ಬಿಜೆಪಿ ಹಿಟ್ಲರ್‌ ರಕ್ತದವರು, ಅವರು ರಾಷ್ಟ್ರ ಧ್ವಜವನ್ನೇ ಹಾರಿಸುತ್ತಿರಲಿಲ್ಲ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿಗರು ಹಿಟ್ಲರ್‌ ರಕ್ತದವರು, ಅವರು ತಮ್ಮ ಕಚೇರಿಯಲ್ಲಿ ರಾಷ್ಟ್ರ ಧ್ವಜವನ್ನೇ ಹಾರಿಸುತ್ತಿರಲಿಲ್ಲ ಎಂದು ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು (ಶನಿವಾರ) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರನ್ನು ಖಲಿಸ್ತನಿಗಳ ಎಂದು ಹೇಳುತ್ತಿರುವ ಬಿಜೆಪಿಗರು ಹಿಟ್ಲರ್ ರಕ್ತದವರು. ಅವರು ಬಿಜೆಪಿ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತಿರಲಿಲ್ಲ ಮತ್ತು ಗಾಂಧಿಜಿ ಫೋಟೋವನ್ನೂ ಇಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನೇ ಹಾರಿಸದೇ ಇದ್ದವರು. ಈಗ ರಾಷ್ಟ್ರಧ್ವಜ, ಖಲಿಸ್ತಾನ ಎಂದು ಮಾತನಾಡುತ್ತಿದ್ದಾರೆ. ಖಲಿಸ್ತಾನವನ್ನು ವಿರೋಧಿ ಇಂದಿರಾ ಗಾಂಧಿ ಪ್ರಾಣವನ್ನೇ ತೆತ್ತರು. ತಮಿಳುನಾಡಿನಲ್ಲಿ ರಾಜೀವ್ ಗಾಂಧಿ ಹುತಾತ್ಮರಾದರು. ಯುವಕರು ಇದೆಲ್ಲವನ್ನ‌ ನೆನೆಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಪಕ್ಷದ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರಿಗೆ ಸಬ್ಸಿಡಿ ನೀಡಿದ್ದೆವು. ಸಾಲಮನ್ನಾ ಮಾಡಿದ್ದೆವು. ಆದರೆ, ಈಗ ಕೇಂದ್ರ ಸರ್ಕಾರ ದೇಶದ ರೈತರ ವಿರುದ್ದ ಮೂರು ಕಾಯ್ದೆಗಳನ್ನು ತಂದಿದೆ. ಇವುಗಳ ವಿರುದ್ದ ರೈತರು ಹೋರಾಟ ಮಾಡಿತ್ತಿದ್ದಾರೆ. ಅವರನ್ನು ಖಲಿಸ್ತಾನಿಗಳು ಎಂದು ಸರ್ಕಾರ ಬಿಂಬಿಸುತ್ತಿರುವುದು ನಾಚಿಕೆ ಗೇಡಿನ ಸಂಗತಿ ಎಂದು ಹೇಳಿದ್ದಾರೆ.

ಬಿಜೆಪಿಗರು ನಮ್ಮ ಮಕ್ಕಳನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ. ಅವರ ಸಿದ್ದಾಂತಗಳನ್ನು ಹಿಮ್ಮೆಟ್ಟಬೇಕು. ಇಲ್ಲವಾದರೆ, ಸಂವಿಧಾನಕ್ಕೂ, ಸಮಾನತೆಯ ಆಶಯಕ್ಕೂ ಧಕ್ಕೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗಾಂಧಿಯನ್ನು ಕೊಂದ ಗೋಡ್ಸೆ ಒಬ್ಬ RSS ಭಯೋತ್ಸಾದಕ: ನಟ ಸಿದ್ದಾರ್ಥ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights