ತಾಯಿಯ ದೇಹವನ್ನು 10 ವರ್ಷಗಳ ಕಾಲ ಫ್ರೀಜರ್‌ನಲ್ಲಿಟ್ಟ ಜಪಾನ್ ಮಹಿಳೆ..!

ಮಗಳೊಬ್ಬಳು ತಾಯಿಯ ದೇಹವನ್ನು 10 ವರ್ಷಗಳ ಕಾಲ ಫ್ರೀಜರ್‌ನಲ್ಲಿ ಇಟ್ಟ ಭಯಾನಕ ಘಟನೆ ಜಪಾನ್ ನಲ್ಲಿ ನಡೆದಿದೆ.

48 ವರ್ಷದ ಯುಮಿ ಯೋಶಿನೊ ಬಂಧಿತ ಮಹಿಳೆ. ಈಕೆ 10 ವರ್ಷಗಳ ಹಿಂದೆ ತನ್ನ ತಾಯಿ ಮೃತಪಟ್ಟಿದ್ದರು ಮುಚ್ಚಿಟ್ಟು ಶವವನ್ನು ಫ್ರೀಜರ್‌ನಲ್ಲಿಟ್ಟಿದ್ದಾಳೆ. ತಮ್ಮ ಟೋಕಿಯೊ ಮನೆಯಿಂದ ತನ್ನನ್ನು ಹೊರ ಹಾಕುತ್ತಾರೆಂದು ಮಗಳು ತಾಯಿ ಸಾವನ್ನಪ್ಪಿದ ವಿಚಾರವನ್ನು ಮುಚ್ಚಿಟ್ಟಿರುವುದಾಗಿ ಪೋಲೀಸ್ ವಿಚಾರಣೆ ವೇಳೆ ಹೇಳಿದ್ದಾಳೆ.

ಯುಮಿ ವಾಸವಾಗಿರುವ ಮನೆಗೆ ಬಾಡಿಗೆ ಪಾವತಿಸಿರಲಿಲ್ಲ. ಅಧಿಕಾರಿಗಳು ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದಾಗ ಯುಮಿ ಹೊರ ಬಂದಿದ್ದಳು. ಮನೆಯ ಸ್ವಚ್ಛಗೊಳಿಸುವಾಗ ಕ್ಲೀನರ್ ಗೆ ಫ್ರೀಜರ್ ನಲ್ಲಿ ಶವ ಕಂಡಿದೆ. ಆಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ವೇಳೆ ತಪ್ಪಿಸಿಕೊಂಡಿದ್ದ ಎಂಎಸ್ ಯೋಶಿನೊ ಅವರನ್ನು ಟೋಕಿಯೊ ಬಳಿಯ ಚಿಬಾ ನಗರದ ಹೋಟೆಲ್‌ನಲ್ಲಿ ಶುಕ್ರವಾರ ಬಂಧಿಸಲಾಗಿದೆ.

ಘಟನೆ ಮುಚ್ಚಿಟ್ಟಿದ್ದು ಯಾಕೆ?

ತಾಯಿ ಮನೆಯಲ್ಲಿ ಯುಮಿ ವಾಸವಾಗಿದ್ದಳು. ಮೃತ ತಾಯಿಗೆ ಟೋಕಿಯೋ ಮಹಾನಗರ ಪಾಲಿಕೆಯ ವಸತಿ ಯೋಜನೆ ಅಡಿಯಲ್ಲಿ ಫ್ಲ್ಯಾಟ್ ನೀಡಲಾಗಿತ್ತು. ತನ್ನ ತಾಯಿ ಮೃತಪಟ್ಟ ವಿಚಾರ ತಿಳಿದರೆ ತನ್ನನ್ನು ಹೊರಹಾಕುತ್ತಾರೆಂದು ಸಾವಿನ ಸುದ್ದಿಯನ್ನು ಯುಮಿ ಯಾರಿಗೂ ಹೇಳಿಲ್ಲ.

ದೇಹವನ್ನು ಫ್ರೀಜರ್‌ ಫಿಟ್‌ಗೆ ಬಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಪ್ಪುಗಟ್ಟಿದ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ. ಮಹಿಳೆಯ ಸಾವಿಗೆ ಸಮಯ ಮತ್ತು ಕಾರಣವನ್ನು ನಿರ್ಧರಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights