ಮಹಾರಾಷ್ಟ್ರ ಠಾಕ್ರೆ ಸರ್ಕಾರ ಅಭದ್ರ? ಮಧ್ಯಂತರ ಚುನಾವಣೆಗೆ NCP ಸಿದ್ದತೆ?

ಮಹಾರಾಷ್ಟ್ರದಲ್ಲಿ ಎನ್‌ಸಿಪಿ ನಾಯಕರು ‘ಪರಿವಾರ್‌ ಸಂವಾದ್ ಯಾತ್ರೆ’ ನಡೆಸುತ್ತಿದ್ದಾರೆ. ಇದು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಬಹುದು, ಅದಕ್ಕಾಗಿ ಎನ್‌ಸಿಪಿ ಸಿದ್ದತೆ ನಡೆಸುತ್ತಿರಬಹುದು ಎಂದು ಮಹಾರಾಷ್ಟ್ರ ರಾಜಕೀಯ ತಜ್ಞರಲ್ಲಿ ಅಭಿಪ್ರಾಯ-ಪ್ರಶ್ನೆಗಳು ವ್ಯಕ್ತವಾಗುತ್ತಿವೆ.

ಎನ್‌ಸಿಪಿ ಮಹಾರಾಷ್ಟ್ರದ ಅಧ್ಯಕ್ಷ ಮತ್ತು ರಾಜ್ಯ ಸಚಿವ ಜಯಂತ್ ಪಾಟೀಲ್ ಅವರು ರಾಜ್ಯದ್ಯಾಂತ ಯಾತ್ರೆ ನಡೆಸುತ್ತಿದ್ದಾರೆ. ಹೀಗಾಗಿ, ಮತದಾರರನ್ನು ಒಗ್ಗೂಡಿಸಲು ಈ ಯಾತ್ರೆ ನಡೆಯುತ್ತಿರಬಹುದು. ಸಿಎಂ ಉದ್ಧವ್‌ ಠಾಕ್ರೆ ನೇತೃತ್ವದ ಮಹಾವಿಕಾಸ್‌ ಅಘಾಡಿ ಸರ್ಕಾರ ಪತನವಾಗುತ್ತಾ ಎಂಬ ಸಂದೇಹಗಳು ಹೆಚ್ಚಾಗಿವೆ.

ಎನ್‌ಸಿಪಿಯ  ರಾಜಕೀಯ ನಡೆಯ ಬಗ್ಗೆ ಹಲವಾರು ರಾಜಕೀಯ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಎನ್‌ಸಿಪಿ ಮೊದಲೇ ತನ್ನ ವೇದಿಕೆಯನ್ನು ಸಿದ್ಧಪಡಿಸುತ್ತಿರಬಹುದು ಎಂದು ಊಹಾಪೋಹಗಳು ಎದ್ದಿವೆ.

ಈ ಊಹಾಪೋಹಗಳಿಗೆ ತೆರೆ ಎಳೆದಿರುವ ಜಯಂತ್‌ ಪಾಟೀಲ್, “ನಮ್ಮ ರಾಷ್ಟ್ರಾಧ್ಯಕ್ಷ ಶರದ್ ಪವಾರ್ ಅವರು ಚುನಾವಣೆಗಳು ಇರಲಿ ಅಥವಾ ಇಲ್ಲದಿರಲಿ, ರಾಜಕೀಯ ನಾಯಕರು ಯಾವಾಗಲೂ ಜನರೊಂದಿಗೆ ಇರಬೇಕು ಎಂದು ನಮಗೆ ಕಲಿಸಿದ್ದಾರೆ. ಮಹಾ ವಿಕಾಸ್ ಅಘಾಡಿ ಸರ್ಕಾರವು ಒಂದು ವರ್ಷವನ್ನು ಪೂರೈಸಿದೆ. ಆದ್ದರಿಂದ ನಾವು ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯೆ ಸಂಗ್ರಹಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿಯು ತನ್ನ ನೆಲೆ ಕಳೆದುಕೊಳ್ಳುತ್ತಿದೆ, ಆದ್ದರಿಂದ ಮಹರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮಹಾ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿಯು ತನ್ನ ಮತಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಎನ್‌ಸಿಪಿ ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Read Also: ರಾಜಸ್ಥಾನದ 50ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳು ಕಾಂಗ್ರೆಸ್‌ ತೆಕ್ಕೆಗೆ; BJPಗೆ ಭಾರೀ ಮುಖಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights