ಸಭಾ ಮರ್ಯಾದೆ ಉಲ್ಲಂಘಿಸಿದ ಸುವರ್ಣ ನ್ಯೂಸ್‌: ವರದಿಗಾರರನ್ನು ಹೊರಗಟ್ಟಿದ ಹೋರಾಟಗಾರರು!

ಗಾಂಧಿ ಹುತಾತ್ಮ ದಿನದಂದು ಬೆಂಗಳೂರಿನಲ್ಲಿ ರೈತ ಹೋರಾಟಗಾರರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ, ಪ್ರತಿಭಟನೆಯ ಮಧ್ಯ ಬಂದು ದುರ್ವರ್ತನೆ ತೋರಿದ ಸುವರ್ಣ ನ್ಯೂಸ್‌ ವರದಿಗಾರರನ್ನು ಹೋರಾಟಗಾರರು ಪ್ರತಿಭಟನಾ ಸ್ಥಳದಿಂದ ಹೊರಕ್ಕೆ ಕಳಿಸಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಶನಿವಾರ ಉಪವಾಸ ಸತ್ಯಾಗ್ರಹ ನಡೆಸಲು ಕರೆಕೊಟ್ಟಿದ್ದರು. ರೈತರ ಕರೆಗೆ ಬೆಂಬಲ ಸೂಚಿಸಿ ರಾಜ್ಯದಲ್ಲೂ ಸತ್ಯಾಗ್ರಹ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.

ಈ ವೇಳೆ, ಸತ್ಯಾಗ್ರಹವನ್ನು ಉದ್ದೇಶಿಸಿ  ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ಮಾತನಾಡುತ್ತಿದ್ದರು. ಅವರು ಮಾತನಾಡುತ್ತಿದ್ದಾಗಲೇ ಮಧ್ಯ ಪ್ರವೇಶಿಸಿ ಸುವರ್ಣ ನ್ಯೂಸ್‌ನ ವರದಿಗಾರ್ತಿ ತಮಗೆ ಬೈಟ್‌ ಬೇಕು ಎಂದು ಹೇಳಿ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಭಾಷಣ ಮುಗಿದ ನಂತರ ಬೈಟ್‌ ತೆಗೆದುಕೊಳ್ಳಿ ಎಂದರೂ ಕೇಳದೆ, ವರದಿಗಾರ್ತಿ ದುಂಡಾವರ್ತನೆ ತೋರಿಸಿದ್ದಾರೆ ಎಂದು ಪ್ರತಿಭಟನಾಕಾರರು ಅರೋಪಿಸಿದ್ದಾರೆ.

ಇದನ್ನೂ ಓದಿ: ಬಾಯ್ಕಾಟ್ ಅಂಬಾನಿ-ಅದಾನಿ; ಕಾರ್ಪೊರೇಟ್‌ಗಳನ್ನು ಸಮರ್ಥಿಸಿಕೊಳ್ಳುತ್ತಿರುವುದೇಕೆ ಸುವರ್ಣ ನ್ಯೂಸ್‌?

ಅವರ ವರ್ತನೆಯಿಂದ ವೇದಿಕೆ ಮೇಲಿದ್ದ ಗಣ್ಯರಿಗೆ ಮುಜುಗರವಾಗಿದ್ದು, ಕಾರ್ಯಕರ್ತರು ವರದಿಗಾರರನ್ನು ತಡೆದು ಗೋದಿ ಮೀಡಿಯಾ ಗೋ ಬ್ಯಾಕ್‌ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಪೊಲೀಸರು ಬಂದು ವರದಿಗಾರ್ತಿಯನ್ನು ಕರೆದುಕೊಂಡು ಹೋಗುವವರೆಗೂ ಆಕೆ ಅಲ್ಲೇ ನಿಂತಿದ್ದರೂ, ಎಷ್ಟೇ ಹೇಳಿದರೂ ಕೇಳಲಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ನಮ್ಮ ಕಣ್ಣ ಮುಂದೆಯೇ ಈ ರೀತಿ ನಡೆಯುತ್ತಿದೆ. ಇನ್ನು ದೆಹಲಿಯಲ್ಲಿ ಇಂತಹ ಮತ್ತು ಇದಕ್ಕೂ ಡೇಂಜರಸ್ ಆದ ಕುತಂತ್ರಗಳನ್ನು ಮಾಧ್ಯಮಗಳು ಯಾವೆಲ್ಲಾ ರೀತಿ ಮಾಡಿರಬಹುದು ಊಹಿಸಿ ನೋಡಬೇಕು. ಹಿಂದೆಲ್ಲಾ ಪ್ರತಿಭಟನೆಗಳು ನಡೆದಾಗ ಸರ್ಕಾರವನ್ನು ಮಾಧ್ಯಮಗಳು ಪ್ರಶ್ನೆ ಮಾಡುತ್ತಿದ್ದವು. ಹಾಗೆ ಮಾಡುತ್ತಾ ಜನಪರವಾಗಿ ನಿಲ್ಲುತ್ತಿದ್ದವು. ಆದರೆ ಇದೀಗಿ ಮಾಧ್ಯಮಗಳಿಗೆ ಏನಾಗಿದೆ? ಮಾಧ್ಯಮಗಳು ತಮ್ಮ ನೈತಿಕತೆಯನ್ನು ಮಾರಿಕೊಂಡಿವೆ. ಜಾಪ್ರಭುತ್ವದ ಕಾವಲು ನಾಯಿ ಆಗಿರಬೇಕಿದ್ದ ಮಾಧ್ಯಮವು ಇಂದು ಸರ್ಕಾರದ ಸಾಕು ನಾಯಿಗಳಂತೆ ವರ್ತಿಸುತ್ತಿವೆ ಎಂದು ಕೆವಿಎಸ್‌ನ ಸಂಚಾಲಕ ಸರೋವರ್ ಬೆಂಕಿಕೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈತ ವಿರೋಧಿ ಧೋರಣೆ ತಳೆದ ಸುವರ್ಣ ನ್ಯೂಸ್‌; ರೈತ ಹೋರಾಟದ ಬಗ್ಗೆ ಜನರ ದಿಕ್ಕು ತಪ್ಪಿಸಿದ್ದು ಹೀಗೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights