ಮಂಗಳೂರು ಮಾಯಾ ಗ್ಯಾಂಗ್ ಹಿಂದಿದೆ ರಾಜಕೀಯ ಪಕ್ಷ ಮತ್ತು ಒಂದು ಸಂಘಟನೆ..!
16-12-2020 ರಲ್ಲಿ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಗಣೇಶ್ ಕಾಮತ್ ಅವರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಸತ್ಯ ಬಯಲಾಗಿದೆ.
ಮಂಗಳೂರಿನಲ್ಲಿ ಕಳೆದ ವರ್ಷ ನಡೆದ ಗೋಲಿಬಾರ್ ಗೆ ಪ್ರತೀಕಾರವಾಗಿ ಪೊಲೀಸರ ಮೇಲೆ ಚೂರಿಯಿಂದ ಇರಿಯಲಾಗಿದೆ. ಇದು ಮಾಯಾ ಗ್ಯಾಂಗ್ ಕೃತ್ಯವಾಗಿದ್ದು, ಈ ಗ್ಯಾಂಗ್ ನಿಂದ ಕಹಿ ಸತ್ಯವೊಂದು ಬಯಲಾಗಿದ್ದು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಮಂಗಳೂರು ಮಾಯಾ ಗ್ಯಾಂಗ್ ಹಿಂದೆ ರಾಜಕೀಯ ಪಕ್ಷ ಮತ್ತು ಒಂದು ಸಂಘಟನೆ ಇದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಆದರೆ ಆ ರಾಜಕೀಯ ಪಕ್ಷ ಯಾವುದು? ಮತ್ತು ಆ ಸಂಘಟನೆ ಬಗ್ಗೆ ಬಹಿರಂಗಗೊಳಿಸಲಾಗಿಲ್ಲ.
ಮಂಗಳೂರು ಗೋಲಿಬಾರ್ ಪ್ರತೀಕಾರವಾಗಿ ಏಳೆಂಟು ತಂಡಗಳು ಸಿಕ್ಕ ಸಿಕ್ಕಲ್ಲಿ ಪೊಲೀಸರನ್ನು ಕೊಲ್ಲುವ ಸಂಚು ಹೂಡಿದ್ದು ಬಯಲಾಗಿದೆ. ನಟೋರಿಯಸ್ ಮಾಯಾ ಗ್ಯಾಂಗ್ ಪ್ರಮುಖ ಟಾರ್ಗೇಟ್ ಪೊಲೀಸರಾಗಿದ್ದು ಇನ್ನೂ ನಾಲ್ಕು ದಿನದಲ್ಲಿ ರಕ್ತಪಾತ ಮಾಡುವ ಪ್ಲ್ಯಾನ್ ತಂಡ ಮಾಡಿತ್ತು. ಮಾತ್ರವಲ್ಲದೇ ಈ ತಂಡಕ್ಕೆ ಒಂದು ಪಕ್ಷ ಮತ್ತು ಸಂಘಟನೆಯಿಂದ ಫಂಡಿಂಗ್ ಆಗ್ತಾಯಿತ್ತು. ಜೊತೆಗೆ ಗಾಂಜಾ, ಮಾದಕ ವಸ್ತು, ಎಣ್ಣೆ ಕೊಟ್ಟು ಕೆಲ ಯುವಕರನ್ನು ಮಾಯಾ ಸಂಘಟನೆಗೆ ಸೇರಿಸಿಕೊಳ್ಳಲಾಗುತ್ತಿತ್ತು ಎನ್ನುವ ವಿಚಾರ ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಈವರೆಗೆ ಪೊಲೀಸರು ಗ್ಯಾಂಗ್ ನ ಅನೀಶ್ ಅಶ್ರಫ್, ಅಬ್ದುಲ್ ಖಾದರ್, ಶೇಖ್ ಮೊಹಮ್ಮದ್ ಹಾರಿಸ್, ಮೊಹಮ್ಮದ್ ಖಿಯಾಸ್ , ರಾಹಿಲ್, ಮೊಹಮ್ಮದ್ ನವಾಜ್ ಇನ್ನಿತರರನ್ನು ಬಂಧಿಸಿದ್ದಾರೆ. ಪೊಲೀಸರ್ ಆರಂಭಿಕ ಹಂತದಲ್ಲಿ ಮಾಯಾ ಸಂಘಟನೆಯನ್ನು ಚಿವುಟಿ ಹಾಕಿದ್ದು ಇನ್ನೊಂದು ಟೀಮ್ ಹುಡುಕಾಟದಲ್ಲಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.