್ನಿರ್ಮಾಣವನ್ನು ಘೋಷಿಸಿದೆ.

ಆದರೆ ವೈರಲ್ ಚಿತ್ರಗಳು ಖೈಬರ್ ಪಖ್ತುನ್ಖ್ವಾದಲ್ಲಿನ ಘಟನೆಗೆ ಸಂಬಂಧಿಸಿಲ್ಲ. ಕಳೆದ ವರ್ಷ ಜುಲೈನಲ್ಲಿ ಇಸ್ಲಾಮಾಬಾದ್ನಲ್ಲಿ ಇದೇ ರೀತಿಯ ಘಟನೆಯ ವೇಳೆ ಈ ವೇಟೋ ತೆಗೆಯಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights