ಅಕ್ರಮ ಕಟ್ಟಡ ನಿರ್ಮಾಣ ನೋಟಿಸ್ ವಿರುದ್ಧ ನಟ ಸೋನು ಸೂದ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್!

ಬಿಎಂಸಿ ನೀಡಿದ ನೋಟಿಸ್ ವಿರುದ್ಧ ನಟ ಸೋನು ಸೂದ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಅನುಮತಿಯಿಲ್ಲದೆ ಉಪನಗರ ಜುಹುದಲ್ಲಿನ ವಸತಿ ಕಟ್ಟಡವೊಂದರಲ್ಲಿ ರಚನಾತ್ಮಕ ಬದಲಾವಣೆಗಳನ್ನು ಮಾಡಿದ್ದಕ್ಕಾಗಿ 48 ವರ್ಷದ ನಟನಿಗೆ ಬಿಎಂಸಿ ನೋಟಿಸ್ ನೀಡಿದ್ದು, ನ್ಯಾಯಮೂರ್ತಿ ಪೃಥ್ವಿರಾಜ್ ಕೆ ಚವಾಣ್ ಅವರ ಏಕ-ನ್ಯಾಯಾಧೀಶರ ಪೀಠ ಬಿಎಂಸಿಯನ್ನು ತನ್ನ ಸೂಚನೆಯ ಆಧಾರದ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ತಡೆಯಲು ಕೋರಿದ ನಟನ ಮನವಿಯನ್ನು ತಳ್ಳಿಹಾಕಿದೆ.

ಈ ವೇಳೆ ಸೂದ್ ಅವರ ವಕೀಲರು ಬಿಎಂಸಿಯ ಆದೇಶವನ್ನು ಅನುಸರಿಸಲು 10 ವಾರಗಳ ಸಮಯವನ್ನು ಕೋರಿದರು. ಜೊತೆಗೆ ಕಟ್ಟಡವನ್ನು ಉರುಳಿಸುವಿಕೆಯನ್ನು ತಡೆಯಲು ಕೋರಿದರು. ಆದರೆ ನ್ಯಾಯಾಲಯ ಅದನ್ನು ಸ್ವೀಕರಿಸಲಿಲ್ಲ.

ಕಳೆದ ವರ್ಷ ಅಕ್ಟೋಬರ್ 27 ರಂದು ಬಿಎಂಸಿ ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ ಕಾಯ್ದೆಯ ಸೆಕ್ಷನ್ 53 (1) ರ ಅಡಿಯಲ್ಲಿ ಸೂದ್ ಮತ್ತು ಅವರ ಪತ್ನಿ ಸೋನಾಲಿಗೆ ನೋಟಿಸ್ ನೀಡಿತ್ತು, ಅದರ ಮೂಲ ಯೋಜನೆಯ ಪ್ರಕಾರ ಆಸ್ತಿ ಬದಲಾವಣೆಗಳ ಅನುಮೋದನೆ ಪಡೆಯಲು ಅವರಿಗೆ ಒಂದು ತಿಂಗಳು ಕಾಲಾವಕಾಶ ನೀಡಿತ್ತು. ನಟ ಬಿಎಂಸಿ ನೋಟಿಸ್‌ನಲ್ಲಿ ಸ್ಟೇ ಕೋರಿ ನಗರ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಡಿಸೆಂಬರ್ 19 ರಂದು ಸಿವಿಲ್ ನ್ಯಾಯಾಲಯ ತನ್ನ ವಿರುದ್ಧ ತೀರ್ಪು ನೀಡಿದಾಗ ಅವರು ಹೈಕೋರ್ಟ್‌ಗೆ ತೆರಳಿದ್ದರು.

ಸೂದ್ ಮತ್ತು ಅವರ ಪತ್ನಿ, ವಕೀಲ ಡಿ ಪಿ ಸಿಂಗ್ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ಮುಂಬೈನ ಜುಹುದಲ್ಲಿನ ಆರು ಅಂತಸ್ತಿನ ಶಕ್ತಿ ಸಾಗರ್ ಕಟ್ಟಡದಲ್ಲಿ ಯಾವುದೇ “ಅಕ್ರಮ ಅಥವಾ ಅನಧಿಕೃತ” ನಿರ್ಮಾಣವನ್ನು ತಾವು ಮಾಡಿಲ್ಲ ಎಂದು ಹೇಳಿಕೊಂಡಿದ್ದರು.

ಆದರೂ ಬಿಎಂಸಿ ಪರ ಹಿರಿಯ ವಕೀಲ ಅನಿಲ್ ಸಖಾರೆ, ಸೂದ್ ಅವರು “ಸುಂದರೀಕರಣ” ಎಂಬ ನೆಪದಲ್ಲಿ ಹೋಟೆಲ್ ಕೊಠಡಿಗಳನ್ನು ನಿರ್ಮಿಸಿದ್ದಾರೆ ಮತ್ತು ಅದರ ಪರವಾಗಿ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ ಎಂದು ವಾದಿಸಿದರು. ಅವರ ಮನವಿಯನ್ನು ವಜಾಗೊಳಿಸಬೇಕೆಂದು ಕೋರಿದ ಸಖಾರೆ, ವಸತಿ ಹೋಟೆಲ್ ನಡೆಸುವ ವಾಣಿಜ್ಯ ಚಟುವಟಿಕೆಯನ್ನು ಮುಂದುವರಿಸಲು ಸೂದ್ ಅವರನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಸದ್ಯ ಹೈಕೋರ್ಟ್ ಅಕ್ರಮ ಕಟ್ಟಡ ನಿರ್ಮಾಣ ನೋಟಿಸ್ ವಿರುದ್ಧ ನಟ ಸೋನು ಸೂದ್ ಅರ್ಜಿ ತಿರಸ್ಕರಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights