ಬಂಗಾಳ ಚುನಾವಣೆ: ನಂದಿಗ್ರಾಮದಲ್ಲಿ ಮಮತಾ – ಸುವೆಂದು ಅಧಿಕಾರಿ ಫೈಟ್‌; ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ!

ಪಶ್ವಿಮ ಬಂಗಾಳದಲ್ಲಿ 10 ವರ್ಷಗಳ ಹಿಂದೆ ಟಿಎಂಸಿ ಅಧಿಕಾರಕ್ಕೆ ಬರಲು ನೆರವಾದ, ಸುವೆಂದು ಅಧಿಕಾರಿ ಪ್ರತಿನಿಧಿಸುವ ಕ್ಷೇತ್ರವೂ ನಂದಿಗ್ರಾಮದಲ್ಲಿ ಸ್ಪರ್ಧಿಸುದಾಗಿ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿಸಿದ್ದಾರೆ. ಸುವೆಂದು ಅಧಿಕಾರಿ ಕೂಡ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದು, ತಮ್ಮ ಮಾಜಿ ರಾಜಕೀಯ ಮುಖ್ಯಸ್ಥೆ, ಟಿಎಂಸಿ ನಾಯಕಿ ಬ್ಯಾನರ್ಜಿಯನ್ನು 50 ಸಾವಿರ ಮತಗಳ ಅಂತರದಲ್ಲಿ ಸೋಲಿಸುವುದಾಗಿ ಹೇಳಿದ್ದಾರೆ.

ನಾನು ಅವರನ್ನು (ಮಮತಾ) ನಂದಿಗ್ರಾಮದಲ್ಲಿ ಅರ್ಧ ಲಕ್ಷ ಮತಗಳ ಅಂತರದಿಂದ ಸೋಲಿಸದಿದ್ದರೆ ನಾನು ರಾಜಕೀಯ ದಿಂದ ನಿವೃತ್ತಿಯಾಗುತ್ತೇನೆ ಎಂದು ಕೋಲ್ಕತ್ತಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಸುವೇಂದು ಅಧಿಕಾರಿ ಘೋಷಿಸಿದ್ದಾರೆ.

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಭದ್ರಕೋಟೆಯಾದ ನಂದಿಗ್ರಾಮದಿಂದ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಸುವೆಂದು ಅಧಿಕಾರಿಯೂ ಅಲ್ಲಿಯೇ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ ಸುವೇಂದು ಅಧಿಕಾರಿ, ಟಿಎಂಸಿ ಇನ್ನು ಒಂದು ಪಕ್ಷವಲ್ಲ, ಅದು ಖಾಸಗಿ ಲಿಮಿಟೆಡ್ ಕಂಪನಿಯಾಗಿದ. ಟಿಎಂಸಿ ಬಿಹಾರದ ರಾಜಕೀಯ ತಂತ್ರಗಾರನನ್ನು (ಪ್ರಶಾಂತ್ ಕಿಶೋರ್) ನೇಮಕ ಮಾಡಿರಬೇಕಾದ ಸಂಗತಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಲೆಯಿರುವುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಟಿಎಂಸಿ ತೊರೆದ ಸುವೆಂದು ಅಧಿಕಾರಿ, ಬಿಜೆಪಿ ಸೇರಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಬಂಗಾಳ: ಸುವೆಂದು ಅಧಿಕಾರಿಯ ಕ್ಷೇತ್ರ ನಂದಿಗ್ರಾಮ್‌ನಿಂದ ಮಮತಾ ಸ್ಪರ್ಧೆ: ಕ್ಷೇತ್ರದ ವಿಶೇಷವೇನು ಗೊತ್ತಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights