ಮುಸ್ಲಿಮರು ಭಾರತದಲ್ಲಿರಬೇಕು ಎಂದರೆ ಕುರಾನ್‌, ನಮಾಝ್‌ ತ್ಯಜಿಸಬೇಕು: ಆನಂದ್‌ ಸ್ವರೂಪ್‌ ಸ್ವಾಮಿ

ಮುಸ್ಲಿಮರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಬಹಿಷ್ಕರಿಸಬೇಕು ಎಂದು ಬಹಿರಂಗವಾಗಿ ಕರೆ ನೀಡಿದ್ದ ಹಿಂದೂ ಧರ್ಮಗುರು ಆನಂದ್‌ ಸ್ವರೂಪ್‌ ಸ್ವಾಮಿ ವಿರುದ್ದ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚೌಧರಿ ಚರಣ್ ಸಿಂಗ್ ಯುನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಆನಂದ್‌ ಸ್ವರೂಪ್‌ ಸ್ವಾಮಿ, “ಕುರ್ ಆನ್ ಪಠಿಸುವವರು ರಾಕ್ಷಸರಾಗುತ್ತಾರೆ. ಅವರು ಮನುಷ್ಯರಾಗಿರುವುದಿಲ್ಲ. ಮುಸ್ಲಿಮರಲ್ಲಿ ಯಾರಿಗಾದರೂ ಭಾರತದಲ್ಲಿರಿಬೇಕು ಎಂಬ ಇಚ್ಛೆಯಿದ್ದರೆ ಅವರು ನಮಾಝ್ ಮತ್ತು ಕುರ್ ಆನ್ ಅನ್ನು ತ್ಯಜಿಸಬೇಕು” ಎಂದು ಹೇಳಿದ್ದರು.

ತ್ಯಜಿಸದಿದ್ದರೆ, ಅವರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಿಷ್ಕಾರ ಹಾಕಬೇಕು. ಆಗ ಅವರೇ ಹಿಂದೂ ಧರ್ಮಕ್ಕೆ ಮತಾಂತರವಾಗುತ್ತಾರೆ ಎಂದು ಹೇಳಿರುವುದಾಗಿ ದಿ ಪ್ರಿಂಟ್‌ ವರದಿ ಮಾಡಿದೆ.

“ನಮಗೆ ಒಂದು ಕೋಟಿ ಹಿಂದೂ ಯುವಕರ ಪಡೆಯನ್ನು ತಯಾರಿಸಬೇಕಿದೆ. ನಮಗೆ ಸ್ವಯಂ ಸೇವಕರ ಅಗತ್ಯವಿಲ್ಲ, ಸ್ವಯಂ ಸೇನೆಯ ಅಗತ್ಯವಿದೆ. ಬಂದೂಕು, ಕತ್ತಿ, ನಿಮ್ಮಲ್ಲಿರುವ ಆಯುಧಗಳನ್ನೆಲ್ಲಾ ಎತ್ತಿಕೊಳ್ಳಿ. ಯುದ್ಧಕ್ಕೆ ಈಗಾಗಲೇ ಕರೆ ನೀಡಲಾಗಿದೆ. ಹಿಂದೂ ರಾಷ್ಟ್ರ ನಿರ್ಮಾಣವಾಗುವವರೆಗೆ ನಾವು ಇದನ್ನು ಮುಂದುವರಿಸಬೇಕು” ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.

ಅವರ ಭಾಷಣದ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಇದರನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತಾದಂತೆ ಮೀರತ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆಯೂ ಲಭ್ಯವಾಗಿಲ್ಲ ಎಂದು ದಿ ಪ್ರಿಂಟ್‌ ವರದಿ ಮಾಡಿದೆ.


ಇದನ್ನೂ ಓದಿ: ಮತ್ತೊಮ್ಮೆ ಮುಸ್ಲಿಂ ಸಮುದಾಯದ ಮೇಲೆ ಚೀನಾ ದೌರ್ಜನ್ಯ : 18,000 ಮಸೀದಿಗಳು ಧ್ವಂಸ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights