ಪುರಾತನ ಆಭರಣಗಳನ್ನು ತೊಟ್ಟ ಮಾಡೆಲ್‌ಗಳೊಂದಿಗೆ ರ್ಯಾಂಪ್ ವಾಕ್ ಮಾಡಿದ ಶಾಸಕಿ!
ಕೋವಿಡ್ 19 ಸೋಂಕು ಕಾಣಿಸಿಕೊಂಡ ನಂತರ ದೇಶದ ಮೊದಲ, ಅತಿ ದೊಡ್ಡ ಪ್ಯಾಷನ್ ಶೋ ನಗರದ ಅಶೋಕ್ ಲಲಿತ್ ನಲ್ಲಿ ಇದೇ 22 ರಿಂದ [ಶುಕ್ರವಾರ ಭಾನುವಾರ] ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ದೇಶದ ನೂರಕ್ಕೂ ಹೆಚ್ಚು ಪ್ರಮುಖ ಆಭರಣ ಸಂಸ್ಥೆಗಳಿಂದ ಒಂದೇ ವೇದಿಕೆಯಲ್ಲಿ ಪುರಾತನ, ಪಾರಂಪರಿಕ ಆಭರಣಗಳ ಮಾರಾಟ, ಪ್ರದರ್ಶನಕ್ಕೆ ವೇದಿಕೆ.ಇದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಜಿ ಮಿಸ್ ಇಂಡಿಯಾ ಡಾ. ಶೃತಿಗೌಡ ಮತ್ತಿತರರು ಜುವೆಲ್ಸ್ ಆಪ್ ಇಂಡಿಯಾದಿಂದ ಆಯೋಜಿಸುತ್ತಿರುವ ವಿಶಿಷ್ಟ ಆಭರಣಗಳನ್ನು ತೊಟ್ಟು ರ್ಯಾಂಪ್ ಹಾಕಿದ ಶಾಸಕಿ ಸೌಮ್ಯರೆಡ್ಡಿ ಹಾಕಿದರು.
ಟ್ರೆಂಡಿ ಜುವೆಲರ್ಸ್ ಗಳನ್ನು ಜವ್ವನೆಯರು ಪ್ರದರ್ಶಿಸಿದ್ದು ಗಮನ ಸೆಳೆಯಿತು. ಆಭರಣ ಮೇಳದ ಸಂಚಾಲಕ ಸಂದೀಪ್ ಬೇಕಲ್ ಈ ಕುರಿತು ಮಾಹಿತಿ ನೀಡಿ, ಕೊರೋನಾ ಸೋಂಕು ನಿವಾರಣೆಯಾದ ನಂತರ ನಡೆಯುತ್ತಿರುವ ದೇಶದ ಅತಿ ದೊಡ್ಡ ಆಭರಣದ ಮೇಳ ಇದಾಗಿದ್ದು, ನೂರಕ್ಕೂ ಹೆಚ್ಚು ಆಭರಣ ಸಂಸ್ಥೆಗಳು ಭಾಗವಹಿಸುತ್ತಿವೆ. ಆಭೂಣ್, ನೀಲಕಂಠ, ಪಂಚಕೇಸರಿ, ಎಂ.ಪಿ. ನೀಲಕಂಠ, ಶ್ರೀಗಣೇಶ್. ಆರ್ಟ್ ಇಂಡಿಯಾ ಜುವೆಲ್ಸ್, ಎಂ.ಎಸ್. ಸುಲ್ತಾನ್ ಮುಂತಾದ ಜ್ಯುವೆಲರಿ ಸಂಸ್ಥೆಗಳು ಪಾರಂಪರಿಕ, ವೈಶಿಷ್ಟ್ಯಪೂರ್ಣ, ವಿನೂತ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಕಲ್ಪಿಸಿವೆ ಸಾರ್ವಜನಿಕರಿ ಉಚಿತ ಪ್ರವೇಶ ಎಂದರು.
ಕೊರೋನಾ ನಂತರ ಆಭರಣ ಖರೀದಿ ಮತ್ತು ಮಾರಾಟ ವಲಯದಲ್ಲಿ ಹೊಸ ಆಯಾಮ ಸೃಷ್ಟಿಸಲು ಈ ಮೇಳ ಪೂರಕವಾಗಿದ್ದು, ದೇಶದ ಜನತೆ ಸಂಕಷ್ಟ ಸಂದರ್ಭದಲ್ಲೂ ತನ್ನ ಆಭರಣ ಪ್ರೀತಿ ಮುಂದುವರೆಸಿದ್ದು, ಹೂಡಕೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಈ ಮೇಳ ಆಯೋಜಿಸಲಾಗಿದೆ. ಕಳೆದ 20 ವರ್ಷಗಳಿಂದ ರಾಜ್ಯದ ಜನತೆಯ ಮನಗೆದ್ದಿರುವ ಜ್ಯುವೆಲ್ಸ್ ಆಫ್ ಇಂಡಿಯಾ ಆಯೋಜಿಸುತ್ತಿರುವ ಈ ಮೇಳಕ್ಕೆ ಬರುವವರು ಬರಿಗೈಲಿ ವಾಪಸ್ ಹೋಗುವುದಿಲ್ಲ ಎಂದು ಸಂದೀಪ್ ಬೇಕಲ್ ವಿಶ್ವಾಸ ವ್ಯಕ್ತಪಡಿಸಿದರು.
ಜ್ಯುವೆಲ್ಸ್ ಆಪ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ರಾಧಿಕ ಕುಮಾರ ಸ್ವಾಮಿ ಮೇಳ ಕುರಿತುಮಾಹಿತಿ ನೀಡಿ, ಆಭರಣಗಳ ಖರೀದಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಜ್ಯುವೆಲ್ಸ್ ಆಫ್ ಇಂಡಿಯಾ ಮಹಿಳೆಯರ ಮನಸ್ಸು ಮತ್ತು ಹೃದಯ ಗೆದ್ದ ಆಭರಣ ಸಂಸ್ಥೆಯಾಗಿದ್ದು, ಇಲ್ಲಿ ಆಯೋಜನೆಗೊಳ್ಳುತ್ತಿರುವ ಮೇಳದ ಬಗ್ಗೆ ಬೆಂಗಳೂರು ಹಾಗೂ ರಾಜ್ಯದ ಜನತೆ ಕಾತುರದಿಂದ ಕಾಯುತ್ತಿದ್ದಾರೆ ಎಂದರು.
ಈ ಮೇಳವನ್ನು ಶಾಸಕರಾದ ಸೌಮ್ಯ ರೆಡ್ಡಿ ಉದ್ಘಾಟಿಸಲಿದ್ದು, ವಿಜಯಲಕ್ಷ್ಮಿ, ಶಿಲ್ಪ ರೆಡ್ಡಿ, ಶೃತಿ ಪೆರಿಕಲ್ ಮುಂತಾದವರು ಭಾಗವಹಿಸುತ್ತಿದ್ದಾರೆ. ಮಿಸ್ ಇಂಡಿಯಾ ಶೃತಿ ಗೌಡ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಅತ್ಯಾಕರ್ಷಕ ಪ್ಯಾಷನ್ ಶೋ ಸಹ ಇರಲಿದೆ. ಪ್ರವೇಶ ಉಚಿತವಾಗಿದ್ದು, ಎಲ್ಲರೂ ಪಾಲ್ಗೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಸುದ : 72595 14859