‘ಗೋಮಾಂಸ ಹಬ್ಬ’ಕ್ಕೆ ಅಡ್ಡಿ ಪ್ರಕರಣ: BJP ಶಾಸಕನಿಗೆ ಒಂದು ವರ್ಷ ಜೈಲು ಶಿಕ್ಷೆ!

ತೆಲಂಗಾಣ ರಾಜ್ಯದ ಬಿಜೆಪಿ ಶಾಸಕ ರಾಜಾ ಸಿಂಗ್‌ ಅವರಿಗೆ ನಾಂಪಲ್ಲಿಯ ವಿಶೇಷ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ.

‘ಗೋಮಾಂಸ ಹಬ್ಬ’ದ ವಿವಾದಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಹಿಂದೆ ಬಿಜೆಪಿ ಶಾಸಕ ರಾಜಾ ಸಿಂಗ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇಂದು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿರುವ ಕೋರ್ಟ್‌, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

2015 ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ‘ಗೋಮಾಂಸ ಹಬ್ಬ’ದ ಆಚರಣೆಯ ಸಂದರ್ಭದಲ್ಲಿ ಹಬ್ಬಕ್ಕೆ ಅಡ್ಡಿಪಡಿಸಲು ಯತ್ನ, ಪೊಲೀಸರಿಗೆ ಬೆದರಿಕೆ ವೊಡ್ಡಿ, ಕೆಲಸಕ್ಕೆ ಅಡಚಣೆ ಮಾಡಿದ್ದಾರೆ ಎಂದು ರಾಜಾಸಿಂಗ್‌ ವಿರುದ್ಧ ಬೊಲ್ಲಾರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು, ನ್ಯಾಯಾಲಯವು ಇಂದು ಶಾಸಕನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಶಿಕ್ಷೆಯ ಪ್ರಮಾಣ ಘೋಷಿಸಿ ತೀರ್ಪು ನೀಡದ ಕೂಡಲೇ, ಶಾಸಕ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಜಾಮೀನು ನೀಡಿರುವ ನ್ಯಾಯಾಲಯವು, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿದೆ.

Read Also: ಬಂಗಾಳ ಪೊಲೀಸ್‌ ಅಧಿಕಾರಿ ರಾಜೀನಾಮೆ; ಕಾರಣವಾಯ್ತಾ ಮೂವರು BJP ಮುಖಂಡರ ಬಂಧನ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights