ಆರ್ಯನ್ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ರೋಷನ್, ಕಂಗನಾ ರಣಾವತ್..!

ಮುಂಬೈನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ನಡೆಸಿದ ದಾಳಿಯಲ್ಲಿ ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಖಾನ್ ಅವರ ಪುತ್ರ ಸಿಕ್ಕಿಬಿದ್ದಿದ್ದು, ಈ ಬಗ್ಗೆ ಶೀಘ್ರ ತನಿಖೆ ನಡೆಸಲಾಗುತ್ತಿದೆ. ಇದರ ಮಧ್ಯೆ ಬಾಲಿವುಡ್ ನಟ ಹೃತಿಕ್ ರೋಷನ್ ಹೆಸರು ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಆರ್ಯನ್ ಖಾನ್ ಪರವಾಗಿ ನಿಂತಿದ್ದಾರೆ. ಹೃತಿಕ್ ಬೆಂಬಲದ ನಂತರ ಕಂಗನಾಕೂಡ ಆರ್ಯನ್ ಖಾನ್ ಗೆ ಬೆಂಬಲ ಸೂಚಿಸಿದ್ದಾರೆ.

ಆರ್ಯನ್ ಖಾನ್ ಈ ದಿನಗಳಲ್ಲಿ ಎನ್‌ಸಿಬಿಯ ವಶದಲ್ಲಿದ್ದಾರೆ. ಈ ಸಮಯದಲ್ಲಿ ಅನೇಕ ಸೆಲೆಬ್ರಿಟಿಗಳು ಆರ್ಯನನ್ನು ಸಮಾಧಾನಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಹೃತಿಕ್ ರೋಷನ್ ಕೂಡ ಮುಂದೆ ಬಂದಿದ್ದಾರೆ. ಅವರು ಆರ್ಯನ್ ಖಾನ್ ಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಬರೆದಿದ್ದಾರೆ. ಈ ಪೋಸ್ಟ್ ನೋಡಿದ ಕಂಗನಾ ಹೃತಿಕ್ ರೋಷನ್ ಬಗ್ಗೆ ಸುದೀರ್ಘವಾದ ಪೋಸ್ಟ್ ಬರೆದಿದ್ದಾರೆ.

ಕಂಗನಾ ಪೋಸ್ಟ್
ಕಂಗನಾ ರಣಾವತ್ ಪೋಸ್ಟ್‌ನಲ್ಲಿ, ‘ನಾವು ತಪ್ಪುಗಳನ್ನು ಮಾಡುತ್ತೇವೆ. ಇದರರ್ಥ ನಾವು ಅವನಿಗೆ ತಪ್ಪು ಮಾಡಲು ಬೆಂಬಲಿಸಿದ್ದೇವೆ ಎಂದಲ್ಲ. ಈ ವಾಕ್ಯವು ಆರ್ಯನಿಗೆ ಧೈರ್ಯ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದೇ ಸಮಯದಲ್ಲಿ  ಆರ್ಯನ್ ವಿರುದ್ಧ ತೆಗೆದುಕೊಳ್ಳುವ ಕ್ರಮಗಳಿಂದ ಅವರು ಕೆಲ ವಿಚಾರಗಳನ್ನು ಕಲಿಯುತ್ತಾರೆ. ಇದರಿಂದ ಅವನು ಹೊರಬಂದಾಗ ಏನನ್ನಾದರೂ ಕಲಿಯುತ್ತಾನೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಅವನು ಉತ್ತಮ ವ್ಯಕ್ತಿಯಾಗಿ ಹೊರಬರುತ್ತಾನೆ’ ಎಂದು ಬರೆದಿದ್ದಾರೆ.

ಜೊತೆಗೆ ಕಂಗನಾ, ‘ಆ ವ್ಯಕ್ತಿಯ ಬಗ್ಗೆ ನೀವು ಗಾಸಿಪ್ ಮಾಡದೇ ಇರುವುದು ಒಳ್ಳೆಯದು. ಏಕೆಂದರೆ ಆತನಿಗೆ ಈಗಾಗಲೇ ಕೆಟ್ಟ ಭಾವನೆ ಇದೆ. ನೀವು ಯಾರನ್ನಾದರೂ ಅಪರಾಧಿ ಎಂದು ಕರೆದಾಗ ಕೆಟ್ಟ ಪರಿಸ್ಥಿತಿ ಉಂಟಾಗುತ್ತದೆ. ಆದರೂ ಅವರ ಅಪರಾಧ ಇನ್ನೂ ಸಾಬೀತಾಗಿಲ್ಲ’ ಎಂದು ಬರೆದಿದ್ದಾರೆ.

kangana

ಆರ್ಯನ್ ಗೆ ಬೆಂಬಲ ನೀಡಿದ ಹೃತಿಕ್ ರೋಷನ್

ಹೃತಿಕ್ ರೋಷನ್ ಇತ್ತೀಚೆಗೆ ಆರ್ಯನ್ ಖಾನ್ ಪರವಾಗಿ ಒಂದು ದೊಡ್ಡ ಪೋಸ್ಟ್ ಶೇರ್ ಮಾಡಿದ್ದಾರೆ. “ನನ್ನ ಪ್ರೀತಿಯ ಆರ್ಯನ್, ಜೀವನವು ಒಂದು ವಿಶಿಷ್ಟವಾದ ಪ್ರಯಾಣವಾಗಿದೆ. ಇದು ಅದ್ಭುತವಾಗಿದೆ. ಏಕೆಂದರೆ ಇದು ಅನಿಶ್ಚಿತತೆಗಳಿಂದ ಕೂಡಿದೆ. ಅದು ನಿನಗೆ ಸದ್ಯ ತೊಂದರೆ ನೀಡಬಹುದು. ಆದರೆ ದೇವರು ಕರುಣಾಮಯಿ ಎಂದು ನೆನಪಿಡು. ಆತ ಕಷ್ಟಕರ ಮತ್ತು ಸವಾಲುಗಳನ್ನು ಬಲಿಷ್ಠ ಜನರಿಗೆ ಮಾತ್ರ ನೀಡುತ್ತಾನೆ. ಈ ಒತ್ತಡವನ್ನು ನಿಭಾಯಿಸುವುದನ್ನು ಕಲಿಯಲು ದೇವರು ನಿಮ್ಮನ್ನು ಮಾತ್ರ ಆಯ್ಕೆ ಮಾಡಿದನೆಂದು ತಿಳಿದಿರಲಿ ‘ ಎಂದು ಬರೆದಿದ್ದಾರೆ.

‘ನೀನು ಕೂಡ ಇದನ್ನು ಅನುಭವಿಸುತ್ತಿರಬೇಕು. ನಿಮ್ಮಲ್ಲಿರುವ ನಾಯಕನನ್ನು ಹೊರತರಲು ಕೋಪ, ಗೊಂದಲ ಮತ್ತು ಅಸಹಾಯಕತೆ, ಇವೆಲ್ಲವೂ ಅಗತ್ಯ. ನೆನಪಿಡು ಈ ಎಲ್ಲಾ ವಿಷಯಗಳು ನಿಮ್ಮಲ್ಲಿರುವ ಒಳ್ಳೆಯ ವಿಷಯಗಳನ್ನು ಸಹ ಸುಡುತ್ತದೆ (ದಯೆ, ಪ್ರೀತಿ, ಸಹಾನುಭೂತಿ). ಆದರೆ ಎಲ್ಲವೂ ಮಿತಿಯವರೆಗೆ ಮಾತ್ರ. ಇದೆಲ್ಲವನ್ನೂ ನೀನು ಹೋರಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಸದ್ಯ ಅವಶ್ಯಕವಾಗಿದೆ’ ಎಂದು ಹೃತಿಕ್ ರೋಷನ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights