ಬೆಳಗಾವಿಯಲ್ಲಿ ಕೊರೊನಾ ಲಸಿಕೆಯಿಂದಾಗಿ ಮೃತಪಟ್ರಾ ಆಶಾ ಕಾರ್ಯಕರ್ತೆ..?

ಬೆಳಗಾವಿಯಲ್ಲಿ ಆಶಾ ಕಾರ್ಯಕರ್ತೆಯೊರ್ವರು ಕೊರೊನಾ ಲಸಿಕೆಯಿಂದಾಗಿ ಮೃತಪಟ್ಟಿದ್ದಾರೆಂಬ ಸುದ್ದಿಗಳಿಗೆ ಆರೋಗ್ಯ ಇಲಾಖೆ ತೆರೆ ಎಳೆದಿದೆ.

ಇದೇ ತಿಂಗಳು 3ರಂದು ನಿಪ್ಪಾಣಿ ತಾಲ್ಲೂಕಿನ ಗಲಟ್ಗಾ ಗ್ರಾಮದ ನಿವಾಸಿಯಾದ ಆಶಾ ಕಾರ್ಯಕರ್ತೆ ಮೃತಪಟ್ಟಿದ್ದಳು. ಆದರೆ ಈಕೆ ಕೆಲ ಸಮಯದಿಂದ ಬೇರೆ ಕಾಯಿಲೆಯಿಂದ ಬಳಲುತ್ತಿದ್ದಳು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಮಾತ್ರವಲ್ಲದೇ ಕೊರೊನಾ ಲಸಿಕೆ ಹಾಕಿದ ಎರಡು ದಿನಗಳಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಆದರೆ ಮೃತ ಕಾರ್ಯಕರ್ತೆಯಲ್ಲಿ ಅಂತಹ ಬದಲಾವಣೆಗಳು ಕಾಣಿಸಿಕೊಂಡರಲಿಲ್ಲ. ಆಕೆ ನಿಯೋಜನೆಯಂತೆ ಕೆಲಸ ಮಾಡಿದ್ದು, ಸಮೀಕ್ಷೆಗಳು ಮತ್ತು ಇತರ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ ಎಂದು ಆರ್ ಸಿಎಚ್ ಅಧಿಕಾರಿ ಡಾ. ಐ ಪಿ ಗಡದ್ ಹೇಳಿದ್ದಾರೆ.

ಈಕೆಗೆ ಜ 22 ರಂದು ಗಲಟ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡಲಾಗಿತ್ತು. ಜ 30 ರಂದು ಆಕೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವಾಗಲೇ ಫೆ 3 ರಂದು ಮೃತಪಟ್ಟಿದ್ದಾರೆ. ತಲೆನೋವು ಮತ್ತು ಇಂತಹುದೇ ಕಾಯಿಲೆ ಆಕೆ ಬಳಲುತ್ತಿದ್ದರು, ಪ್ರತಿ ಮೂರು ತಿಂಗಳಿಗೊಮ್ಮೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬ ಸದಸ್ಯರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಅವರು ಮೆದುಳಿನಲ್ಲಿ ರಕ್ತಸ್ರಾವದಿಂದಾಗಿ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights