ಮತ್ತೆ ಸ್ತಬ್ಧವಾಗುತ್ತಾ ಸಾರಿಗೆ..? : ಕೊಟ್ಟ ಮಾತು ಮರೆತ ಸರ್ಕಾರದ ವಿರುದ್ಧ ತಿರುಗಿಬಿದ್ದ ನೌಕರರು!
ಸರಿಯಾಗಿ ಸಂಬಳವಿಲ್ಲದೇ ಸಾರಿಗೆ ನೌಕರರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಕೊಟ್ಟ ಮಾತು ಮರೆತ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
ಹೌದು… ಮಕ್ಕಳ ಶಾಲೆಯ ಶುಲ್ಕ ಕಟ್ಟಲು ಸಾಧಯವಾಗಿದೇ, ಕೋವಿಡ್ ನಿಂದಾಗಿ ಸರಿಯಾಗಿ ದುಡಿಮೆನೂ ಸಾಧ್ಯವಾಗದೇ ಸಾರಿಕೆ ನೌಕರರ ಆರ್ಥಿಕ ಸ್ಥಿತಿ ತೀರಾ ಬಾಡಿ ಹೋಗಿದೆ. ಆ ರಜೆ ಈ ರಜೆ ಕುಂಟು ನೆಪಗಳನ್ನ ಹೇಳುತ್ತ ಕೊಡಬೇಕಾದ ಸಂಬಳ ಕಡಿತಗೊಳಿಸಲಾಗುತ್ತಿದೆ. ಕಳೆದ ಡಿಸೆಂಬರ್ ಅರ್ಧ ಸಂಬಳ ಕೈಸೇರಿದರೆ, ಜನವರಿಯ ಸಂಬಳದ ಬಗ್ಗೆ ಮಾತೇ ಇಲ್ಲ. ಹೀಗಾದರೆ ಮಕ್ಕಳನ್ನು ಶಾಲೆಗೆ ಸೇರಿಸುವುದು ಹೇಗೆ..? ಎನ್ನುವ ಚಿಂತೆಯಲ್ಲಿ ಸಾರಿಗೆ ನೌಕರರು ಮತ್ತೆ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಬಂದ್ ಮಾಡುವ ಯೋಚನೆಯಲ್ಲಿದ್ದಾರೆ.
ಕಳೆದ ಬಾರಿ ಮುಷ್ಕರ ಮುಗಿದು 45 ದಿವಸ ಆಯಿತು ಆದರೂ ಇಲ್ಲಿವರೆಗೂ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಡಿ11-14ರವೆರೆಗೆ ನಡೆದ ಮುಷ್ಕರದಲ್ಲಿ ಇಟ್ಟು 10 ಬೇಡಿಯಲ್ಲಿ ಸರ್ಕಾರ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿಕೆ ನೀಡಿ ಮನವೊಲಿಸಿತ್ತು. ಆದರೆ ಇದುವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ. ಮಾತ್ರವಲ್ಲದೇ ಕೊಡಬೇಕಾದ ಸಂಬಳ ಕೈ ಸೇರಿಲ್ಲ. ಮುಷ್ಕರದ ಮುಂದಾಳತ್ವ ಹೊಂದಿದ ನಾಯಕರಿಗೆ ಮೋಸ ಮಾಡುತ್ತಿದ್ದಾರೆ. ಅವರಿಗೆ ಸಂಬಳ ಕೊಡದೆ ಅಮಾನತ್ತು ಮಾಡಲಾಗಿದೆ. ಮುಷ್ಕರದಲ್ಲಿ ಮುಂದಾಳತ್ವ ವಹಿಸಿದವರನ್ನು ಗುರುತಿಸಿ ಅವರ ಕೈಲಿ ಕೆಲಸ ಮಾಡಿಸಿಕೊಂಡು ಅವರಿಗೂ ಸಂಬಳ ಕೊಡುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಈಗಾಗಲೇ 30 ಜನ ಅಮಾನತ್ತಾಗಿದ್ದಾರೆ.
ಹೀಗಾಗಿ ಇಂದು ಸಾರಿಗೆ ನೌಕರರ ಸಭೆ ನಡೆಯಲಿದ್ದು ಮುಂದಿನ ತೀರ್ಮಾನ ನಿರ್ಧರಿಸಲಿದ್ದಾರೆ. ಒಂದು ವೇಳೆ ಮತ್ತೆ ಸಾರಿಗೆ ಸ್ತಬ್ಧವಾದರೆ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವೇ ಇಲ್ಲ.